ದುಬೈ: ಯಾವುದೇ ಸಾಧಕನ ಹಿಂದೆ ನೂರಾರು ಸಂಕಷ್ಟದ ದಿನಗಳು ಇರುತ್ತವೆ. ಜೀವನದಲ್ಲಿ ಸಾಧನೆ ಮಾಡಿದಾಗ, ಸಾಧನೆ ಕುರಿತು ಮೆಲುಕು ಹಾಕುವಾಗ ಆ ದಿನಗಳು ನೆನಪಾಗುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ದುಬೈನಲ್ಲಿ ನಡೆದ ಅವಾರ್ಡ್ ಫಂಕ್ಷನ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಹಾಗೆಯೇ, ಕಣ್ಣಿರು (Ranveer Singh Cries) ಹಾಕಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಫಿಲಂ ಫೇರ್ ಮಿಡಲ್ ಈಸ್ಟ್ ಅಚೀವರ್ಸ್ ನೈಟ್ (FFME 2022) ಕಾರ್ಯಕ್ರಮದಲ್ಲಿ ಭಾಗವಹಿಸಿ, ದಶಕದ ಸೂಪರ್ ಸ್ಟಾರ್ (ಸೂಪರ್ ಸ್ಟಾರ್ ಆಫ್ ದಿ ಡಿಕೆಡ್) ಪ್ರಶಸ್ತಿ ಸ್ವೀಕರಿಸಿದರು. ಇದಾದ ಬಳಿಕ ಕಷ್ಟದ ದಿನಗಳನ್ನು ನೆನೆದ ಅವರು, ಅವುಗಳನ್ನು ತಮ್ಮ ತಂದೆಗೂ ನೆನಪಿಸಿದರು. “ನಿಮಗೆ ನೆನಪಿದೆಯಾ ಪಾಪಾ, 12 ವರ್ಷಗಳ ಹಿಂದೆ ಸಿನಿಮಾದಲ್ಲಿ ನಟಿಸಲು ನಾನೊಂದು ಪ್ರೊಫೈಲ್ ತಯಾರಿಸಬೇಕಿತ್ತು. ಇದಕ್ಕೆ 50 ಸಾವಿರ ರೂ. ಖರ್ಚಾಗುತ್ತಿತ್ತು. ಇಷ್ಟು ಹಣ ಕೊಡಲು ನಿಮಗೆ ಕಷ್ಟವಾಗುತ್ತಿತ್ತು” ಎಂದು ಹೇಳುತ್ತಲೇ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.
ದುಬೈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಜಾಹ್ನವಿ ಕಪೂರ್, ಗೋವಿಂದ, ಸನ್ನಿ ಲಿಯೋನ್ ಸೇರಿ ಹಲವರು ಭಾಗವಹಿಸಿದ್ದರು. ಅಲ್ಲದೆ, ರಣವೀರ್ ಸಿಂಗ್ ತಂದೆ ಜಗಜೀತ್ ಸಿಂಗ್ ಭವಾನಿ ಹಾಗೂ ಅಂಜು ಭವಾನಿ ಅವರೂ ಭಾಗವಹಿಸಿದ್ದರು.
ಇದನ್ನೂ ಓದಿ | ರಣವೀರ್ ಸಿಂಗ್ ನಗ್ನ ಚಿತ್ರ ವಿವಾದ : ಟ್ವಿಟರ್‌ನಲ್ಲಿ ಬಟ್ಟೆ ದಾನ ಅಭಿಯಾನ, RGV ಟ್ವೀಟ್‌ನಲ್ಲಿ ಹೇಳಿದ್ದೇನು?