Site icon Vistara News

RSS Family Shakhas | ಭಾರತದಲ್ಲಿ ಕೌಟುಂಬಿಕ ಶಾಖೆ ಪದ್ಧತಿ ಜಾರಿಗೆ ಆರೆಸ್ಸೆಸ್‌ ಚಿಂತನೆ

Mohan Bhagwat

Destructive forces attack on cultural Marxists: RSS Chief Mohan Bhagwat

ನವ ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಭಾರತದಲ್ಲಿ ಮೊದಲ ಬಾರಿಗೆ ಕೌಟುಂಬಿಕ ಶಾಖೆಗಳನ್ನು ಭಾರತದಲ್ಲಿ ಆರಂಭಿಸಲು ಚಿಂತನೆ ನಡೆಸಿದೆ. ವಿದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವಂತೆ ಭಾರತದಲ್ಲೂ ಕೌಟುಂಬಿಕ ಶಾಖೆಗಳನ್ನು ( Family shakhas) ಆರಂಭಿಸಲು ಪರಿಶೀಲಿಸಿದೆ.

ಇನ್ನೊಂದು ಅಥವಾ ಎರಡು ವರ್ಷಗಳ ಒಳಗೆ ಕೌಟುಂಬಿಕ ಶಾಖೆಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಿಕಲ್ಪನೆ ಬಗ್ಗೆ ಎಲ್ಲ ವಲಯಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿದೇಶಗಳಲ್ಲಿ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಿಸ್ಥಿತಿಯನ್ನು ಆಧರಿಸಿ ಸಂಘವು ಕೌಟುಂಬಿಕ ಶಾಖೆಗಳ ಪರಿಕಲ್ಪನೆಯನ್ನು ಅಳವಡಿಸಿದೆ.

ವಿದೇಶಗಳಲ್ಲಿ ಉದ್ಯೋಗ, ಬಿಸಿನೆಸ್‌ ಮತ್ತಿತರ ಕಾರಣಗಳಿಂದ ಕುಟುಂಬದ ಸದಸ್ಯರು ಒಟ್ಟಿಗಿರುವ ದಿನಗಳು ಕಡಿಮೆ ಎಂಬ ಪರಿಸ್ಥಿತಿ ಇರುತ್ತದೆ. ಹೀಗಾಗಿ ಯಾರಾದರೂ ಒಬ್ಬರು ಮಾತ್ರ ಶಾಖೆಗೆ ಹೋಗುವಾಗ ಇತರ ಸದಸ್ಯರು ಪ್ರತ್ಯೇಕವಾಗಿ ಕಾಲ ಕಳೆಯಲು ಬಯಸುವುದಿಲ್ಲ. ಹೀಗಾಗಿ ಕುಟುಂಬದ ಪ್ರತಿ ಸದಸ್ಯರಿಗೂ ಶಾಖೆ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಒಂದೇ ಆವರಣದಲ್ಲಿ ಕುಟುಂಬದ ಪುರುಷರು-ಮಹಿಳೆಯರು ಮತ್ತು ಮಕ್ಕಳಿಗೆ ಭಿನ್ನ ಕಾರ್ಯಕ್ರಮಗಳು ಇರುತ್ತವೆ. ಇದರಿಂದಾಗಿ ಕೌಟುಂಬಿಕ ಶಾಖೆಗೆ ಕುಟುಂಬದ ಎಲ್ಲರೂ ಬರಲು ಹಾದಿ ಸುಗಮವಾಗುತ್ತದೆ.

ಭಾರತದಲ್ಲೂ ಈಗ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ, ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ಇಬ್ಬರು ಪೋಷಕರೂ ದುಡಿಯುವ ಕುಟುಂಬಗಳಲ್ಲಿ ಎಲ್ಲ ಸದಸ್ಯರೂ ಒಟ್ಟಿಗೆ ಸೇರುವ ದಿನಗಳು ಕಡಿಮೆಯಾಗುತ್ತಿವೆ. ಈ ನಿಟ್ಟಿನಲ್ಲಿ ಕೌಟುಂಬಿಕ ಶಾಖೆಗಳನ್ನು ಪರಿಚಯಿಸಲಾಗುವುದು. ಇಂಥ ಶಾಖೆಗಳಲ್ಲಿ ಕುಟುಂಬದ ಪುರುಷ, ಮಹಿಳೆಯರಿಗೆ ಭಿನ್ನ ಚಟುವಟಿಕೆಗಳಿಗೆ ಅವಕಾಶ ಇದೆ. ಮಕ್ಕಳಿಗೆ ಆಟವಾಡಿಕೊಳ್ಳಲೂ ವ್ಯವಸ್ಥೆ ಇರುತ್ತದೆ.

ಸಂಘ ಸದಾ ಪ್ರಯೋಗಶೀಲವಾಗಿದೆ. ಕೌಟುಂಬಿಕ ಶಾಖೆ ಪದ್ಧತಿಯ ಜಾರಿಗೆ, ಅದರ ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಘ ಸಾವಕಾಶವಾಗಿ, ಸಹಜವಾಗಿ ಹೊಸ ಪರಿಕಲ್ಪನೆಗಳನ್ನು ಸಮಾಜದಿಂದ ಸ್ವೀಕರಿಸುತ್ತದೆ ಎಂದು ಮೂಲಗಳು ತಿಳಿಸಿವೆ,

Exit mobile version