Site icon Vistara News

Mohan Bhagwat Remark: ಪಂಡಿತ ಎಂದರೆ ವಿದ್ವಾಂಸ, ಮೋಹನ್ ಭಾಗವತ್ ಹೇಳಿಕೆಗೆ ಸ್ಪಷ್ಟನೆ ನೀಡಿದ ಆರೆಸ್ಸೆಸ್

Mohan Bhagwat

Destructive forces attack on cultural Marxists: RSS Chief Mohan Bhagwat

ನವದೆಹಲಿ: ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು. ಶಾಸ್ತ್ರಗಳ ಆಧಾರದ ಮೇಲೆ ಪಂಡಿತರು ಹೇಳುವುದು ಎಲ್ಲ ಸುಳ್ಳು ಎಂಬ ಆರ್‌ಆರ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್ (Mohan Bhagwat Remark) ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಮೊದಲು ಜಾತಿ ವ್ಯವಸ್ಥೆಗೆ ಪುರೋಹಿತರು ಕಾರಣ ಎಂದು ಹೇಳಿದ್ದಾರೆಂದು ವರದಿಯಾಗಿತ್ತು. ಬಳಿಕ, ಎಎನ್ಐ ಸುದ್ದಿಸಂಸ್ಥೆಯು, ತಪ್ಪು ಅನುವಾದದಿಂದಾಗಿ ಪುರೋಹಿತರು ಎಂದಾಗಿದೆ ಎಂದು ಸ್ಪಷ್ಟಣೆ ನೀಡಿತ್ತು. ಆದರೆ, ಪಂಡಿತರ ಪದ ಬಳಕೆಗೆ ಚರ್ಚೆ ನಡೆಯುತ್ತಲೇ ಇತ್ತು. ಈಗ ಆರೆಸ್ಸೆಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಆರೆಸ್ಸೆಸ್ ನಾಯಕ ಸುನೀಲ್ ಅಂಬೇಕರ್ ಅವರು ಮೋಹನ್ ಭಾಗವತ್ ಅವರ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದು, ಮೋಹನ್ ಭಾಗವತ್ ಅವರು ಸಂತ ರೋಹಿದಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಅವರು ಪಂಡಿತ ಪದ ಬಳಸಿದ್ದಾರೆ. ಪಂಡಿತ ಎಂದರೆ ವಿದ್ವಾಂಸರು ಎಂದು ಅವರು ಹೇಳಿದ್ದಾರೆ. ಕೆಲವು ಪಂಡಿತರು ಶಾಸ್ತ್ರಗಳ ಆಧಾರದ ಮೇಲೆ ಜಾತಿ ಆಧಾರಿತ ವಿಭಜನೆಗಳ ಬಗ್ಗೆ ಮಾತನಾಡುತ್ತಾರೆ, ಅದು ಸುಳ್ಳು. ಇದು ಅವರ ನಿಖರವಾದ ಹೇಳಿಕೆ ಎಂದು ಅಂಬೇಕರ್ ಹೇಳಿದ್ದಾರೆ.

ಮೋಹನ್ ಭಾಗವತ್ ಹೇಳಿದ್ದೇನು?

ದೇವರ ಎದುರು ಎಲ್ಲರೂ ಸಮಾನರು. ಪುರೋಹಿತರು ಜಾತಿ ಪದ್ಧತಿಯನ್ನು ಹುಟ್ಟು ಹಾಕಿದ್ದು ತಪ್ಪು ಎಂದು ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದ್ದಾರೆಂದು ಎಎನ್ಐ (ANI) ಸುದ್ದಿ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಈಗ ಎಎನ್ಐ, ಮೋಹನ್ ಭಾಗವತ್ ಅವರ ಭಾಷಣವನ್ನು ತಪ್ಪಾಗಿ ಅನುವಾದ ಮಾಡಿದ್ದಾಗಿ ಹೇಳಿ, ತನ್ನ ಹಳೆಯ ಟ್ವೀಟ್ ಡಿಲಿಟ್ ಮಾಡಿದೆ. ಸರಿಯಾದ ಅನುವಾದದ ಟ್ವೀಟ್ ಮಾಡಿರುವ ಎಎನ್ಐ, ”ಶಾಸ್ತ್ರಗಳ ಆಧಾರದ ಮೇಲೆ ಕೆಲವು ಪಂಡಿತರು ಹೇಳುವುದು ಸುಳ್ಳು” ಎಂದು ಭಾಗವತ್ ಹೇಳಿದ್ದಾರೆಂದು ಹೇಳಿದೆ. ಜಾತಿ ಪದ್ಧತಿಗೆ ಪುರೋಹಿತರೇ ಕಾರಣ ಎಂಬ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: Mohan Bhagwat | ಭಾರತ ಯಾವುದೇ ದೇಶವನ್ನು ಅನುಕರಿಸುವುದು ಬೇಡ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ಹೆಸರು, ಸಾಮರ್ಥ್ಯ ಏನೇ ಇರಲಿ. ಎಲ್ಲರೂ ಒಂದೇ. ಯಾವುದೇ ವ್ಯತ್ಯಾಸಗಳಿಲ್ಲ. ಜಾತಿ ಶ್ರೇಷ್ಠತೆಯ ಭ್ರಮೆಯಿಂದ ನಾವು ದಾರಿ ತಪ್ಪುತ್ತಿದ್ದು, ಈ ಭ್ರಮೆಯನ್ನು ಬದಿಗೊತ್ತಬೇಕಿದೆ. ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಒಂದೇ ಆಗಿರುತ್ತದೆ ಮತ್ತು ಅಭಿಪ್ರಾಯಗಳು ಮಾತ್ರ ವಿಭಿನ್ನವಾಗಿವೆ ಎಂದು ಮೋಹನ್ ಭಾಗವತ್ ಅವರು ಹೇಳಿದ್ದಾರೆ.

Exit mobile version