Site icon Vistara News

Seema Patra | ಕೆಲಸದಾಕೆ ಮೇಲೆ ದೌರ್ಜನ್ಯ; ಅಮಾನತುಗೊಂಡಿದ್ದ ಬಿಜೆಪಿ ನಾಯಕಿ ಬಂಧನ

Seema Patra

ರಾಂಚಿ: ಮನೆ ಕೆಲಸದವಳ ಮೇಲೆ ದೌರ್ಜನ್ಯ ಎಸಗಿ, ಆಕೆಯಿಂದ ಟಾಯ್ಲೆಟ್​ ಕೂಡ ನೆಕ್ಕಿಸಿದ್ದ ಬಿಜೆಪಿ ಮಾಜಿ ನಾಯಕಿ ಸೀಮಾ ಪಾತ್ರಾ(Seema Patra)ರನ್ನು ಇಂದು ಮುಂಜಾನೆ ರಾಂಚಿ ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಜೈಲಿಗೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಸೀಮಾ ಪಾತ್ರಾ ಜಾರ್ಖಂಡದ ಬಿಜೆಪಿ ನಾಯಕಿಯಾಗಿದ್ದಳು. ಆದರೆ ತನ್ನ ಮನೆ ಕೆಲಸ ಮಾಡುತ್ತಿದ್ದ ಬುಡಕಟ್ಟು ಜನಾಂದ ಮಹಿಳೆ ಸುನೀತಾ ಎಂಬುವರಿಗೆ ತುಂಬ ಹಿಂಸೆ ಮಾಡುತ್ತಿದ್ದರು. ಬಿಸಿ ನೀರು ಎರಚಿ, ಹೊಡೆದು ದೌರ್ಜನ್ಯ ಎಸಗುತ್ತಿದ್ದರು. ಸೀಮಾ ಪುತ್ರನೇ ಮುಂದಾಗಿ ಸುನೀತಾರನ್ನು ಕಾಪಾಡಿದ್ದ. ಆರೋಪ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಪಕ್ಷ ಸೀಮಾರನ್ನು ಅಮಾನತು ಮಾಡಿತ್ತು.

ಸೀಮಾ ಪಾತ್ರಾ ತನ್ನ ವಿರುದ್ಧ ಆರೋಪ ಸಾಬೀತಾಗುತ್ತಿದ್ದಂತೆ, ಪರಾರಿಯಾಗಲು ಪ್ರಯತ್ನ ಮಾಡಿದ್ದಳು. ರಸ್ತೆ ಮಾರ್ಗದ ಮೂಲಕವೇ ರಾಂಚಿಯಿಂದ ಪಾರಾಗುವ ಯತ್ನ ಆಕೆಯದ್ದಾಗಿತ್ತು. ಸೀಮಾ ಬೆನ್ನತ್ತಿದ ಅರ್ಗೋರಾ ಪೊಲೀಸರು, ಆಕೆ ಇರಬಹುದಾದ ಹಲವು ಸ್ಥಳಗಳಲ್ಲಿ ರೇಡ್​ ಮಾಡಿ, ಅಂತಿಮವಾಗಿ ಬಂಧಿಸಿದ್ದಾರೆ. ಕೆಲಸದಾಕೆ ಸುನೀತಾ ಮೈಮೇಲೆ ತುಂಬ ಗಾಯಗಳಿವೆ. ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಮನೆ ಕೆಲಸದವಳ ಬಳಿ ಟಾಯ್ಲೆಟ್​ ನೆಕ್ಕಿಸಿದ ಬಿಜೆಪಿ ನಾಯಕಿ ಅಮಾನತು; ಮಗನಿಂದಲೇ ಪಾರಾದಳು ಸೇವಕಿ

Exit mobile version