Site icon Vistara News

ಸೋದರ, ಚಿಕ್ಕಪ್ಪ ಇರುವುದು ಪಾಕ್ ಸೇನೆಯಲ್ಲಿ; ಸೀಮಾ ಹೈದರ್ ಬಂದಿದ್ದು ಪ್ರೀತಿಗಾಗೋ, ಗೂಢಚಾರಿಣಿಯೋ?

Seema Haider

ಪಬ್​ಜಿ ಮೂಲಕ ಪರಿಚಯ ಆದ ಭಾರತೀಯ ಯುವಕನನ್ನು ಸೇರಲು ಪಾಕಿಸ್ತಾನದಿಂದ, ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ಸೀಮಾ ಹೈದರ್ (Seema Haider)​ ಸುತ್ತ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಸೀಮಾ ಹೈದರ್​ ಮೇ ತಿಂಗಳಲ್ಲಿ ಕಾನೂನು ಬಾಹಿರವಾಗಿ ಭಾರತಕ್ಕೆ ಕಾಲಿಟ್ಟಿದ್ದಾಳೆ. ಸದ್ಯ ಅವಳು ತನ್ನ ಪ್ರಿಯಕರ ಸಚಿನ್ ಮೀನಾ ಜತೆಗೇ ವಾಸವಾಗಿದ್ದಾಳೆ. ಪಾಕಿಸ್ತಾನದಿಂದ ಬಂದಿರುವ ಇವಳು ನಿಜಕ್ಕೂ ಪ್ರೀತಿಗಾಗಿ ಬಂದಿದ್ದಾಳಾ? ಪಾಕ್​ ಗುಪ್ತಚರ ದಳ ಐಎಸ್​ಐ ಜತೆ ಲಿಂಕ್ ಇದೆಯಾ? ಗೂಢಚಾರಿಕೆ ಮಾಡಲು ಬಂದಿದ್ದಾ? ಎಂಬಿತ್ಯಾದಿ ಅನುಮಾನಗಳು ಎದ್ದಿವೆ. ಹೀಗಾಗಿ ಪೊಲೀಸರು ಈಕೆಯ ಮೇಲೆ ಕಣ್ಣಿಟ್ಟಿದ್ದಾರೆ.

ಈಗ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರ ದಳ (ATS) ಸೀಮಾ ಹೈದರ್​ಳನ್ನು ವಿಚಾರಣೆಗೆ ಒಳಪಡಿಸಿದೆ. ಸತತವಾಗಿ ಆಕೆಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ವೇಳೆ ಅವಳು ಕೆಲವು ಮಹತ್ವದ ವಿಷಯಗಳನ್ನು ಹೇಳಿದ್ದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ‘ನನ್ನ ಸಹೋದರ ಪಾಕಿಸ್ತಾನದ ಸೇನೆಗೆ ಸೇರಿದ್ದ. ಆದರೆ ಆತ ಇನ್ನೂ ಅಲ್ಲೇ ಇದ್ದಾನಾ ಅಥವಾ ಸೈನ್ಯವನ್ನು ಬಿಟ್ಟಿದ್ದಾನಾ ಎಂಬುದು ನನಗೆ ಗೊತ್ತಿಲ್ಲ’ ಎಂದು ಉತ್ತರ ಪ್ರದೇಶ ಎಟಿಎಸ್​ಗೆ ಸೀಮಾ ಹೈದರ್ ಹೇಳಿದ್ದಾಳೆ.

ಸೀಮಾ ಹೈದರ್​​ ನೀಡಿದ ಈ ಮಾಹಿತಿ ನಿಜವೋ ಸುಳ್ಳೋ ಎಂದು ತಿಳಿಯಲು ದುಬೈನನಲ್ಲಿರುವ ಆಕೆಯ ಪತಿಯನ್ನು ಸಂಪರ್ಕಿಸಲಾಯಿತು. ಆತನೂ ಕೂಡ ಇದು ಸತ್ಯ ಎಂದಿದ್ದಾನೆ. ಸೀಮಾಳ ಸಹೋದರ ಮತ್ತು ಚಿಕ್ಕಪ್ಪ ಪಾಕಿಸ್ತಾನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಸೀಮಾಳ ಚಿಕ್ಕಪ್ಪ ಉನ್ನತ ಶ್ರೇಣಿಯ ಹುದ್ದೆಯಲ್ಲಿ ಇದ್ದಾನೆ ಎಂದು ಅವಳ ಪತಿ ಗುಲಾಂ ಹೈದರ್​ ಹೇಳಿದ್ದಾನೆ ಎಂದು ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ. ಆಕೆಯ ವಿಚಾರಣೆ ಸಂಪೂರ್ಣವಾಗಿ ಮುಗಿದಿಲ್ಲ. ಬಳಿಕವಷ್ಟೇ ಆಕೆ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Pakistan Temple Attack: ಹಿಂದು ಯುವಕನ ಜತೆ ಸೀಮಾ ಹೈದರ್‌ ಮದುವೆ; ಪಾಕ್‌ನಲ್ಲಿ ದೇಗುಲ ಮೇಲೆ ದಾಳಿ

‘ಸೀಮಾ ಹೈದರ್​ಗೆ ಪಾಕ್​ನ ಐಎಸ್​ಐ ಜತೆ ಲಿಂಕ್​ ಇದೆ. ಅವಳ ಚಿಕ್ಕಪ್ಪನೇ ಇಲ್ಲಿಗೆ ಕಳಿಸಿದ್ದಾನೆ’ ಎಂಬ ಅಂಶವನ್ನು ಉತ್ತರ ಪ್ರದೇಶ ಎಟಿಎಸ್​ ತಳ್ಳಿಹಾಕಿದೆ. ಆದರೆ ಆಕೆ ಸಾಕಷ್ಟು ಶಿಕ್ಷಣ ಇಲ್ಲ ಎನ್ನುತ್ತಾಳೆ. ಹಾಗಿದ್ದಾಗ್ಯೂ ಪಾಕಿಸ್ತಾನದಿಂದ ದುಬೈಗೆ ಹೋಗಿ, ಅಲ್ಲಿಂದ ನೇಪಾಳಕ್ಕೆ ಬಂದು, ಭಾರತವನ್ನು ಪ್ರವೇಶಿಸಿದ್ದು, ಈ ಐಡಿಯಾ ಬಂದಿದ್ದು ಹೇಗೆ ಎಂಬ ಬಗ್ಗೆ ಅಚ್ಚರಿ ವ್ಯಕ್ತವಾಗಿದೆ. ಸೀಮಾ ಯಾವುದಾದರೂ ಉಗ್ರಗುಂಪು, ದೇಶವಿರೋಧಿ ಏಜೆನ್ಸಿ ಅಥವಾ ಆತ್ಮಹುತಿ ಪಡೆಯ ಸದಸ್ಯೆಯಾಗಿರಬಹುದಾ ಎಂಬ ಆಯಾಮದಲ್ಲಿ ಎಟಿಎಸ್​ ಆಕೆಯನ್ನು ಪ್ರಶ್ನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

Exit mobile version