ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಭಾರತದಲ್ಲಿಯೇ ಅತ್ಯಂತ ಪ್ರಸಿದ್ಧ ಬ್ಯಾಂಕ್. ದೇಶದ ಮೂಲೆ ಮೂಲೆಯಲ್ಲೂ ಶಾಖೆಗಳನ್ನು ತೆರೆಯುವ ಮೂಲಕ ಎಸ್‌ಬಿಐ ಕೋಟ್ಯಂತರ ಗ್ರಾಹಕರನ್ನು ಪಡೆದುಕೊಂಡಿದೆ. ಆದರೆ ಈ ಎಸ್‌ಬಿಐನಲ್ಲಿರುವ ಖಾತೆಯಿಂದ (SBI Account) ಆಗಾಗ 295 ರೂ. ಕಡಿತವಾಗುತ್ತಿರುತ್ತದೆ ಎನ್ನುವುದು ಕೆಲವರು ದೂರು. ಅದಕ್ಕೆ ಕಾರಣ ಇಲ್ಲಿದೆ ನೋಡಿ.
ಇದನ್ನೂ ಓದಿ: SBI Sarvottam Scheme : ಎಸ್‌ಬಿಐ ಯೋಜನೆಯಲ್ಲಿ ಪಿಪಿಎಫ್, ಎನ್‌ಎಸ್‌ಸಿ, ಕೆವಿಪಿ, ಅಂಚೆ ಎಫ್‌ಡಿಗಿಂತ ಹೆಚ್ಚು ಬಡ್ಡಿ
ನೀವು ಎಸ್‌ಬಿಐ ಖಾತೆಯನ್ನು ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಮೂಲಕ ಏನನ್ನಾದರೂ ಖರೀದಿಸಿದ್ದರೆ ಈ ಸಮಸ್ಯೆ ನಿಮ್ಮ ಖಾತೆಯಲ್ಲಿ ಕಾಣಿಸಿಕೊಳ್ಳಬಹುದು. ಇದಕ್ಕೆ ಕಾರಣ NACH. ನಿಯತಕಾಲಿಕ ಪಾವತಿಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH) ಅನ್ನು ರಚಿಸಿದೆ. ನಿಮ್ಮ ಖಾತೆಯಿಂದ EMI ಗಳ ಸ್ವಯಂಚಾಲಿತ ಪಾವತಿಗಾಗಿ NACH ಅನ್ನು ಬಳಸಲಾಗುತ್ತದೆ.
ನೀವು EMI ಯಲ್ಲಿ ಏನನ್ನಾದರೂ ಖರೀದಿಸಿದಾಗ ಅಥವಾ ಸಾಲವನ್ನು ತೆಗೆದುಕೊಂಡಾಗ, ನಿಗದಿತ ದಿನಾಂಕದಂದು ನಿಮ್ಮ ಉಳಿತಾಯ ಖಾತೆಯಿಂದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ನೀವು ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಅನ್ನು ಇರಿಸಬೇಕಾಗುತ್ತದೆ. ಪ್ರತಿ ತಿಂಗಳ 5ನೇ ತಾರೀಕಿನಂದು EMI ಕಡಿತಗೊಳಿಸಬೇಕಾದರೆ, 4ನೇ ತಾರೀಕಿನಂದೇ ನೀವು ನಿಮ್ಮ ಖಾತೆಯಲ್ಲಿ ಹಣ ಇಡಬೇಕು.
ಇದನ್ನೂ ಓದಿ: SBI FD Interest rate : ಎಸ್‌ಬಿಐ ಎಫ್‌ಡಿ ಬಡ್ಡಿ ದರ 7.1%ಕ್ಕೆ ಏರಿಕೆ, ಇಲ್ಲಿದೆ ಡಿಟೇಲ್ಸ್
ಒಂದು ವೇಳೆ ನೀವು ನಿಮ್ಮ ಖಾತೆಯಲ್ಲಿ EMIಗೆ ಬೇಕಾದಷ್ಟು ಹಣ ಇಡುವಲ್ಲಿ ವಿಫಲವಾದರೆ, ಬ್ಯಾಂಕ್ 250 ರೂ. ದಂಡವನ್ನು ವಿಧಿಸುತ್ತದೆ. ಈ ದಂಡಕ್ಕೆ 18% ರಷ್ಟು ಜಿಎಸ್‌ಟಿ ಅನ್ನೂ ಹಾಕಲಾಗುತ್ತದೆ. ಆದ್ದರಿಂದ 250ರೂ.ಗೆ 45 ರೂ. ಜಿಎಸ್‌ಟಿ ಸೇರಿ ಒಟ್ಟು 295 ರೂ. ಅನ್ನು ಖಾತೆಯಿಂದ ಕಡಿತ ಮಾಡಿಕೊಳ್ಳಲಾಗುತ್ತದೆ.