Site icon Vistara News

ಹಿಂದು ಹುಡುಗನ ಕುತ್ತಿಗೆಗೆ ಬೆಲ್ಟ್​​ ಕಟ್ಟಿ, ನಾಯಿಯಂತೆ ನಡೆಸಿಕೊಂಡ ಮುಸ್ಲಿಮರು; ಮನೆ ಧ್ವಂಸಕ್ಕೆ ಹೊರಟ ಬುಲ್ಡೋಜರ್​

Madhya Pradesh home minister And Accused

#image_title

ಭೋಪಾಲ್​: ವ್ಯಕ್ತಿಯೊಬ್ಬನ ಕುತ್ತಿಗೆಗೆ ಹಗ್ಗ ಕಟ್ಟಿ, ಥಳಿಸಿದ್ದಲ್ಲದೆ, ಅವನ ಬಳಿ ‘ನಾಯಿಯಂತೆ ಬೊಗಳು’ ಎಂದು ಹೇಳಿದ ಮೂವರ ವಿರುದ್ಧ ಮಧ್ಯಪ್ರದೇಶ ಸರ್ಕಾರ (Madhya Pradesh Government) ಕಠಿಣ ಕ್ರಮಕ್ಕೆ ಮುಂದಾಗಿದೆ. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (NSA-National Security Act)ಯಡಿ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಆರೋಪಿಗಳ ಮನೆ ಧ್ವಂಸ (Raze Houses) ಮಾಡಲು ಶೀಘ್ರವೇ ಬುಲ್ಡೋಜರ್​ (Bulldozer Action)ಹೋಗಲಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್​ ಮಿಶ್ರಾ ಹೇಳಿದ್ದಾರೆ.

ಮೂವರು ಯುವಕರು ಸೇರಿ, ಮತ್ತೊಬ್ಬನಿಗೆ ಕುತ್ತಿಗೆಗೆ ಹಗ್ಗ ಕಟ್ಟಿದ್ದಲ್ಲದೆ, ಅವನ ಬಳಿ ನಾಯಿಯಂತೆ ಬೊಗಳುವಂತೆ ಹೇಳುತ್ತಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕೃತ್ಯವನ್ನು ತೀಕ್ಷ್ಣವಾಗಿ ಖಂಡಿಸಿರುವ ಗೃಹ ಸಚಿವ ನರೋತ್ತಮ್​ ಮಿಶ್ರಾ ‘ನಾನು ವಿಡಿಯೊ ನೋಡಿದೆ. ಮನಸ್ಸಿಗೆ ತುಂಬ ಖೇದವಾಯಿತು. ಮನುಷ್ಯನನ್ನು, ಮನುಷ್ಯರೇ ಹೀಗೆ ನಡೆಸಿಕೊಳ್ಳುವುದು ಎಷ್ಟು ಸರಿ? ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಘಟನೆ 4-5 ತಾಸಲ್ಲೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗಇದೆ. ಇನ್ನು 24ಗಂಟೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭೋಪಾಲ್ ಪೊಲೀಸ್​ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆಯ ವಿಡಿಯೊ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಅಲ್ಲೊಬ್ಬ ಯುವಕ ರಸ್ತೆ ಮೇಲೆ ಕುಕ್ಕರಗಾಲು ಹಾಕಿ ಕುಳಿತುಕೊಂಡಿದ್ದಾನೆ. ಇನ್ನು ಐವರು ಸೇರಿಕೊಂಡು ಅವನನ್ನು ಹಿಂಸೆ ಮಾಡುತ್ತಿದ್ದಾರೆ. ಅವನ ಕುತ್ತಿಗೆಗೆ ಹಗ್ಗ/ಬೆಲ್ಟ್​ ಕಟ್ಟಿದ್ದಲ್ಲದೆ, ನಾಯಿಯಂತೆ ಆಡು, ನಾಯಿಯಂತೆ ಬೊಗಳು ಎಂದು ಅವನನ್ನು ಜೋರಾಗಿ ಬೈಯುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿತ್ತು. ಅದರಲ್ಲಿ ಮೂವರು ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಆರೋಪಿಗಳನ್ನು ಫೈಜಾನ್​, ಬಿಲಾಲ್​, ಸಮೀರ್​, ಮುಫಿದ್​ ಮತ್ತು ಸಾಹಿಲ್ ಎಂದು ಗುರುತಿಸಲಾಗಿದ್ದು, ಇವರಿಂದ ಥಳಿತಕ್ಕೆ ಒಳಗಾದವ ವಿಜಯ್​ ರಾಮಚಂದ್ರಾನಿ ಎನ್ನಲಾಗಿದೆ. ಹೀಗೆ ಮುಸ್ಲಿಮ್ ಹುಡುಗರು ಹಿಂದು ಹುಡುಗನನ್ನು ಹಿಂಸಿಸಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತನ್ನನ್ನು ಇಸ್ಲಾಂ ಗೆ ಮತಾಂತರ ಮಾಡಲು ಯತ್ನಿಸಿದ್ದಾರೆ, ನಾನು ಒಪ್ಪದ ಕಾರಣಕ್ಕೆ ಹೀಗೆ ಚಿತ್ರಹಿಂಸೆ ಮಾಡಿದ್ದಾರೆ ಎಂದು ವಿಜಯ್​ ಪೊಲೀಸ್​​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: NIA Raid: ಮಧ್ಯಪ್ರದೇಶದಲ್ಲಿ ಐಸಿಸ್‌ ಉಗ್ರರ ಜಾಲ ಬಯಲು; ಮಸೀದಿಗಳಲ್ಲೇ ಸಂಚು ರೂಪಿಸುತ್ತಿದ್ದ ಮೂವರ ಬಂಧನ

Exit mobile version