ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿಜಯದಶಮಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲು ಆರೆಸ್ಸೆಸ್ ತೀರ್ಮಾನಿಸಿದೆ. ಎರಡು ಬಾರಿ ಹಿಮಾಲಯ ಪರ್ವತಾತೋಹಣ ಮಾಡಿದ ವಿಶ್ವದ ಮೊದಲ ಮಹಿಳೆ ಸಂತೋಷ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದುವರೆಗೆ ಆರ್‌ಎಸ್‌ಎಸ್ ವಿಜಯದಶಮಿಯಲ್ಲಿ ಪುರುಷರು ಮಾತ್ರ ಭಾಗವಹಿಸುತ್ತಿದ್ದರು. ಈಗ ಮಹಿಳೆಯರನ್ನೂ ಆಹ್ವಾನಿಸಲು ಸಂಘ ನಿರ್ಧರಿಸಿದೆ. ಹರ್ಯಾಣದ ಹಳ್ಳಿಯೊಂದರಲ್ಲಿ ಜಯಿಸಿದ ಸಂತೋಷ್ ಯಾದವ್ 1992 ಹಾಗೂ 1993ರಲ್ಲಿ ಹಿಮಾಲಯ ಏರಿದರು.
ತಾವು ಪರ್ವತಾರೋಹಣ ಮಾಡಿದ್ದಷ್ಟೆ ಅಲ್ಲದೆ, 1992ರಲ್ಲಿ ತಮ್ಮ ಆಕ್ಸಿಜನ್ ಅನ್ನು ಹಂಚಿಕೊಳ್ಳುವ ಮೂಲಕ ಮತ್ತೊಬ್ಬ ಪರ್ವತಾರೋಹಿ ಮೋಹನ್ ಸಿಂಗ್‌ರ ಪ್ರಾಣ ಉಳಿಸಿದ್ದರು. ಈ ಸಾಹಸ ಮಾಡಿದಾಗ ಅವರಿಗೆ ಕೇವಲ 20 ವರ್ಷ. ಈ ವಯಸ್ಸಿಗೆ ಹಿಮಾಲಯ ಏರಿದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಸಂತೋಷ್ ಯಾದವ್ ಹೊಂದಿದ್ದಾರೆ. 2000ನೇ ಇಸವಿಯಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಆರ್‌ಎಸ್‌ಎಸ್ ಶಾಖೆಗಳು ಕೇವಲ ಪುರುಷರಿಗೆ ನಡೆಯುತ್ತವೆ. ಮಹಿಳೆಯರಿಗೆ ರಾಷ್ಟ್ರ ಸೇವಿಕಾ ಸಮಿತಿ ಹೆಸರಿನಲ್ಲಿ ಶಾಖೆಗಳು ನಡೆಯುತ್ತವೆ. ಅಲ್ಲಿಗೆ ಸಮಾಜದ ಖ್ಯಾತ ಮಹಿಳೆಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗುತ್ತದೆ. ಆದರೆ ಮೊದಲ ಬಾರಿಗೆ ನಾಗ್ಪುರದಲ್ಲಿ ನಡೆಯುವ ವಿಜಯದಶಮಿ ಉತ್ಸವಕ್ಕೆ ಮಹಿಳೆಯೊಬ್ಬರನ್ನು ಆಹ್ವಾನಿಸಲಾಗುತ್ತಿದೆ. ಈ ಬಾರಿ ವಿಜಯದಶಮಿ ಕಾರ್ಯಕ್ರಮ ಆಕ್ಟೋಬರ್ 5ರಂದು ನಾಗಪುರದ ರೇಶಿಮ್‌ಬಾಗ್ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸರಸಂಘಚಾಲಕ ಮೋಹನ್ ಭಾಗವತ್ ಮಾತನಾಡುತ್ತಾರೆ.
ಇದನ್ನೂ ಓದಿ | Mohan Bhagwat | ಮಾದರಿ ಸಮಾಜ ನಿರ್ಮಿಸುವುದೇ ಆರೆಸ್ಸೆಸ್ ಗುರಿ ಎಂದ ಮೋಹನ್ ಭಾಗವತ್