Site icon Vistara News

Robert Vadra | ನ್ಯಾಯಾಲಯಕ್ಕೆ ಭೇಷರತ್‌ ಕ್ಷಮೆಯಾಚಿಸಿದ ರಾಬರ್ಟ್‌ ವಾದ್ರಾ, ಕಾರಣ ಏನು?

Robert vadra London property from proceeds of crime Says ED

ನವದೆಹಲಿ: ವಿದೇಶ ಪ್ರಯಾಣ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ (Robert Vadra) ಅವರು ನ್ಯಾಯಾಲಯಕ್ಕೆ ಭೇಷರತ್‌ ಕ್ಷಮೆಯಾಚಿಸಿದ್ದಾರೆ. ಹಣದ ಅಕ್ರಮ ವರ್ಗಾವರಣೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ವಾದ್ರಾ, ವಿದೇಶ ಪ್ರವಾಸ ಕೈಗೊಂಡಾಗ ನಿಯಮ ಉಲ್ಲಂಘಿಸಿದ್ದಾರೆ. ಹಾಗಾಗಿ, ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಇ.ಡಿ ಅಧಿಕಾರಿಗಳು ಮನವಿ ಮಾಡಿದ್ದರು. ಹಾಗಾಗಿ, ವಾದ್ರಾ ಕ್ಷಮೆಯಾಚಿಸಿದ್ದು, ಈ ಕುರಿತು ನ್ಯಾಯಾಲಯವು ಗುರುವಾರ ತೀರ್ಪು ಪ್ರಕಟಿಸಲಿದೆ.

ಆಗಸ್ಟ್‌ನಲ್ಲಿ ರಾಬರ್ಟ್‌ ವಾದ್ರಾ ಅವರು ನಾಲ್ಕು ದಿನ ವಿದೇಶ ಪ್ರವಾಸ ಕೈಗೊಂಡಿದ್ದರು. ಕೋರ್ಟ್‌ ಅನುಮತಿ ಪಡೆದೇ ಅವರು ವಿಮಾನ ಹತ್ತಿದ್ದರು. ಆದರೆ, ಯುಎಇ ಮಾರ್ಗವಾಗಿ ತೆರಳುತ್ತೇನೆ ಎಂದು ಹೇಳಿದ ಅವರು ಯುಎಇಯಲ್ಲಿ ನಾಲ್ಕು ದಿನ ತಂಗಿದ್ದರು. ನಿಯಮ ಉಲ್ಲಂಘಿಸಿದ ಕಾರಣ ಕ್ರಮ ತೆಗೆದುಕೊಳ್ಳಬೇಕು ಎಂದು ಇ.ಡಿ ಮನವಿ ಮಾಡಿತ್ತು.

ವಿದೇಶ ಪ್ರವಾಸಕ್ಕೆ ತೆರಳಲು ಕೋರಿದ ಅನುಮತಿ ಪತ್ರದಲ್ಲಿ ತಪ್ಪಾಗಿ ಉಲ್ಲೇಖಿಸಿದ್ದೇ ಪ್ರಮಾದಕ್ಕೆ ಕಾರಣ ಎಂದು ರಾಬರ್ಟ್‌ ವಾದ್ರಾ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು. “To ದುಬೈ ಎಂದು ಬರೆಯುವ ಬದಲು Via ದುಬೈ ಎಂದು ಬರೆಯಲಾಗಿದೆ. ಆಗಿರುವ ಪ್ರಮಾದಕ್ಕೆ ವಾದ್ರಾ ಅವರು ಭೇಷರತ್‌ ಕ್ಷಮೆಯಾಚಿಸಿದ್ದಾರೆ” ಎಂದು ಹೇಳಿದರು. ಬಳಿಕ ಸಿಬಿಐ ವಿಶೇಷ ನ್ಯಾಯಾಧೀಶೆ ನೀಲೋಫರ್‌ ಅಬಿದಾ ಪರ್ವೀನ್‌ ಅವರು ತೀರ್ಪು ಕಾಯ್ದಿರಿಸಿದರು.

ಇದನ್ನೂ ಓದಿ | Bharat Jodo Yatra | ಪೋಸ್ಟರ್​​ನಲ್ಲಿ ಕಂಡುಬಂತು ರಾಬರ್ಟ್​ ವಾದ್ರಾ ಫೋಟೋ; ಬಿಜೆಪಿಯಿಂದ ಟೀಕೆ

Exit mobile version