Site icon Vistara News

Hijab for Hindu Girls: ಮಧ್ಯ ಪ್ರದೇಶದ ಖಾಸಗಿ ಶಾಲೆಯಲ್ಲಿ ಹಿಂದು ಹೆಣ್ಣುಮಕ್ಕಳಿಗೂ ಹಿಜಾಬ್‌!

ganga jamuna school hijab controversy

#image_title

ಭೋಪಾಲ್‌: ಮಧ್ಯ ಪ್ರದೇಶದ ದಾಮೋಹ್‌ ಜಿಲ್ಲೆಯ ಖಾಸಗಿ ಶಾಲೆಯೊಂದು ಸದ್ಯ ಭಾರೀ ಚರ್ಚೆಯಲ್ಲಿದೆ. ಮುಸ್ಲಿಂ ಮಾಲೀಕತ್ವದಲ್ಲಿರುವ ಶಾಲೆಯಲ್ಲಿ ಕೆಲವು ಹಿಂದು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೂ ಸಮವಸ್ತ್ರದ ಹೆಸರಿನಲ್ಲಿ ಹಿಜಾಬ್‌ ಧರಿಸುವಂತೆ (Hijab for Hindu Girls) ಹೇರಿಕೆ ಮಾಡಲಾಗಿದೆ ಎನ್ನುವ ವಿಚಾರ ಸದ್ದು ಮಾಡುತ್ತಿದೆ. ಇದೇ ವಿಚಾರದಲ್ಲಿ ತನಿಖೆ ನಡೆಸುವುದಕ್ಕೆ ಅಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ.

ದಾಮೋಹ್‌ನ ಗಂಗಾ ಜಮುನಾ ಶಾಲೆಯ ಫಲಿತಾಂಶದ ಫ್ಲೆಕ್ಸ್‌ನ ಫೋಟೊ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದರಲ್ಲಿ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರದ್ದೇ ಫೋಟೋಗಳಿದ್ದು. ಅವುಗಳ ಮಧ್ಯೆ ನಾಲ್ವರು ಮುಸ್ಲಿಮರಲ್ಲದ ವಿದ್ಯಾರ್ಥಿನಿಯರ ಫೋಟೋಗಳೂ ಇದ್ದವು. ಆದರೆ ಫ್ಲೆಕ್ಸ್‌ನಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿರುವುದು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಶಾಲೆಯಲ್ಲಿ ಸಮವಸ್ತ್ರದ ಹೆಸರಿನಲ್ಲಿ ಹಿಜಾಬ್‌ ಧರಿಸಲು ಹೇರಿಕೆ ಮಾಡಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: Textbook Revision: ಹಿಜಾಬ್‌ ಓಕೆ, ಸೂಲಿಬೆಲೆ ಪಠ್ಯಕ್ಕೆ ಕತ್ತರಿ, ಟಿಪ್ಪು ಪಾಠ ಸೇರ್ಪಡೆ: ಸಾಹಿತಿಗಳ ಒತ್ತಾಯ, ಸಿದ್ದರಾಮಯ್ಯ ಏನಂದ್ರು?
ಈ ಕುರಿತಾಗಿ ದಾಮೋಹ್‌ನ ಜಿಲ್ಲಾ ಶಿಕ್ಷಣಾಧಿಕಾರಿಗಳು ತನಿಖೆ ನಡೆಸಿದ್ದಾರೆ. ಆದರೆ ಅಲ್ಲಿ ಯಾವುದೇ ಹೇರಿಕೆ ಉಂಟಾಗಿಲ್ಲ ಎಂದು ಅವರು ವರದಿ ಕೊಟ್ಟಿದ್ದಾರೆ. ಆದರೆ ಈ ವಿಚಾರದಲ್ಲಿ ಜನಾಕ್ರೋಶ ಜಾಸ್ತಿ ಆಗಿರುವ ಹಿನ್ನೆಲೆ ರಾಜ್ಯ ಸರ್ಕಾರ ತನಿಖೆ ನಡೆಸುವ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿಕೊಟ್ಟಿದೆ.‌


ಜಿಲ್ಲಾಧಿಕಾರಿಗಳು ಕೂಡ ಈ ವಿಚಾರದಲ್ಲಿ ಮಾತನಾಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಶಾಲೆಯಲ್ಲಿ ಯಾವುದೇ ಹೇರಿಕೆ ಉಂಟಾಗಿರುವುದು ಕಂಡುಬಂದಿಲ್ಲ ಎಂದಿದ್ದಾರೆ. ರಾಜ್ಯ ಗೃಹ ಇಲಾಖೆಯ ಆದೇಶದ ಮೇರೆಗೆ ಪೊಲೀಸರು, ತಹಸೀಲ್ದಾರರು ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಈ ವಿಚಾರವಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್‌)ಕ್ಕೂ ದೂರು ನೀಡಲಾಗಿದೆ. “ದಾಮೋಹ್‌ ಜಿಲ್ಲೆಯ ಶಾಲೆಯೊಂದರಲ್ಲಿ ಹಿಂದು ಮತ್ತು ಇತರ ಮುಸ್ಲಿಮೇತರ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಹೆಸರಿನಲ್ಲಿ ಬುರ್ಖಾ ಮತ್ತು ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿರುವ ಬಗ್ಗೆ ದೂರು ಸ್ವೀಕರಿಸಲಾಗಿದೆ” ಎಂದು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಹೇಳಿದ್ದಾರೆ.

Exit mobile version