Site icon Vistara News

Video | ಜೈಲಲ್ಲಿ ಸರಿಯಾಗಿ ಊಟ ಕೊಡದೆ 28 ಕೆಜಿ ತೂಕ ನಷ್ಟವಾಯಿತು ಎಂದಿದ್ದ ದೆಹಲಿ ಸಚಿವ ಸತ್ಯೇಂದ್ರ ಜೈನ್​; ಆದರೆ ವಾಸ್ತವ ಏನು?

Satyendar Jain getting proper food in Tihar jail Video Viral

ನವ ದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್​ ಅವರ ವಿಡಿಯೊಗಳು ಒಂದರ ಮೇಲೊಂದರಂತೆ ವೈರಲ್​ ಆಗುತ್ತಿವೆ. ಜೈಲಿನಲ್ಲಿ ಕೈಕಾಲುಗಳಿಗೆ ಮಸಾಜ್​ ಮಾಡಿಸಿಕೊಳ್ಳುತ್ತಿರುವ ವಿಡಿಯೊವೊಂದು ವೈರಲ್​ ಆಗಿ, ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಈಗ ಅವರು ಜೈಲಿನಲ್ಲಿ ತಮ್ಮ ಕೋಣೆಯಲ್ಲಿ ಕುಳಿತು ಭರ್ಜರಿ ಭೋಜನ ಸವಿಯುತ್ತಿರುವ ವಿಡಿಯೊ, ಫೋಟೋಗಳು ವೈರಲ್ ಆಗುತ್ತಿವೆ. ಬಗೆಬಗೆಯ ಹಣ್ಣು, ತರಕಾರಿ, ಸಲಾಡ್​ ತಿನ್ನುತ್ತಿರುವ ಅವರಿಗೆ, ಮತ್ತೊಬ್ಬ ಬಂದು ಇನ್ನೇನೋ ತಿನಿಸನ್ನು ಕೊಡುವುದನ್ನೂ ವಿಡಿಯೊದಲ್ಲಿ ನೋಡಬಹುದು.

ಪ್ಲಾಸ್ಟಿಕ್​ ಬಾಕ್ಸ್​​ನಲ್ಲಿ ಈ ತಿನಿಸುಗಳಿದ್ದು, ಅವು ಪಾರ್ಸೆಲ್​ ಬಂದಿದ್ದು ಎಂಬುದು ಗೊತ್ತಾಗುತ್ತವೆ. ಸಾಮಾನ್ಯವಾಗಿ ಜೈಲುವಾಸಿಗಳಿಗೆ ಹೀಗೆ ಹೊರಗಡೆಯಿಂದ ಪಾರ್ಸೆಲ್​​ ತರಲು ಅವಕಾಶ ಇಲ್ಲ. ಅವರು ಜೈಲೂಟವನ್ನೇ ತಿನ್ನಬೇಕು. ಆದರೆ ಈ ಸಚಿವರ ಎದುರಿಗೆ ಭರ್ಜರಿ ಊಟವೇ ಇದೆ.

ತನ್ನನ್ನು ಮಾರ್ಚ್​ 12ರಂದು ಬಂಧಿಸಿದಾಗಿನಿಂದಲೂ ತಿಹಾರ್​ ಜೈಲಿನಲ್ಲಿ ಸರಿಯಾದ ಪ್ರಮಾಣದಲ್ಲಿ ಊಟ ಕೊಡುತ್ತಿಲ್ಲ. ವೈದ್ಯಕೀಯ ಚಿಕಿತ್ಸೆ ಸೌಲಭ್ಯವೂ ಇಲ್ಲ. ಇದರಿಂದಾಗಿ ನಾನು 28 ಕೆಜಿ ತೂಕ ಕಳೆದುಕೊಂಡಿದ್ದೇನೆ ಎಂದು ಸತ್ಯೇಂದ್ರ ಜೈನ್​ ಅವರು ವಿಚಾರಣಾ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಮಂಗಳವಾರ ದೂರು ಸಲ್ಲಿಸಿದ್ದರು. ಆದರೆ ಈಗ ವೈರಲ್ ಆಗಿರುವ ವಿಡಿಯೊ ಸೆಪ್ಟೆಂಬರ್​ 23ನೇ ತಾರೀಖಿನದಾಗಿದ್ದು, ಅದನ್ನು ನೋಡಿದ ಮೇಲೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇಷ್ಟು ಊಟ ಮಾಡಿಯೂ ಜೈನ್​ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದೆ.
ಈ ಮಧ್ಯೆ ಸಚಿವರು 28 ಕೆಜಿ ತೂಕನಷ್ಟವಾಗಿಲ್ಲ. ಬದಲಿಗೆ ಅವರ ತೂಕ 8 ಕೆಜಿಗಳಷ್ಟು ಹೆಚ್ಚಾಗಿದೆ ಎಂದು ತಿಹಾರ ಜೈಲು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದೆಹಲಿ ಸಚಿವ ಸತ್ಯೇಂದ್ರ ಜೈನ್​ಗೆ ಜೈಲಲ್ಲಿ ಮಸಾಜ್​ ಮಾಡಿದ್ದು ಥೆರಪಿಸ್ಟ್​ ಅಲ್ಲ ರೇಪಿಸ್ಟ್​!

Exit mobile version