ರಾಯ್ಪುರ : ಛತ್ತೀಸ್ಗಢದ ಬಿಜೆಪಿ ನಾಯಕ ಹಾಗೂ ಜಂಜ್ಗಿರ್ ಚಂಪಾ ಕ್ಷೇತ್ರದ ಶಾಸಕ ನಾರಾಯಣ್ ಚಾಂದೇಲಾ ಅವರ ಪುತ್ರ ಪಲಾಶ್ ಚಾಂದೇಲಾ ವಿರುದ್ಧ ಗುರುವಾರ ಅತ್ಯಾಚಾರ ಪ್ರಕರಣ (Sexual Assault) ದಾಖಲಾಗಿದೆ. ತಮ್ಮ ಮೇಲೆ ಸತತವಾಗಿ ಹಲವರು ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಲಾಶ್ ಚಾಂದೇಲಾ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟಿದ್ದಾರೆ. ಗರ್ಭಪಾತ ಕೂಡ ಮಾಡಿಸಿದ್ದಾರೆ ಎಂಬುದಾಗಿ ಮಹಿಳೆ ದೂರು ನೀಡಿದ್ದರು. ಅದರ ಪ್ರಕಾರ ಕ್ರಮ ಕೈಗೊಂಡ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪುತ್ರನ ಮೇಲೆ ಪ್ರಕರಣ ದಾಖಲಾಗಿರುವ ಕುರಿತು ನಾರಾಯಣ ಚಾಂದೇಲಾ ಅವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ನಾಯಕರು ನಾರಾಯಣ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | sexual assault: ಬಸ್ ನಿಲ್ದಾಣದಲ್ಲಿ ರಾತ್ರಿ ನಿಂತಿದ್ದ ಯುವತಿಯ ಕರೆದೊಯ್ದ ಯುವಕರಿಂದ ಅತ್ಯಾಚಾರ