Site icon Vistara News

Republic Day 2024: ಮುಂದಿನ ವರ್ಷ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಂಪೂರ್ಣ ಮಹಿಳಾ ಬಲ!

Republic Day 2024 parade will see participation only by women in march pasts

#image_title

ನವ ದೆಹಲಿ: ಸೇನಾ ಮತ್ತು ಇತರ ಎಲ್ಲ ವಲಯಗಳಲ್ಲೂ ಮಹಿಳೆಯರ ಸಕ್ರಿಯತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಆ ಪ್ರಯತ್ನದ ಇನ್ನೊಂದು ಭಾಗವಾಗಿ 2024ನೇ ವರ್ಷದ ಗಣರಾಜ್ಯೋತ್ಸವವನ್ನು (Republic Day 2024) ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿಡಲು ಕೇಂದ್ರ ರಕ್ಷಣಾ ಸಚಿವಾಲಯದಿಂದ ಯೋಜನೆ ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ. ಅಂದರೆ 2024ರ ಗಣರಾಜ್ಯೋತ್ಸವದ ಪಥ ಸಂಚಲನ, ಸ್ತಬ್ಧಚಿತ್ರಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಲ್ಲ ಬರೀ ಮಹಿಳೆಯರ ಪ್ರದರ್ಶನವೇ ಇರುವಂತೆ ಪ್ಲ್ಯಾನ್ ಮಾಡಲಾಗುತ್ತಿದೆ. ಈ ಬಗ್ಗೆ ರಕ್ಷಣಾ ಪಡೆಗಳಿಗೆ ಮತ್ತು ಇತರ ಪ್ರಮುಖರಿಗೆ ರಕ್ಷಣಾ ಇಲಾಖೆಯ ಸಾಂಪ್ರದಾಯಿಕ ಶಾಖೆಯಿಂದ ಸುತ್ತೋಲೆಯೊಂದು ಹೋಗಿದೆ. ಅಂದಹಾಗೇ, ಗಣರಾಜ್ಯೋತ್ಸವರ ಪಥಸಂಚಲನ, ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸುವುದು, ಈ ಬಗ್ಗೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸುವುದು ಇದೇ ಸಾಂಪ್ರದಾಯಿಕ ಶಾಖೆಯೇ ಆಗಿರುತ್ತದೆ.

ಇದನ್ನೂ ಓದಿ: Beating Retreat 2023: ತುಂತುರು ಮಳೆ ಮಧ್ಯೆ ಗಣರಾಜ್ಯೋತ್ಸವ ಸಮಾರೋಪ, ಇಲ್ಲಿವೆ ರಮಣೀಯ ಫೋಟೊಗಳು

ಗಣರಾಜ್ಯೋತ್ಸವ 2024ರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ, ಕರ್ತವ್ಯ ಪಥದಲ್ಲಿ ನಡೆಯುವ ಪಥ ಸಂಚಲನ, ಬ್ಯಾಂಡ್ಸ್​​, ಸ್ತಬ್ಧಚಿತ್ರ, ಕಲಾ ಪ್ರದರ್ಶನಗಳನ್ನೆಲ್ಲ ಮಹಿಳೆಯರಿಗೇ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮುಂಬರುವ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಇತರ ಕಾರ್ಯಕ್ರಮಗಳಲ್ಲೆಲ್ಲ ಸಂಪೂರ್ಣವಾಗಿ ಮಹಿಳೆಯರನ್ನೇ ಒಳಗೊಳ್ಳುವ ನಿರ್ಧಾರವನ್ನು ಕೇಂದ್ರ ರಕ್ಷಣಾ ಸಚಿವಾಲಯವು ಕೇಂದ್ರ ಗೃಹ ಇಲಾಖೆ, ಸಾಂಸ್ಕೃತಿಕ ಮತ್ತು ನಗರಾಭಿವೃದ್ಧಿ ಇಲಾಖೆಗೆ ತಿಳಿಸಿದೆ.

Exit mobile version