ನವದೆಹಲಿ: ಚಿಲ್ಲರೆ ಹಣದುಬ್ಬರವು ಹೆಚ್ಚಾಗಿರುವುದರ ಹೊರತಾಗಿ ಮತ್ತು ಯುಎಸ್ ಫೆಡರಲ್ ರಿಸರ್ವ್ ಇನ್ನೂ ಸ್ವಲ್ಪ ಸಮಯದವರೆಗೆ ಕಠಿಣ ನಿಲುವು ಉಳಿಸಿಕೊಳ್ಳಲು ನಿರ್ಧರಿಸಿರುವುದರಿಂದ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳ ಆರಂಭದಲ್ಲಿ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಸತತ ನಾಲ್ಕನೇ ಬಾರಿಗೆ ರೆಪೊರೇಟ್ ಹಚ್ಚಳ ಮಾಡದಿರುವ ಸಾಧ್ಯತೆಗಳಿವೆ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಸಾಲಗಳ ಮೇಲಿನ ಬಡ್ಡಿಯು (Intrest Rate) ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗಿದೆ. ರಿಸರ್ವ್ ಬ್ಯಾಂಕ್ ಫೆಬ್ರವರಿ 8, 2023 ರಂದು ಬೆಂಚ್ಮಾರ್ಕ್ ರೆಪೊ ದರವನ್ನು ಶೇಕಡಾ 6.5 ಕ್ಕೆ ಹೆಚ್ಚಿಸಿತ್ತು. ಅಂದಿನಿಂದ ಬಡ್ಡಿ ದರಗಳನ್ನು ಅದೇ ಮಟ್ಟದಲ್ಲಿ ಉಳಿಸಿಕೊಂಡಿದೆ.
ರಿಸರ್ವ್ ಬ್ಯಾಂಕ್ ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ 2023 ರ ಅಕ್ಟೋಬರ್ 4-6 ರಂದು ನಿಗದಿಯಾಗಿದೆ. ಅತ್ಯುನ್ನತ ರೇಟಿಂಗ್-ಸೆಟ್ಟಿಂಗ್ ಸಮಿತಿಯಾದ ಎಂಪಿಸಿಯ ಕೊನೆಯ ಸಭೆ ಆಗಸ್ಟ್ನಲ್ಲಿ ನಡೆದಿತ್ತು.
ಹಣದುಬ್ಬರ ಇನ್ನೂ ಹೆಚ್ಚಾಗಿರುವುದರಿಂದ ಮತ್ತು ಲಿಕ್ವಿಡಿಟಿ ಕಠಿಣ ಸ್ಥಿತಿಯಲ್ಲಿರುವುದರಿಂದ ಆರ್ಬಿಐ ಈ ಬಾರಿ ಯಥಾಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ವಾಸ್ತವವಾಗಿ, ಹಣದುಬ್ಬರದ ಕುರಿತ ಆರ್ಬಿಐ ಮುನ್ಸೂಚನೆಯ ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 5ಕ್ಕಿಂತ ಹೆಚ್ಚಾಗುತ್ತದೆ. ನಾಲ್ಕನೇ ತ್ರೈಮಾಸಿಕದಲ್ಲೂ ಯಥಾಸ್ಥಿತಿ ಇರುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿಕೊಂಡಿದ್ದಾರೆ. ಖಾರಿಫ್ ಕೃಷಿಗೆ ಸಂಬಂಧಿಸಿದಂತೆ ಹೇಳುವುದಾರೆ ಬೇಳೆಕಾಳುಗಳ ಬೆಲೆಗಳು ಅನಿಶ್ಚಿತತೆಯಲ್ಲಿದೆ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಸಬ್ನವಿಸ್ ಹೇಳಿದ್ದಾರೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಜುಲೈನ ಶೇಕಡಾ 7.44 ಕ್ಕೆ ಹೋಲಿಕೆ ಮಾಡಿದರೆ ಆಗಸ್ಟ್ನಲ್ಲಿ ಶೇಕಡಾ 6.83 ಇಳಿದಿದೆ. ಆದರೂ ಇದು ರಿಸರ್ವ್ ಬ್ಯಾಂಕಿನ ಕಂಫರ್ಟ್ ಲೆವೆಲ್ ಆಗಿರುವ ಶೇಕಡಾ 6ಕ್ಕಿಂತ ಹೆಚ್ಚಾಗಿದೆ. ಹಣದುಬ್ಬರವನ್ನು ಶೇಕಡಾ 4ಕ್ಕೆ ಉಳಿಸಿಕೊಳ್ಳಲು ಸರ್ಕಾರವು ಆರ್ಬಿಐ ಆದೇಶಿಸಿದೆ.
ಇದನ್ನೂ ಓದಿ : Money Guide : ಗೃಹ ಸಾಲದ ಬಡ್ಡಿ ಲೆಕ್ಕಾಚಾರ ಮಾಡೋದು ಹೇಗೆ? ಇಲ್ಲಿದೆ ಸರಳ ವಿವರಣೆ
ಐಸಿಆರ್ಟಿ ಲಿಮಿಟೆಡ್ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಮಾತನಾಡಿ ಸಿಪಿಐ ಹಣದುಬ್ಬರವು ಆಗಸ್ಟ್ 2023ರಲ್ಲಿ ಶೇಕಡಾ 6.8 ರಿಂದ 2023 ರ ಸೆಪ್ಟೆಂಬರ್ನಲ್ಲಿ ಶೇಕಡಾ 5.3ರಿಂದ 5.5 ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಸಿಪಿಐ ಹಣದುಬ್ಬರವು 2024 ರ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 5.6 ಕ್ಕೆ ಮತ್ತು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.1 ಕ್ಕೆ ಇಳಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಅಸಮ ಮತ್ತು ಕಳಪೆ ಮಾನ್ಸೂನ್ ಪರಿಣಾಮ ಮತ್ತು ಖಾರಿಫ್ ಇಳುವರಿ ಮತ್ತು ರಬಿ ಬಿತ್ತನೆಯ ಮೇಲೆ ಪರಿಣಾಮ ಬೀರಲಿದೆ. ಇದೂ ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.