ಬೆಂಗಳೂರು: ಮೂರು ಬಾರಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮ್ಯೂಸಿಕ್ ಪುರಸ್ಕಾರ ಗ್ರ್ಯಾಮಿ ಅವಾರ್ಡ್ ಗೆದ್ದಿರುವ ಸಂಗೀತ ನಿರ್ದೇಶಕ ಮತ್ತು ಪರಿಸರವಾದಿ ರಿಕ್ಕಿ ಕೇಜ್ (Ricky Kej) ಹೊಸ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ. ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಕ್ಕೂ ಮುನ್ನ ಅಂದರೆ ಇದೇ ಆಗಸ್ಟ್ 14ರಂದು 5ಗಂಟೆಗೆ ರಿಕ್ಕಿ ಕೇಜ್ ಸಾರಥ್ಯದ ವಿಭಿನ್ನ ಬಗೆಯ ರಾಷ್ಟ್ರಗೀತೆ (Ricky Kej on Jana Gana Mana) ಬಿಡುಗಡೆಯಾಗಲಿದೆ. ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಸಮಯದಲ್ಲಿಯೇ, 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ರಿಕ್ಕಿ ಕೇಜ್ ಮಾಹಿತಿ ಹಂಚಿಕೊಂಡಿದ್ದಾರೆ.
ರಿಕ್ಕಿ ಕೇಜ್ ಮಾತನಾಡಿ, ʻʻರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಡಲಾಗಿದೆ. ಈ ರಾಷ್ಟ್ರಗೀತೆ ಪ್ರೆಸೆಂಟ್ ಮಾಡಲು ನಾನು ಕಾತುರನಾಗಿದ್ದೇನೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಈ ಹಿಂದೆ ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಕೈಚಳಕದಿಂದ ಭಾರತದ ರಾಷ್ಟ್ರಗೀತೆ ಸಿದ್ಧವಾಗಿದೆ ʼʼಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: Ricky Kej: ಯುಎನ್‌ಸಿಸಿಡಿಗೆ 3 ಬಾರಿ ಗ್ರ್ಯಾಮಿ ಅವಾರ್ಡ್ ವಿನ್ನರ್, ಬೆಂಗಳೂರಿಗ ರಿಕಿ ಕೇಜ್ ಸದ್ಭಾವನಾ ರಾಯಭಾರಿ!
ಯಾರು ಈ ರಿಕ್ಕಿ ಕೇಜ್?
ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡಿಗ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಇವರು ಕನ್ನಡ ಚಲನಚಿತ್ರಗಳಿಗೂ ಸಂಗೀತ ಒದಗಿಸಿದ್ದಾರೆ. ʻವಿಂಡ್ಸ್ ಆಫ್ ಸಂಸಾರʼ ಆಲ್ಬಂ 2015ರಲ್ಲಿ ಅವರಿಗೆ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು.ಈ ಮೂಲಕ ಮೂರು ಗ್ರ್ಯಾಮಿ ಗೆದ್ದ ಏಕೈಕ ಭಾರತೀಯ ಇವರಾಗಿದ್ದಾರೆ. ಇದಕ್ಕೂ ಮುನ್ನ ಪಂಡಿತ್ ರವಿಶಂಕರ್, ಝುಬಿನ್ ಮೆಹ್ತಾ, ಝಕೀರ್ ಹುಸೇನ್, ಎಆರ್ ರೆಹಮಾನ್ ಮುಂತಾದವರು ಎರಡು ಗ್ರ್ಯಾಮಿ (Grammy awards) ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಿಕ್ಕಿ ಕೇಜ್ ಅವರು ಹುಟ್ಟಿದ್ದು 1981ರಲ್ಲಿ ನಾರ್ತ್ ಕೆರೋಲಿನಾದಲ್ಲಿ. ತಮ್ಮ 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಪಂಜಾಬಿ, ತಾಯಿ ಮಾರ್ವಾಡಿ. ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲಿನಲ್ಲಿ ಓದಿ, ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ಡೆಂಟಿಸ್ಟ್ರಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: Grammy Awards 2023: ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ಗೆ 3ನೇ ಗ್ರ್ಯಾಮಿ ಪ್ರಶಸ್ತಿ
2014ರಲ್ಲಿ ಗೆಳತಿ ವರ್ಷಾ ಅವರನ್ನು ವಿವಾಹವಾಗಿರುವ ರಿಕ್ಕಿ ಅವರ ಕುಟುಂಬದ ಬಹುಮಂದಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ತಂದೆ- ತಾತ ವೈದ್ಯರಾಗಿದ್ದರು. ಪದವಿ ಮುಗಿಸಿದ ಬಳಿಕ ಸಂಗೀತವನ್ನು ವೃತ್ತಿಯಾಗಿಸಿಕೊಳ್ಳುವ ಅವರ ನಿರ್ಧಾರಕ್ಕೆ ಅಡೆತಡೆ ಎದುರಾದವು. ಅವರ ತಾತ ಜಾನಕಿ ದಾಸ್ ಅವರು ನಟ, ಒಲಿಂಪಿಕ್ ಸೈಕ್ಲಿಸ್ಟ್, ಸ್ವಾತಂತ್ರ್ಯ ಹೋರಾಟಗಾರ ಆಗಿದ್ದವರು.ಫುಲ್‌ಟೈಮ್ ಕಂಪೋಸರ್ ಆಗುವ ಮುನ್ನ ಅವರು ರಾಕ್‌ಬ್ಯಾಂಡ್ ಏಂಜೆಲ್ ಡಸ್ಟ್‌ನಲ್ಲಿ ಕೀಬೋರ್ಡ್ ನುಡಿಸುತ್ತಿದ್ದರು. ನುಸ್ರತ್ ಫತೇ ಅಲಿ ಖಾನ್, ಪಂಡಿತ್ ರವಿಶಂಕರ್, ಪೀಟರ್ ಗೇಬ್ರಿಯಲ್ ಇವರ ಸ್ಫೂರ್ತಿಗಳಂತೆ. 2015ರಲ್ಲಿ ಇವರು ಮೊದಲ ಗ್ರ್ಯಾಮಿ ಗೆದ್ದಾಗ ಇವರನ್ನು ಅಭಿನಂದಿಸಿದವರು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್. 2010ರಲ್ಲಿ ನೈಕ್‌ಗೆ ನೀಡಿದ ಜಿಂಗಲ್‌ಗಾಗಿ ಕ್ಯಾನ್ ಫಿಲಂ ಫೆಸ್ಟಿವಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 3000ಕ್ಕೂ ಅಧಿಕ ಜಿಂಗಲ್‌ಗಳನ್ನು ಸೃಷ್ಟಿಸಿದ್ದಾರೆ. ಕನ್ನಡ ಫಿಲಂಗಳಿಗೂ ದುಡಿದಿದ್ದಾರೆ.
ದಾಲ್, ರೋಟಿ, ಸಬ್ಜಿಯನ್ನು ಇಷ್ಟಪಡುವ ರಿಕ್ಕಿ, 20 ದೇಶಗಳ 100ಕ್ಕೂ ಅಧಿಕ ಸಂಗೀತ ಪುರಸ್ಕಾರಗಳನ್ನು ಗೆದ್ದುಕೊಂಡಿದ್ದಾರೆ. ಮಾರ್ಲನ್ ಬ್ರಾಂಡೊ, ಈವಾ ಗ್ರೀನ್ ಇವರ ಮೆಚ್ಚಿನ ನಟ ನಟಿಯರು.