ಅಯೋಧ್ಯಾ: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯಾ ರಾಮಮಂದಿರದ ಗರ್ಭಗುಡಿಯಲ್ಲಿ ‘ರಾಮಲಲ್ಲಾ’ ಆಗಿ ಪ್ರತಿಷ್ಠಾಪನೆಗೊಳ್ಳಲಿರುವ ಎರಡು ಶಿಲೆಗಳು (Shaligram rocks) ಇಂದು ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿವೆ. ರಾಮಲಲ್ಲಾನ ಮೂರ್ತಿ ಚಿಕ್ಕದಾಗಿರುವ ಕಾರಣ, ಈ ಮೂರ್ತಿ ಭಕ್ತರಿಗೆ 9 ಅಡಿ ದೂರದಿಂದ ಕಾಣುವುದಿಲ್ಲ. ಹೀಗಾಗಿ ಹೊಸದಾದ, ಸುಮಾರು 3 ಅಡಿ ಎತ್ತರದ ರಾಮಲಲ್ಲಾ ಮೂರ್ತಿಯನ್ನು ಕೆತ್ತಿಸಿ, ಪ್ರತಿಷ್ಠಾಪಿಸಲು ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ನಿರ್ಧಾರ ಮಾಡಿದೆ. ಹೀಗೆ ರಾಮಲಲ್ಲಾನ ಹೊಸದಾದ ಮೂರ್ತಿಯನ್ನು ಕೆತ್ತಲು ಅಗತ್ಯವಿರುವ ಶಿಲೆಗಳನ್ನು ನೇಪಾಳದಿಂದ ತರಿಸಲಾಗಿದೆ.
ಈ ಎರಡೂ ದೊಡ್ಡದಾದ ಶಿಲೆಗಳು ಅಯೋಧ್ಯೆಗೆ ತಲುಪುತ್ತಿದ್ದಂತೆ ಅವಕ್ಕೆ ಅರಿಶಿಣ-ಕುಂಕುಮ ಹಾಕಿ ಪೂಜೆ ಮಾಡಲಾಗಿದೆ. ಅದರ ಮೇಲೆ ಶ್ರೀರಾಮ್ ಎಂದೇ ಬರೆಯಲಾಗಿದೆ. ಅಂದಹಾಗೇ, ಈ ಎರಡೂ ಶಿಲೆಗಳು ನೇಪಾಳದ ಗಂಡಕಿ ನದಿ ತೀರದಲ್ಲಿರುವ ಸಾಲಿಗ್ರಾಮ (ಮುಕ್ತಿನಾಥ)ದಲ್ಲಿ ಸಿಕ್ಕವು. 6 ಕೋಟಿ ವರ್ಷಗಳ ಇತಿಹಾಸ ಇದ್ದು, ಅಧ್ಯಾತ್ಮವಾಗಿ ಪ್ರಾಮುಖ್ಯತೆ ಪಡೆದಿವೆ. ಈ ಎರಡನ್ನೂ ಎರಡು ಬೇರೆಬೇರೆ ಟ್ರಕ್ಗಳಲ್ಲಿ ನೇಪಾಳದಿಂದ ಅಯೋಧ್ಯೆಗೆ ತರಲಾಗಿದೆ. ಇದರಲ್ಲಿ ಒಂದು ಶಿಲೆ 26 ಟನ್ ಇದ್ದರೆ, ಮತ್ತೊಂದು 14 ಟನ್ ಇದೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಕಾರ್ಯಾಲಯ ಉಸ್ತುವಾರಿ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: Ram Lalla New Idol: ಅಯೋಧ್ಯೆ ಮಂದಿರದಲ್ಲಿ ರಾಮನ ನೂತನ ಮೂರ್ತಿ, ನೇಪಾಳದಿಂದ ಬರುತ್ತಿವೆ ವಿಶೇಷ ಶಿಲೆಗಳು