Site icon Vistara News

Sanjay Singh | 21 ವರ್ಷ ಹಿಂದಿನ ಪ್ರಕರಣದಲ್ಲಿ ಆಪ್ ಸಂಸದನಿಗೆ 3 ತಿಂಗಳು ಜೈಲು ಶಿಕ್ಷೆ! ಏನಿದು ಕೇಸ್?

Sanjay Singh

ಲಕ್ನೋ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ (Sanjay Singh) ಅವರಿಗೆ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಉತ್ತರಪ್ರದೇಶದ ಸುಲ್ತಾನ್‌ಪುರದವರಾಗಿರುವ ಅವರು 2001ರಲ್ಲಿ ನಡೆಸಿದ್ದ ಪ್ರತಿಭಟನೆಯ ಸಂಬಂಧ ಇದೀಗ ಸಂಸದರು ಮತ್ತು ಶಾಸಕರ ನ್ಯಾಯಾಲಯವು ಈ ಶಿಕ್ಷೆ ನೀಡಿದೆ. ಅವರೊಂದಿಗೆ ಸಮಾಜವಾದಿ ಪಕ್ಷದ ಮಾಜಿ ಶಾಸಕ ಅನೂಪ್‌ ಸಂದ ಸೇರಿ ಒಟ್ಟು ಐವರಿಗೆ ಶಿಕ್ಷೆ ನೀಡಲಾಗಿದೆ. ಈ ಆರು ಮಂದಿ ತಲಾ 1,500 ರೂ. ದಂಡ ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ: AAP MLAs | ಗುಜರಾತ್‌ ಆಪ್ ಶಾಸಕರ ಜತೆಗೆ ಮೂವರು ಪಕ್ಷೇತರ ಎಂಎಲ್‌ಎಗಳು ಬಿಜೆಪಿಗೆ?


2001ರಲ್ಲಿ ಉತ್ತರಪ್ರದೇಶದಲ್ಲಿ ರಾಜನಾಥ ಸಿಂಗ್‌ ಅವರ ಬಿಜೆಪಿ ಸರ್ಕಾರವಿತ್ತು. ಆ ವೇಳೆ ಸುಲ್ತಾನ್‌ಪುರದಲ್ಲಿ ವಿದ್ಯುತ್‌ ಕಡಿತ ಹಾಗೂ ನೀರಿನ ಸಂಪರ್ಕ ಸರಿಯಿಲ್ಲವೆಂದು ದೂರಿ ಸಂಜಯ್‌ ಸಿಂಗ್‌ ಪ್ರತಿಭಟನೆ ನಡೆಸಿದ್ದರು. ಅವರಿಗೆ ಅನೇಕ ನಾಯಕರು ಹಾಗೂ ಕಾರ್ಯಕರ್ತರು ಸಾಥ್‌ ಕೊಟ್ಟಿದ್ದರು. ಪ್ರತಿಭಟನೆಯ ಉಗ್ರ ರೂಪ ಪಡೆದುಕೊಂಡಿದ್ದು, ಸಾರ್ವಜನಿಕರಿಗೆ ತೊಂದರೆಯುಂಟಾಗಿತ್ತು. 2001ರ ಜೂನ್‌ 19ರಂದು ಈ ಪ್ರತಿಭಟನೆ ನಡೆದಿದ್ದು, ಪೊಲೀಸರು ಐಪಿಸಿ ಸೆಕ್ಷನ್‌ 143 ಮತ್ತು 341 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: BJP Poaching AAP | ದೆಹಲಿಯ ಒಬ್ಬ ಕೌನ್ಸಿಲರ್‌ಗೆ ಬಿಜೆಪಿ 10 ಕೋಟಿ ರೂ. ಆಫರ್‌, ಆಪ್‌ ಗಂಭೀರ ಆರೋಪ

ಆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಈಗ ನೀಡಿದೆ. ತೀರ್ಪಿನ ವೇಳೆ ನ್ಯಾಯಾಲಯದಲ್ಲಿದ್ದ ಸಂಜಯ್‌ ಸಿಂಗ್‌ ಅವರು ಬಿಜೆಪಿಯಿಂದಾಗಿ ಪ್ರಕರಣ ಉಗ್ರ ರೂಪ ತಾಳಿತು. ಇಲ್ಲವಾದಲ್ಲಿ ಶಾಂತಿಯುತ ಹೋರಾಟವಾಗಿರುತ್ತಿತ್ತು ಎಂದು ದೂರಿದ್ದಾರೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರುವುದಾಗಿ ಅವರು ಹೇಳಿದ್ದಾರೆ.

Exit mobile version