ನವದೆಹಲಿ: ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸಲು ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ ಸ್ವದೇಶಿ ನಿರ್ಮಿತ 70 ಪೈಲೆಟ್ ತರಬೇತಿ ವಿಮಾನ ಖರೀದಿಸಲು ಎಚ್ಎಎಲ್ನೊಂದಿಗೆ 6800 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಎಲ್ಎಂಡ್ಟಿ ಕಂಪನಿಯಿಂದ ತರಬೇತಿಗಾಗಿ 3100 ಕೋಟಿ ರೂ.ಗಳ 3 ಹಡಗುಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದೆ. ಒಪ್ಪಂದದ ಪ್ರಕಾರ ಎಚ್‌ಎಎಲ್ ಮುಂದಿನ 6 ವರ್ಷಗಳಲ್ಲಿ HTT-40 ತರಬೇತಿ ವಿಮಾನಗಳನ್ನು ಹಸ್ತಾಂತರಿಸಲಿದೆ. ಹಡಗುಗಳು 2026ರಲ್ಲಿ ನೌಕಾ ಸೇವೆಗೆ ಲಭ್ಯವಾಗಲಿವೆ.
70 ಪೈಲೆಟ್ ತರಬೇತಿ ವಿಮಾನ
ಮುಂದಿನ 6 ವರ್ಷಗಳಲ್ಲಿ ಸೇನೆಗೆ ವಿಮಾನಗಳು ಲಭ್ಯವಾಗಲಿವೆ. 2022ರ ಅಕ್ಟೋಬರನಲ್ಲಿ ಖರೀದಿ ಮಾತುಕತೆ ಮುನ್ನಲೆಗೆ. 2023ರ ಮಾರ್ಚ್ 1 ರಂದು ಪ್ರಧಾನಿ ನೇತೃತ್ವದ ಸಚಿವಸಂಪುಟ ಸಮಿತಿಯಿಂದ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೇ ಎಚ್‌ಎಎಲ್ ನಿಂದ ಹಗುರ ಯುದ್ದವಿಮಾನಗಳು ಮತ್ತು ಹಗುರ ಹೆಲಿಕಾಫ್ಟರ್ಗಳನ್ನು ಸೇನೆ ಖರೀದಿ ಮಾಡಿದೆ. 200 ಹಗುರ ಹೆಲಿಕಾಫ್ಟರ್ಗಳು ಮತ್ತು 500 ಧೃವ ಹೆಲಿಕಾಫ್ಟರ್ಗಳು ಸೇವೆಯಲ್ಲಿವೆ. ಎಚ್ಎಎಲ್ನ ಇನ್ನೊಂದು ತೇಜಸ್ ಯುದ್ದವಿಮಾನಗಳು ಇಗಾಗಲೇ ಸೇನೆಯ ಬತ್ತಳಿಕೆಯಲ್ಲಿವೆ. ತೇಜಸ್ ಖರೀದಿಗೆ ಈಜಿಫ್ಟ್, ಇಂಡೋನೇಷಿಯಾ, ಫಿಲಿಫೈನ್ಸ್, ಆಸ್ಟ್ರೇಲಿಯಾ, ಮಲೇಷ್ಯಾ, ಅಮೆರಿಕಾ, ಅರ್ಜೆಂಟೈನಾ ಸೇರಿದಂತೆ ಹಲವು ದೇಶಗಳ ಆಸಕ್ತಿ ತೋರಿಸಿವೆ.
ಇದನ್ನೂ ಓದಿ : Aero India 2023 : ತುಮಕೂರಿನ ಎಚ್‌ಎಎಲ್ ಘಟಕದಲ್ಲಿ 40 ಹೆಲಿಕಾಪ್ಟರ್ ಉತ್ಪಾದನೆಗೆ ಸಿದ್ಧತೆ
ಎಲ್ ಆ್ಯಂಡ್ ಟಿ ಕಂಪನಿ
ಎಲ್ಎಂಡ್ಟಿ ಕಂಪನಿ ತರಬೇತಿಗಾಗಿ 3 ಹಡಗುಗಳ ಖರೀದಿಯಾಗಲಿದೆ. ಇದಕ್ಕಾಗಿ 3100 ಕೋಟಿ ರೂ. ವ್ಯವಹಾರ ನಡೆದಿದ್ದು, 2026ರಲ್ಲಿ ಸೇವೆಗೆ ದೊರೆಯಲಿವೆ. ರಕ್ಷಣಾ ಕ್ಷೇತ್ರದಲ್ಲಿ ಎಲ್ಎಂಡ್ಟಿ ಸೇರಿದಂತೆ ಹಲವು ಸ್ವದೇಶಿ ಕಂಪನಿಗಳ ಹೂಡಿಕೆ ಮಾಡಲಿವೆ. ಯುದ್ದ ಹಡುಗುಗಳು, ಹಡುಗು ನಾಶಕಗಳು, ಜಲಾಂತರ್ಗಾಮಿ ತಯಾರಿಕೆ ಮಾಡಲಾಗುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಶೇ. 74ರವರೆಗೆ ವಿದೇಶಿ ಹೂಡಿಕೆಗೆ ಭಾರತ ಸರ್ಕಾರ ಅವಕಾಶ ನೀಡಲಿದೆ. ದೇಶದಲ್ಲೇ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. 780 ರಕ್ಷಣಾ ಉತ್ಪನ್ನಗಳ ಆಮದು ನಿರ್ಬಂಧ ಹಾಕಲಾಗಿದೆ.