ಇಂಫಾಲ್: ಮಣಿಪುರದ ನೋನಿ ಜಿಲ್ಲೆಯಲ್ಲಿ ಶಾಲಾ ಬಸ್ವೊಂದು ಅಪಘಾತಕ್ಕೀಡಾಗಿ 8 ಮಕ್ಕಳು ಮೃತಪಟ್ಟು, 20ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಇಂಫಾಲ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇವರೆಲ್ಲ ತಂಬಳ್ನು ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳಾಗಿದ್ದು, ವಾರ್ಷಿಕ ಅಧ್ಯಯನ ಪ್ರವಾಸಕ್ಕೆಂದು ನೋನಿ ಜಿಲ್ಲೆಯ ಖೌಪುಮ್ಗೆ ಹೋಗುತ್ತಿದ್ದರು. ಎರಡು ಬಸ್ಗಳಲ್ಲಿ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುತ್ತಿದ್ದರು. ಒಂದು ಬಸ್ನಲ್ಲಿ ಹುಡುಗಿಯರು ಮತ್ತು ಇನ್ನೊಂದು ಬಸ್ನಲ್ಲಿ ಹುಡುಗರು ಪ್ರಯಾಣ ಮಾಡುತ್ತಿದ್ದರು. ಅದರಲ್ಲಿ ಹೆಣ್ಣುಮಕ್ಕಳು ಪ್ರಯಾಣ ಮಾಡುತ್ತಿದ್ದ ಬಸ್, ಇಂಫಾಲ್ನಿಂದ 55 ಕಿಮೀ ದೂರದಲ್ಲಿರುವ, ಗುಡ್ಡಗಾಡು ಜಿಲ್ಲೆಯಾದ ಲಾಂಗ್ಸೈ ಬಳಿ ಪಲ್ಟಿಯಾಗಿದೆ. ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಬಸ್ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಬಸ್ ಅಪಘಾತವಾದ ವಿಡಿಯೊ ವೈರಲ್ ಆಗಿದೆ.
ಘಟನೆ ಬಗ್ಗೆ ಟ್ವೀಟ್ ಮಾಡಿದ ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಅವರು ‘ಶಾಲಾ ಮಕ್ಕಳಿದ್ದ ಬಸ್ ಅಪಘಾತಕ್ಕೀಡಾದ ಸುದ್ದಿ ಕೇಳಿ ತುಂಬ ನೋವಾಯಿತು. ಎಸ್ಡಿಆರ್ಎಫ್, ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿವೆ. ಕೆಲವು ಶಾಸಕರೂ ಕೂಡ ಅಲ್ಲಿಗೆ ಹೋಗಿ ವರದಿ ಪಡೆದಿದ್ದಾರೆ. ಸ್ಥಳದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಾನೂ ವರದಿಯನ್ನು ಪಡೆದಿದ್ದೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ: ಶಾಲಾ ಬಸ್ ಗುದ್ದಿ ಬಾಲಕಿ ದುರ್ಮರಣ