ಭೋಪಾಲ್: ಹಿಂದೂ ಹೆಣ್ಣು ಮಕ್ಕಳು ತಮ್ಮ ಬ್ಯಾಗುಗಳಲ್ಲಿ ಬಾಚಣಿಗೆ, ಲಿಪ್ಸ್ಟಿಕ್ ಬದಲಾಗಿ ಚಾಕು ಇಟ್ಟುಕೊಳ್ಳಬೇಕು. ಜಿಹಾದಿಗಳು ಹತ್ತಿರ ಬಂದರೆ ಚಾಕು ಬಳಸಿ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಸಾಧ್ವಿ ಪ್ರಾಚಿ (Sadhvi Prachi) ಹೇಳಿದ್ದಾರೆ.
ಇದನ್ನೂ ಓದಿ: Pragya Singh Thakur | ಪ್ರಚೋದನಕಾರಿ ಭಾಷಣ; ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎಫ್‌ಐಆರ್
ಮಧ್ಯಪ್ರದೇಶದ ರತ್ಲಂ ಪ್ರವಾಸದಲ್ಲಿರುವ ವಿಶ್ವ ಹಿಂದೂ ಪರಿಷತ್ ನಾಯಕಿ ಈ ರೀತಿಯ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ರತ್ಲಂನಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಾಚಿ, “ಹಿಂದೂ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾಗಿ ಬದುಕಬೇಕು. ಮುಸ್ಲಿಮರು ಅವರ ಧರ್ಮದ ಆಚಾರ ವಿಚಾರ ಪಾಲಿಸುವಂತೆ ಹಿಂದೂ ಧರ್ಮದ ಹೆಣ್ಣು ಮಕ್ಕಳೂ ಕೂಡ ನಮ್ಮ ಧರ್ಮದ ಆಚಾರ ವಿಚಾರ ಪಾಲಿಸಬೇಕು.” ಎಂದು ಹೇಳಿದ್ದಾರೆ.
ಪ್ರಾಚಿ ಅವರು ಈ ಹಿಂದೆಯೂ ಮುಸ್ಲಿಂ ಧರ್ಮವನ್ನು ವಿರೋಧಿಸಿ ಅನೇಕ ಹೇಳಿಕೆ ನೀಡಿದ್ದು, ಅವುಗಳು ವಿವಾದಕ್ಕೆ ಈಡಾಗಿದ್ದವು.