Site icon Vistara News

Bakrid: ಬಕ್ರೀದ್ ವೇಳೆ ಜೈನರು ಮುಸ್ಲಿಮರ ವೇಷ ಧರಿಸಿ 124 ಮೇಕೆ ಖರೀದಿಸಿದರು! ಉದ್ದೇಶ ಹೃದಯಸ್ಪರ್ಶಿ

Saved Goats

ನವದೆಹಲಿ: ಜೈನ ಸಮುದಾಯದ (jain  community) ಸುಮಾರು 25 ಸದಸ್ಯರು ದೆಹಲಿಯಲ್ಲಿ (delhi) ಬಕ್ರೀದ್ (Bakrid) ಸಂದರ್ಭದಲ್ಲಿ ಮುಸ್ಲಿಮರಂತೆ (muslim) ವೇಷಭೂಷಣ ಧರಿಸಿ 124 ಮೇಕೆಗಳನ್ನು (Saved Goats) ಖರೀದಿಸಿದರು. ಈ ಮೂಲಕ ಆ ಮೇಕೆಗಳ ಜೀವ ರಕ್ಷಿಸಿದರು.

ಸಿಎ ವಿವೇಕ್ ಜೈನ್ ಎಂಬುವರ ನೇತೃತ್ವದಲ್ಲಿ ಸಂಗ್ರಹಿಸಿದ ಸುಮಾರು 15 ಲಕ್ಷ ರೂ. ಅನ್ನು ಖರ್ಚು ಮಾಡಿ ಮೇಕೆಗಳನ್ನು ಖರೀದಿಸಿ ಅವುಗಳನ್ನು ದೇವಾಲಯದಲ್ಲಿ ಸಾಕುತ್ತಿದ್ದಾರೆ. ಅಂಗಡಿಯವರೊಂದಿಗೆ ಚೌಕಾಸಿ ಮಾಡಿ ತಲಾ 10,000 ರೂ. ಗಳನ್ನು ನೀಡಿ ಮೇಕೆಗಳನ್ನು ಅವರು ಖರೀದಿ ಮಾಡಿದರು.

ದೆಹಲಿಯ ಜಾಮಾ ಮಸೀದಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಚಾಂದಿನಿ ಚೌಕ್‌ನ ದೇವಸ್ಥಾನದ ಅಂಗಳದಲ್ಲಿ ನೂರಾರು ಮೇಕೆಗಳು ಈಗ ಸಿಎ ವಿವೇಕ್ ಜೈನ್ ಅವರನ್ನು ಸುತ್ತುವರೆದಿವೆ. ಅವುಗಳನ್ನು ಶಾಂತಗೊಳಿಸಲು ಅವರು ಸ್ಪೀಕರ್‌ನಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುವ ಪ್ರಬಲ ಜೈನ ಮಂತ್ರವನ್ನು ಉಚ್ಚರಿಸುತ್ತಿದ್ದರು. ಈ ಮೇಕೆಗಳನ್ನು ನೋಡಿದರೆ ಪಾಪ ಅನಿಸುತ್ತಿತ್ತು. ಅವುಗಳನ್ನು ವಧೆಗಾಗಿ ಕೂಡಿ ಹಾಕಲಾಗಿತ್ತು. ನಾವು ಅವರಿಗೆ ಹೊಸ ಜೀವನವನ್ನು ನೀಡಿದ್ದೇವೆ. ಈ ಯಾವ ಸಂಗತಿಗಳೂ ಪಾಪ ಆ ಕುರಿಗಳಿಗೆ ತಿಳಿದಿರುವುದಿಲ್ಲ. ಅವುಗಳ ಜೀವ ಉಳಿಸಿದ ತೃಪ್ತಿ ನಮಗಿದೆ ಎನ್ನುತ್ತಾರೆ ವಿವೇಕ್.

ಈದ್‌ಗೆ ಮುನ್ನ ಸಿದ್ದಗೊಳ್ಳುವ ಮೇಕೆ ಮಾರುಕಟ್ಟೆಗಳಂತೆಯೇ ಈಗ ಧರಂಪುರ ಪ್ರದೇಶದ ನಯಾ ಜೈನ ಮಂದಿರ ಕಾಣುತ್ತಿದೆ. ಚಾಂದಿನಿ ಚೌಕ್‌ನಲ್ಲಿ ವಾಸಿಸುವ ಜೈನರಿಗೆ ಈಗ ಮೇಕೆ ದರ್ಶನವಾಗುತ್ತಿದೆ. ಮೇಕೆಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಕೆಲವರು ಅವುಗಳ ಮೇವಿಗಾಗಿ ಹಣವನ್ನು ದಾನ ಮಾಡಿದರು, ಇನ್ನು ಕೆಲವರು ಹೆಮ್ಮೆಯಿಂದ ಮುದ್ದಿಸಿದರು, ಮತ್ತು ಕೆಲವರು ತಮ್ಮ ಧರ್ಮದ ಸದ್ಗುಣಗಳ ಬಗ್ಗೆ ಹೆಮ್ಮೆಪಟ್ಟರು.

ಪ್ರತಿ ವರ್ಷ ಮುಸ್ಲಿಂ ಹಬ್ಬಗಳ ಸಂದರ್ಭದಲ್ಲಿ ಭುಗಿಲೇಳುವ ಮೇಕೆ ಬಲಿಯ ಕುರಿತಾದ ಚರ್ಚೆಯ ಮಧ್ಯೆ ದೆಹಲಿಯ ಜೈನ ಸಮುದಾಯವು ಈಗ ಎಲ್ಲರ ಗಮನ ಸೆಳೆದಿದೆ ಮಾತ್ರವಲ್ಲ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ. ಎಕ್ಸ್ ನಲ್ಲಿ ಈ ಕುರಿತ ಪೋಸ್ಟ್ 21,000 ಕ್ಕೂ ಹೆಚ್ಚು ಮಂದಿ ಹಂಚಿಕೊಂಡಿದ್ದು, “ಜೈನ್” ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಅನ್ನು ಉಂಟು ಮಾಡಿದೆ. ದೇಶದಾದ್ಯಂತ ಇರುವ ನಮ್ಮ ಸಮುದಾಯದವರ ಕೊಡುಗೆ ಇದನ್ನು ಸಾಧ್ಯವಾಗಿಸಿದೆ. ನಾವು ಅದನ್ನು ಸಮಾಜ ಕಲ್ಯಾಣ ಎಂದು ಕರೆಯುತ್ತೇವೆ. ನಮ್ಮ ಧರ್ಮವು ನಮಗೆ ಕಲಿಸುವುದು ಇದನ್ನೇ. ಚಾಂದಿನಿ ಚೌಕ್‌ನ ಜೈನ ಸಮುದಾಯಕ್ಕೆ ಇದೊಂದು ‘ಐತಿಹಾಸಿಕ ಕ್ಷಣ’. ಇದು ನಮ್ಮ ಮೊದಲ ಹೆಜ್ಜೆ. ಇದನ್ನು ಮುಂದುವರಿಸುವುದಾಗಿ ವಿವೇಕ್ ಹೇಳಿದ್ದಾರೆ.


ಯಾವಾಗ ಈ ಯೋಚನೆ ಹುಟ್ಟಿಕೊಂಡಿತು?

ಗುರು ಸಂಜೀವ್ ಅವರು ಕರೆ ಮಾಡಿದ್ದಾಗ ಈದ್ ಹಬ್ಬದಂದು ಮೇಕೆಗಳನ್ನು ಕಡಿಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಏನಾದರೂ ಮಾಡಬೇಕೆಂದು ಬಯಸಿದ್ದರು. ಎಲ್ಲಾ ಮೇಕೆಗಳನ್ನು ಉಳಿಸಲು ಸಾಧ್ಯವಾಗದಿದ್ದರೂ ನಾವು ಎಷ್ಟು ಸಾಧ್ಯವೋ ಅಷ್ಟು ರಕ್ಷಿಸಬೇಕು ಎಂದು ನಿರ್ಧರಿಸಲಾಯಿತು ಎಂದು ಚಿರಾಗ್ ತಿಳಿಸಿದರು.

ಹೇಗಿತ್ತು ಕಾರ್ಯಾಚರಣೆ?

ಶೀಘ್ರದಲ್ಲೇ ಒಂದು ಯೋಜನೆ ಹಾಕಿಕೊಂಡು ಜೂನ್ 15ರ ಸಂಜೆ ಜೈನ ಸಮುದಾಯದ 25 ಜನರ ತಂಡವನ್ನು ರಚಿಸಲಾಯಿತು. ಹಣದ ಕೊಡುಗೆಯನ್ನು ಕೋರಿ ವಾಟ್ಸಾಪ್ ಸಂದೇಶವನ್ನು ಪ್ರಸಾರ ಮಾಡಲಾಗಿತ್ತು. ಅನಂತರ ತಂಡವು ಮೇಕೆಗಳನ್ನು ಮಾರಾಟ ಮಾಡುವ ಪ್ರದೇಶಗಳ ಸಮೀಕ್ಷೆ ನಡೆಸಿತು.

ನಾವು ಮುಸ್ಲಿಂ ಸಮುದಾಯದ ಸದಸ್ಯರಂತೆ ವೇಷಭೂಷಣ ತೊಟ್ಟು ಮೇಕೆಗಳನ್ನು ಮಾರಾಟ ಮಾಡುವ ಬೆಲೆಯ ಬಗ್ಗೆ ಕೇಳಿ ತಿಳಿದುಕೊಂಡರು. ಜೂನ್ 16ರಂದು ತಂಡವು ರಹಸ್ಯವಾಗಿ ಹಳೆ ದೆಹಲಿಯ ಜಾಮಾ ಮಸೀದಿ, ಮೀನಾ ಬಜಾರ್, ಮತೀಯ ಮಹಲ್ ಮತ್ತು ಚಿಟ್ಲಿ ಕಬರ್‌ಗಳಂತಹ ವಿವಿಧ ಮೇಕೆ ಮಾರುಕಟ್ಟೆಗಳಿಗೆ ಹೋಗಿ ಮೇಕೆಗಳನ್ನು ಖರೀದಿಸುವಾಗ ಯಾವುದೇ ತೊಂದರೆಯಾಗದಂತೆ ಧಿರಿಸು ಧರಿಸಿ ಇತರರೊಂದಿಗೆ ಬೆರೆಯಲು ಅನುವು ಮಾಡಿಕೊಡುವ ರೀತಿಯಲ್ಲಿ ಮಾತನಾಡಲು ಸೂಚಿಸಲಾಯಿತು.

ನಾವು ಯಾರೂ ಭಯಪಡಲಿಲ್ಲ. ನಾವು ಯಾರ ಭಾವನೆಗಳಿಗೂ ಧಕ್ಕೆ ತರಲು ಬಯಸುವುದಿಲ್ಲ. ನಾವು ಮುಸ್ಲಿಮೇತರರು ಎಂದು ಅವರಿಗೆ ತಿಳಿದಿದ್ದರೆ ಅವರು ಮೇಕೆಗಳನ್ನು ಹೆಚ್ಚಿನ ಬೆಲೆಗೆ ನಮಗೆ ಮಾರಾಟ ಮಾಡುತ್ತಿದ್ದರು ಮತ್ತು ಸಾಧ್ಯವಾದಷ್ಟು ಹೆಚ್ಚು ಮೇಕೆಗಳನ್ನು ರಕ್ಷಿಸಲು ನಮ್ಮಿಂದ ಸಾಧ್ಯವಾಗದೇ ಇರುತ್ತಿತ್ತು. ಹೀಗಾಗಿ ನಾವು ಅವರ ವೇಷಭೂಷಣ ಧರಿಸಿ ಹೋಗಿದ್ದೆವು ಎನ್ನುತ್ತಾರೆ ವಿವೇಕ್.

ಖರೀದಿ ಪ್ರಕ್ರಿಯೆಯು ಅನೇಕ ಸುತ್ತಿನ ಕಠಿಣ ಚೌಕಾಶಿಗಳನ್ನು ಒಳಗೊಂಡಿತ್ತು. ಆದರೆ ಅಂತಿಮವಾಗಿ ಆಡುಗಳನ್ನು ಪ್ರತಿಯೊಂದಕ್ಕೆ ಸರಾಸರಿ 10,000 ರೂ. ಗೆ ಖರೀದಿಸಲಾಯಿತು. ಆದರೆ ಹಳೆ ದೆಹಲಿಯ ಮಂಡಿಗಳಲ್ಲಿ ಈ ಮೇಕೆಗಳನ್ನು ಮಾರಾಟ ಮಾಡುತ್ತಿದ್ದ ರೀತಿ ವಿವೇಕ್ ಅವರನ್ನು ದಿಗ್ಭ್ರಮೆಗೊಳಿಸಿತು.

ಬೀದಿ ಬದಿಯ ವ್ಯಾಪಾರಿಯಿಂದ ಬಟ್ಟೆಗಳನ್ನು ಖರೀದಿಸುತ್ತಿರುವಂತೆ ಭಾಸವಾಯಿತು. ಮೇಕೆಗಳನ್ನು ಒಟ್ಟಿಗೆ ಕೂಡಿಹಾಕಲಾಯಿತು ಮತ್ತು ಕಳಪೆಯಾಗಿ ನಿರ್ವಹಿಸಲಾಯಿತು. ಜೀವಂತವಾಗಿರುವ ಈ ಪ್ರಾಣಿಗಳ ಬಗ್ಗೆ ಯಾವುದೇ ಮಾನವೀಯತೆ ಅಲ್ಲಿ ಇರಲಿಲ್ಲ. ಅಂತಿಮವಾಗಿ 124 ಮೇಕೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದೊಂದು ಸಂಭ್ರಮದ ಕ್ಷಣವಾಯಿತು ಎಂದರು ವಿವೇಕ್.


ಹಣ ಸಂಗ್ರಹ

ಇದಕ್ಕಾಗಿ ಗುಜರಾತ್, ಹೈದರಾಬಾದ್, ಕೇರಳ, ಪಂಜಾಬ್ ಮತ್ತು ಮಹಾರಾಷ್ಟ್ರದ ಜೈನ ಸಮುದಾಯದ ಸದಸ್ಯರಿಂದ 15 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ಉಳಿದ ಹಣವನ್ನು ಅವುಗಳ ಮೇವನ್ನು ಖರೀದಿಸಲು ಬಳಸಿರುವುದಾಗಿ ವಿವೇಕ್ ತಿಳಿಸಿದರು.

ಮೇಕೆಗಳ ಆಶ್ರಯದಾತ

ಮೊದಲಿಗೆ ನಾಲ್ಕು ಮೇಕೆಗಳನ್ನಾದರೂ ಖರೀದಿ ಮಾಡುವುದು ಸಾಧ್ಯವೋ ಎಂಬ ಅನುಮಾನವಿತ್ತು. ಆದರೆ ನಮ್ಮ ಮನವಿಗೆ ಸ್ಪಂದಿಸಿ ಅನೇಕರು ದೇಣಿಗೆಗಳನ್ನು ನೀಡಿದ್ದು, ಇದರಿಂದ 15 ಲಕ್ಷ ರೂ. ಸಂಗ್ರಹವಾಯಿತು. ಬಳಿಕ 124 ರಕ್ಷಕ ಆಡುಗಳನ್ನು ಎಲ್ಲಿ ಇಡುವುದು ಎನ್ನುವ ಪ್ರಶ್ನೆ ಕಾಡಿತ್ತು. ಬಳಿಕ ಬಾಗ್‌ಪತ್‌ನ ಅಮಿನಗರ ಸರಾಯ್‌ನಲ್ಲಿರುವ ಮನೋಜ್ ಜೈನ್ ಅವರು ಮೇಕೆಗಳಿಗೆ ನಿರ್ಮಿಸಿರುವ ವಸತಿ ಶಾಲೆಯಲ್ಲಿ ಅವುಗಳಿಗೆ ಆಶ್ರಯ ನೀಡಿದರು. ಅವರ ಆಶ್ರಯದಲ್ಲಿ ಪ್ರಸ್ತುತ 615 ಆಡುಗಳಿವೆ. ಇವೆಲ್ಲವನ್ನೂ ಭಾರತದಾದ್ಯಂತ ಈದ್ ಆಚರಣೆ ವೇಳೆ ರಕ್ಷಿಸಿರುವುದು.
ರಕ್ಷಿಸಲ್ಪಟ್ಟ ಎಲ್ಲವೂ ಗಂಡು ಆಡುಗಳು. ಬಕ್ರೀದ್ ಹಬ್ಬದಲ್ಲಿ ಗಂಡು ಮೇಕೆಗಳನ್ನು ಕಡಿಯಲಾಗುತ್ತದೆ.

ಇದನ್ನೂ ಓದಿ: Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

ಕೊನೆಯವರೆಗೂ ಈ ಮೇಕೆಗಳ ಆರೈಕೆಯ ಜವಾಬ್ದಾರಿಯನ್ನು ನಮ್ಮ ಆಶ್ರಯ ವಹಿಸಿಕೊಂಡಿದೆ. ಇದಕ್ಕಾಗಿ ಭಾರತದಾದ್ಯಂತ ಇರುವ ಜೈನ ಸಮುದಾಯದ ಸದಸ್ಯರು ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಮನೋಜ್ ಜೈನ್ ತಿಳಿಸಿದ್ದಾರೆ. ಮೇಕೆಗಳನ್ನು ಸಾಕಿರುವ ಜೈನ ದೇವಾಲಯದ ಬಳಿ ಬಂದ ಇಮ್ರಾನ್ ಮತ್ತು ಮುಷ್ತಾಕ್ ಎಂಬ ಹಿರಿಯ ಮುಸ್ಲಿಮರು, ಇದು ಮೇಕೆಗಳನ್ನು ಸಾಕಿರುವ ದೇವಾಲಯವಾಗಿದೆ. ಇವರು ಮೇಕೆಗಳನ್ನು ತೆಗೆದುಕೊಂಡು ಹೋಗಿರುವುದು ಗೊತ್ತು. ನಮ್ಮ ಧರ್ಮವು ಬಕ್ರೀದ್‌ನಂದು ಆಡುಗಳನ್ನು ಬಲಿಕೊಡಬೇಕೆಂದು ಕೇಳುತ್ತದೆ. ಅದನ್ನು ನಾವು ದೇವರ ಮೇಲಿನ ಭಕ್ತಿಯಿಂದ ಮಾಡುತ್ತೇವೆ. ಆದರೆ ನಾವು ಅದನ್ನು ಒತ್ತಾಯಿಸುವುದಿಲ್ಲ ಅಥವಾ ಪ್ರಚಾರ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ಮುಷ್ತಾಕ್ ಅವರು ಮಾತನಾಡಿ, ಇದು ಅವರ ಧರ್ಮ. ಪ್ರಾಣಿಗಳನ್ನು ಉಳಿಸುವುದು ಅದರ ಭಾಗವಾಗಿದ್ದರೆ ಪರವಾಗಿಲ್ಲ. ಪ್ರತಿಯೊಬ್ಬರೂ ಶಾಂತಿಯನ್ನು ತರುವ ಅಭ್ಯಾಸ ಮಾಡಲಿ ಎಂದು ಹೇಳಿದರು.

Exit mobile version