Site icon Vistara News

Rishab Shetty | ಪತ್ನಿ ಪ್ರಗತಿ ಶೆಟ್ಟಿಗೆ ಪ್ರೀತಿಯಿಂದ ಕೃತಜ್ಞತೆ ಹೇಳಿದ ರಿಷಬ್​ ಶಟ್ಟಿ; ಎರಡು ಫೋಟೋ ಪೋಸ್ಟ್​​

Rishab Shetty

ಬೆಂಗಳೂರು: ಕಾಂತಾರ ಸಿನಿಮಾದ ಯಶಸ್ಸಿನ ತುತ್ತತುದಿಯಲ್ಲಿರುವ ರಿಷಬ್​ ಶೆಟ್ಟಿ, ತಮ್ಮ ಫೇಸ್​​ಬುಕ್​ನಲ್ಲಿ ಪತ್ನಿ ಪ್ರಗತಿ ಶೆಟ್ಟಿಯೊಂದಿಗಿನ ಫೋಟೋ ಹಾಕಿ ಅವರಿಗೆ ಪ್ರೀತಿಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ತಾವು ಪತ್ನಿಯೊಂದಿಗೆ ಇರುವ ಎರಡು ಹಳೇ ಫೋಟೋಗಳನ್ನು ಫೇಸ್​​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡ ರಿಷಬ್​ ಶೆಟ್ಟಿ, ‘ನಮ್ಮ ಮೊದಲ ಭೇಟಿಯಾದಾಗಿನಿಂದ ಇಲ್ಲಿಯವರೆಗೆ ನೀನು ನನ್ನ ಜಗತ್ತನ್ನು ಬೆಳಗಿಸಿದೆ. ನನ್ನ ಭವಿಷ್ಯಕ್ಕೆ ಹೊಳಪು ತಂದಿರುವೆ. ನನ್ನ ಜತೆಯಾಗಿ, ಬೆನ್ನೆಲುಬಾಗಿ ನಿಂತಿರುವುದಕ್ಕೆ ಧನ್ಯವಾದ. ಲವ್​ ಯೂ ಬಾಬು’ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಹಾಗೇ, ಪ್ರಗತಿಶೆಟ್ಟಿ ಅವರನ್ನು ಟ್ಯಾಗ್​ ಮಾಡಿದ್ದಾರೆ.

ಪ್ರಗತಿ ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಪ್ರೀತಿಸಿ ಮದುವೆಯಾದ ಜೋಡಿ. 2017ರಲ್ಲಿ ಇವರಿಬ್ಬರ ವಿವಾಹವಾಗಿದೆ. 2019ರಲ್ಲಿ ಮೊದಲ ಗಂಡುಮಗು ಜನನವಾಗಿದ್ದು, 2022ರಲ್ಲಿ ಎರಡನೇ ಹೆಣ್ಣುಮಗು ಜನಿಸಿದೆ. ಮದುವೆಗೂ ಮುನ್ನ ಪ್ರಗತಿ ಶೆಟ್ಟಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು, ಮದುವೆ ನಂತರ ತಮ್ಮ ಕೆಲಸಗಳನ್ನೆಲ್ಲ ಬಿಟ್ಟು ಸಂಸಾರದ ಹೊಣೆ ಹೊತ್ತಿದ್ದಾರೆ. ಜತೆಗೆ ವಸ್ತ್ರವಿನ್ಯಾಸಕಿಯೂ ಆಗಿದ್ದಾರೆ. ಪತಿ ರಿಷಬ್​ ಸಿನಿ ಬದುಕಿಗೆ ಸಂಪೂರ್ಣ ಸಹಕಾರ ಕೊಟ್ಟು, ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ವಸ್ತ್ರವಿನ್ಯಾಸಕಿಯೂ ಆಗಿರುವ ಪ್ರಗತಿ ಶೆಟ್ಟಿ, ಕಥಾ ಸಂಗಮ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಲ್​ ಬಾಟಂ ಸಿನಿಮಾಗಳಿಗೆ ವಸ್ತ್ರವಿನ್ಯಾಸವನ್ನೂ ಮಾಡಿದ್ದಾರೆ. ಕಾಂತಾರ ಸಿನಿಮಾ ನೋಡಿದ ಮೇಲೆ ನನಗೆ ರಿಷಬ್​ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: Kantara Movie | ಕಾಂತಾರ ಹಿಂದಿ ರಿಮೇಕ್‌ ಬಗ್ಗೆ ರಿಷಬ್‌ ಶೆಟ್ಟಿ ಹೇಳಿದ್ದೇನು?

Exit mobile version