ನವದೆಹಲಿ: ಅನುಮಾನಾಸ್ಪದ ಚಟುವಟಿಕೆಗಳಿಂದಾಗಿ ನಿಮ್ಮ ಬ್ಯಾಂಕ್ ಖಾತೆ (Bank Account) ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎಂಬ ಸಂದೇಶವು ಕಳೆದ ಕೆಲವು ದಿನಗಳಿಂದ ಸ್ಟೇಟ್ ಬ್ಯಾಂಕ್ ಇಂಡಿಯಾ(SBI) ಗ್ರಾಹಕರಿಗೆ ಬರುತ್ತಿವೆ. ಸ್ಥಗಿತವಾಗಿರುವ ಖಾತೆಯನ್ನು ಸಕ್ರಿಯ ಮಾಡಲು, ಲಗತ್ತಿಸಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂಬ ಮಾಹಿತಿಯನ್ನು ಸಂದೇಶದಲ್ಲಿ ತಿಳಿಸಲಾಗಿದೆ. ವಾಸ್ತವದಲ್ಲಿ ಇದೊಂದು ವಂಚನೆಯ ಟ್ರಿಕ್ ಆಗಿದ್ದು, ಹೀಗೆ ಬಂದ ಸಂದೇಶದ ಜತೆಗಿನ ಲಿಂಕ್ ಮೇಲೆ ಕ್ಲಿಕ್ ಮಾಡಲು ಹೋಗಬೇಡಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ (PIB Fact Check) ಎಚ್ಚರಿಕೆಯನ್ನು ನೀಡಲಾಗಿದೆ(Scam Alert).
ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್
ಇದೊಂದು ಫೇಕ್ ಮೆಸೇಜ್ ಆಗಿದೆ ಎಂದು ಸರ್ಕಾರಿ ಫ್ಯಾಕ್ಟ್ ಚೆಕ್ಕರ್ ಪಿಐಬಿ ಫ್ಯಾಕ್ಟ್ ಚೆಕ್ (PIB Fact Check) ಎಚ್ಚರಿಸಿದೆ. ಸಂಶಯಾಸ್ಪದ ಚಟುವಟಿಕೆಯಿಂದಾಗಿ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ ಎಂದು ಎಸ್‌ಬಿಐ ಹೆಸರಿನಲ್ಲಿ ನಕಲಿ ಸಂದೇಶವೊಂದು ಗ್ರಾಹಕರಿಗೆ ರವಾನಿಸಲಾಗುತ್ತಿದೆ. ಈ ರೀತಿಯ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಲು ಕೇಳುವ ಇಮೇಲ್‌ಗಳು ಅಥಾ ಸಂದೇಶಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ. ಅಂತಹ ಸಂದೇಶಗಳನ್ನು ತಕ್ಷಣವೇ report.phishing@sbi.co.in ಮೂಲಕ ವರದಿ ಮಾಡಬೇಕು ಎದು ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಏನಾಗುತ್ತದೆ?
ಹೀಗೆ ಬಂದ ಸಂದೇಶದ ಜತೆಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ನಿಮಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಹ್ಯಾಕರ್ಸ್ ನಿಮ್ಮ ಮಾಹಿತಿಯನ್ನು ಕದಿಯುವುದಕ್ಕಾಗಿ ಲಿಂಕ್‌ನಲ್ಲಿ ಮಾಲ್ವೇರ್ ಅನ್‌ಸ್ಟಾಲ್ ಮಾಡಿರುವ ಸಾಧ್ಯತೆ ಇರುತ್ತದೆ. ಒಂದೊಮ್ಮೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಹ್ಯಾಕರ್ಸ್ ದೊರದೆಲ್ಲೆಲ್ಲೂ ಕುಳಿತುಕೊಂಡು ನಿಮ್ಮ ಬ್ಯಾಂಕ್ ಖಾತೆಯನ್ನು ನಿರ್ಹವಣೆ ಮಾಡುವ ಅಪಾಯ ಇದ್ದೇ ಇರುತ್ತದೆ.
ಗ್ರಾಹಕರ ರಕ್ಷಣೆ ಹೇಗೆ?
ನಿಮಗೂ ಇಂಥ ಮೆಸೇಜ್ ಬಂದಿದ್ದರೆ, ಸಂಬಂಧಿಸಿದ ಬ್ಯಾಂಕ್ ಸಂಪರ್ಕಿಸಬೇಕು ಮತ್ತು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಒಂದು ವೇಳೆ, ನೀವು ಎಸ್‌ಬಿಐ ಗ್ರಾಹಕರಾಗಿದ್ದಾರೆ, ಇಂಥ ವಂಚನೆಯ ಸಂದೇಶಗಳ ಕುರಿತು report.phishing@sbi.co.in ಮೂಲಕ ರಿಪೋರ್ಟ್ ಮಾಡಬಹುದು.
ಇದನ್ನೂ ಓದಿ: Fact Check: ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಪಾಕ್ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದು ನಿಜವೇ? ಇಲ್ಲಿದೆ ಮಾಹಿತಿ
ನಿಮ್ಮ ಖಾತೆಯನ್ನು ನವೀಕರಣ ಮಾಡಬೇಕು ಅಥವಾ ಗುರುತು ದೃಢೀಕರಣದ ಅಗತ್ಯವಿದೆ ಎಂದು ಹೇಳಿಕೊಂಡು ಕರೆಗಳು, ಮತ್ತು ಇಮೇಲ್‌ಗಳು, ಸಂದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಲು ಹೋಗಬೇಡಿ ಎಂದು ಎಲ್ಲ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಚ್ಚರಿಸುತ್ತಲೇ ಇರುತ್ತವೆ. ಜಾಗೃತಿಯನ್ನು ಮೂಡಿಸುವುದಕ್ಕಾಗಿ ಸಂದೇಶಗಳನ್ನು ಕೂಡ ಕಳುಹಿಸುತ್ತೇವೆ. ಹಾಗಾಗಿ, ಇಂಥ ಅನುಮಾನಾಸ್ಪದರ ಸಂದೇಶಗಳ ಬಗ್ಗೆ ಯಾವಾಗಲೂ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.