ಉತ್ತರಾಖಂಡ್ನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಭೂಕುಸಿತ-ಗುಡ್ಡಕುಸಿತ ಆಗುತ್ತಿದೆ (Landslide Hits Uttarakhand). ಸೋಮವಾರ ತಡರಾತ್ರಿ ಇಲ್ಲಿನ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಮೇಲೆ ಕಲ್ಲುಬಂಡೆಗಳು ಉರುಳಿಬಿದ್ದು (Rocks Slide) ನಾಲ್ವರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಆರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾತ್ರಾರ್ಥಿಗಳು ಇದ್ದ ವಾಹನಗಳು ಗಂಗೋತ್ರಿಯಿಂದ ಉತ್ತರಾಖಂಡ್ನ ಸು ನಗರದಲ್ಲಿರುವ ಉತ್ತರಕಾಶಿಯತ್ತ ತೆರಳುತ್ತಿದ್ದವು.
ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದಾಗಲೇ ರಸ್ತೆ ಪಕ್ಕದ ಗುಡ್ಡ ಕುಸಿದು ಬಿದ್ದಿದೆ. ಕಲ್ಲುಗಳೆಲ್ಲ ವಾಹನಗಳ ಮೇಲೆ ಉರುಳಿ, ಮೂರು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಕೆಲವು ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಕಲ್ಲುಗಳು ವಾಹನಗಳ ಮೇಲೆ ಬಿದ್ದ ರಭಸಕ್ಕೆ ವಾಹನದೊಂದಿಗೆ ಅದರಲ್ಲಿದ್ದ ಪ್ರಯಾಣಿಕರು ಭೀಕರವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರೂ ಕೈಜೋಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಮೇಲೆ ಉರುಳಿಬಿದ್ದ ಕಲ್ಲುಬಂಡೆಗಳು
ಉತ್ತರಾಖಂಡ್, ರಾಜಸ್ಥಾನ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಸೇರಿ ಹಲವು ರಾಜ್ಯಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಎಲ್ಲೆಲ್ಲೂ ಪ್ರವಾಹ, ಭೂಕುಸಿತ ಮಿತಿಮೀರಿದೆ. ಇದೀಗ ಉತ್ತರಾಖಂಡ್ನ ಚಾರ್ಧಾಮ್ ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಸಲಹೆಯೊಂದನ್ನು ಕೊಟ್ಟಿದ್ದಾರೆ. ಇಲ್ಲಿನ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದೆ. ಪರಿಸ್ಥಿತಿ ಸರಿಯಾಗಿಲ್ಲ. ಯಾತ್ರಿಕರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ‘ಪ್ರತಿ ಮಾನ್ಸೂನ್ ಸಮಯದಲ್ಲೂ ಉತ್ತರಾಖಂಡ್ನಲ್ಲಿ ಪ್ರಾಕೃತಿಕ ವಿಕೋಪ ಮಿತಿಮೀರಿ ಇರುತ್ತದೆ. ಚಾರ್ಧಾಮ್, ಕನ್ವರ್ ಯಾತ್ರೆಗಳು ನಡೆಯುತ್ತಿದ್ದು, ಯಾತ್ರಿಕರು ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಗಂಗಾ ಸೇರಿ, ಇಲ್ಲಿನ ಎಲ್ಲ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿದೆ. ಜಾಗರೂಕರಾಗಿರಿ, ಇಲ್ಲಿ ಮಳೆ ಪ್ರಮಾಣ ಅತ್ಯಧಿಕವಾಗಿದ್ದಾಗ ಯಾತ್ರೆಯನ್ನು ಮುಂದುವರಿಸಬೇಡಿ, ವಾತಾವರಣ ನೋಡಿಕೊಂಡು ಮುಂದುವರಿಯಿರಿ ಎಂದಿದ್ದಾರೆ.
ಇದನ್ನೂ ಓದಿ: Viral video: ಹೆದ್ದಾರಿಯಲ್ಲಿ ಉರುಳಿಬಂದ ಬಂಡೆಗೆ ಕಾರುಗಳು ಪುಡಿಪುಡಿ, ಬೆಚ್ಚಿ ಬೀಳಿಸುವಂತಿದೆ ವಿಡಿಯೋ!
ಉತ್ತರಾಖಂಡ್ನ 11 ಪ್ರದೇಶಗಳಲ್ಲಿ ಭಯಂಕರ ಮಳೆ ಸುರಿಯುತ್ತಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಅಪಾಯದ ಮಟ್ಟ ಜಾಸ್ತಿ ಇರುವ ಪ್ರದೇಶಗಳಲ್ಲಿ ಪೊಲೀಸ್ ಮತ್ತಿತರ ರಕ್ಷಣಾ ಪಡೆಗಳ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇನ್ನು ಸೋಮವಾರವಂತೂ ಇಡೀ ಉತ್ತರಾಖಂಡ್ನಲ್ಲಿ ಹಲವು ಕಡೆಗಳಲ್ಲಿ ಭೂಕುಸಿತ ಆಗಿವೆ. ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯೂ ಬ್ಲಾಕ್ ಆಗಿತ್ತು. ಇದರಿಂದಾಗ ಟ್ರಾಫಿಕ್ ಜಾಮ್ ಆಗಿತ್ತು.