Site icon Vistara News

Road Accident | ತಡರಾತ್ರಿ ಕಾರು-ಟ್ರಕ್​ ಭೀಕರ ಅಪಘಾತ; ಐವರ ದುರ್ಮರಣ, ಒಬ್ಬನಿಗೆ ಗಾಯ

Road Accident

ಜೈಪುರ: ರಾಜಸ್ಥಾನದಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತವಾಗಿದೆ. ಹನುಮಾನ್​ಗಢ್​ ಜಿಲ್ಲೆಯ ಬಿಸ್ರಾಸರ್​ ಗ್ರಾಮದ ಬಳಿ ಹೆದ್ದಾರಿಯಲ್ಲಿ ಟ್ರಕ್​​ ಮತ್ತು ಕಾರು ಡಿಕ್ಕಿಯಾಗಿ 5 ಮಂದಿ ಮೃತಪಟ್ಟಿದ್ದಾರೆ. ಹಾಗೇ, ಒಬ್ಬಾತನಿಗೆ ಗಾಯವಾಗಿದೆ.

ತಡರಾತ್ರಿ ಟ್ರಕ್​ ಮತ್ತು ಕಾರು ಡಿಕ್ಕಿಯಾಗಿದ್ದನ್ನು ನೋಡಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ನಂತರ ಪೊಲೀಸರಿಗೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ. ಹಾಗೇ, ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರಯತ್ನವನ್ನು ಕೂಡ ಮಾಡಿದ್ದಾರೆ. ಆದರೆ ಐವರ ಜೀವ ಹೋಗಿದ್ದು, ಒಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅಪಘಾತ ಆಗುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಹಾಗೇ, ಆತನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Road Accident | ಪ್ರತ್ಯೇಕ ಕಡೆ ರಸ್ತೆ ಅಪಘಾತ; ಯುವಕ ಸಾವು, ಸಂಚಾರ ಅಸ್ತವ್ಯಸ್ತ

Exit mobile version