Site icon Vistara News

Blackbuck Case: ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್ ಹಣ ಕೊಡಲು ಮುಂದಾಗಿದ್ದರು: ಗ್ಯಾಂಗ್‌ಸ್ಟರ್ ಬಿಷ್ಣೋಯಿ

Salman Khan receives threat on e-mail, FIR registered by Mumbai Police

ಸಲ್ಮಾನ್‌ ಖಾನ್

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರಿಗೆ ಕೊಲೆ ಬೆದರಿಕೆ ಹಾಕಿ, ಇದೀಗ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ(Lawrence Bishnoi), ನಟನಿಗೆ ಮತ್ತೆ ಬೆದರಿಕೆ ಹಾಕಿದ್ದಾನೆ. ಬಿಷ್ಣೋಯ್ ಸಮುದಾಯದ ಪೂಜ್ಯ ಪ್ರಾಣಿಯಾಗಿರುವ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಭಾಗಿಯಾಗಿರುವ ಕಾರಣ ಬಿಷ್ಣೋಯ್ ಈ ಹಿಂದೆ ಸಲ್ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ, ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹಣ ನೀಡಲು ಮುಂದಾಗಿದ್ದರು. ಆದರೆ, ನಾವು ತಿರಸ್ಕರಿಸಿದ್ದೆವು ಎಂದು ಲಾರೆನ್ಸ್ ಬಿಷ್ಣೋಯಿ ಹೇಳಿದ್ದಾರೆನ್ನಲಾಗಿದೆ(Blackbuck Case).

ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ತಮ್ಮ ಸಮುದಾಯಕ್ಕೆ ಕ್ಷಮೆ ಕೋರಬೇಕು ಮತ್ತು ಅದೇ ಕಾರಣಕ್ಕಾಗಿ ತಮ್ಮ ಸಮುದಾಯದ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಬೇಕೆಂದು ಎಂದು ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದಾನೆ. ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಎಬಿಪಿ ನ್ಯೂಸ್‌ಗೆ ಸಂದರ್ಶನ ನೀಡಿದ್ದು, ಕೃಷ್ಣಮೃಗವನ್ನು ಬೇಟೆಯಾಡಿ ಕೊಂದಿದ್ದಕ್ಕಾಗಿ ಇಡೀ ಬಿಷ್ಣೋಯ್ ಸಮುದಾಯವು ಸಲ್ಮಾನ್ ವಿರುದ್ಧ ದ್ವೇಷವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಬಿಷ್ಣೋಯ್ ಸಮುದಾಯಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಇಲ್ಲವೇ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಲಾರೆನ್ಸ್, ಈ ಹಿಂದೆ ಸಲ್ಮಾನ್ ಖಾನ್ ಹಣ ಕೊಡಲು ಮುಂದಾಗಿದ್ದರು. ಆದರೆ, ನಮ್ಮ ಸಮುದಾಯವು ಅದನ್ನು ನಿರಾಕರಿಸಿತ್ತು ಎಂದು ಹೇಳಿದ್ದಾನೆ.

ಇದನ್ನೂ ಓದಿ: Sidhu Moose Wala Murder | ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ 10 ದಿನ ಎನ್‌ಐಎ ಕಸ್ಟಡಿಗೆ

ನಮಗೆ ಹಣ ಬೇಡ. ಅವರು ನಮ್ಮ ಸಮುದಾಯದ ದೇವಸ್ಥಾನಕ್ಕೆ ಭೇಟಿ ನೀಡಿ, ನಮ್ಮಲ್ಲಿ ಕ್ಷಮೆ ಯಾಚಿಸಬೇಕು. ಕೃಷ್ಣಮೃಗ ಬೇಟೆಯಾಡುವ ಮೂಲಕ ನಮ್ಮ ಇಡೀ ಸಮುದಾಯವನ್ನು ಅವಮಾನಿಸಿದ್ದಾರೆ. ಅವರ ವಿರುದ್ಧ ಕೇಸ್ ಕೂಡ ಇದೆ. ಹಾಗಿದ್ದೂ ಅವರು ಕ್ಷಮೆ ಕೇಳಲು ನಿರಾಕರಿಸಿದ್ದಾರೆ ಎಂದು ಬಿಷ್ಣೋಯಿ ಹೇಳಿದ್ದಾನೆ.

Exit mobile version