Site icon Vistara News

Sehar Shinwari: ಭಾರತ ಮಾಡಿದ ಈ ಸಾಧನೆ ಪಾಕಿಸ್ತಾನ ಮಾಡಲು ದಶಕಗಳೇ ಬೇಕು, ನಾಚಿಕೆಗೇಡು! ಎಂದ ಪಾಕ್‌ ಖ್ಯಾತ ನಟಿ

Sehar Shinwari

ಬೆಂಗಳೂರು: ಟಿ20 ವಿಶ್ವ ಕಪ್‌ನಲ್ಲಿ ಭಾರತವನ್ನು ಸೋಲಿಸಿದರೆ ಜಿಂಬಾಬ್ವೆಯ ಹುಡುಗನನ್ನು ವರಿಸುವೆ ಎಂದಿದ್ದ ಪಾಕ್‌ ನಟಿ ಸೆಹರ್ ಶಿನ್ವಾರಿ (Sehar Shinwari) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಸೆಹರ್ ಶಿನ್ವಾರಿ ಚಂದ್ರಯಾನ-3 ಮಿಷನ್‌ ಯಶಸ್ಸಿಗೆ ಭಾರತವನ್ನು ಅಭಿನಂದಿಸಿದರು. ಅಷ್ಟೇ ಅಲ್ಲದೇ ಇಸ್ರೋದ (Vikram Lander) ಈ ಸಾಧನೆಯು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ತನ್ನ ದೇಶ ಪಾಕಿಸ್ತಾನ ನೆರೆಹೊರೆಯ ದೇಶಗಳಿಗಿಂತ ಎಷ್ಟು ಹಿಂದುಳಿದಿದೆ ಎಂಬುದನ್ನು ಟ್ವೀಟ್‌ ಮೂಲಕ ಹೇಳಿಕೊಂಡರು. ʻʻಭಾರತ ಮಾಡಿದ ಈ ಸಾಧನೆಯನ್ನು ಮಾಡಲು ಪಾಕಿಸ್ತಾನಕ್ಕೆ ಕೆಲವು ದಶಕಗಳೇ (three decades for Pakistan) ಬೇಕಾಗುತ್ತವೆʼʼ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಬಹು ನಿರೀಕ್ಷೆಯ ಚಂದ್ರಯಾನ-3 ಮಿಷನ್ (Chandrayaan 3) ಸಕ್ಸೆಸ್ ಆಗಿದೆ. ಆಗಸ್ಟ್ 23ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3ರ ಲ್ಯಾಂಡರ್‌ ನಿಧಾನವಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದಿದೆ (Lander Soft landing). ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೊಸ ಇತಿಹಾಸ ರಚಿಸಿದೆ. ಈ ಸಾಧನೆಯ ಹಿಂದೆ ಅನೇಕ ವಿಜ್ಞಾನಿಗಳು, ಎಂಜಿನಿಯರ್ಸ್ ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಸಾಧನೆಗೆ ಮೆಚ್ಚುಗೆಗಳು ವ್ಯಕ್ತವಾಗಿವೆ. ಇದೀಗ ಸದಾ ವಿವಾದದಲ್ಲಿಯೇ ಇರುವ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಭಾರತದ ಈ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

ಇದನ್ನೂ ಓದಿ: T20 World Cup | ಭಾರತವನ್ನು ಸೋಲಿಸಿದರೆ ಜಿಂಬಾಬ್ವೆಯ ಹುಡುಗನನ್ನು ವರಿಸುವೆ ಎಂದ ಪಾಕ್‌ ನಟಿ!

ನಟಿಯ ಟ್ವೀಟ್‌

ತಮ್ಮ ಟ್ವೀಟ್‌ನಲ್ಲಿ ʻʻಭಾರತದೊಂದಿಗಿನ ದ್ವೇಷದ ಹೊರತಾಗಿ, ಚಂದ್ರಯಾನ್ 3 ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಇತಿಹಾಸ ನಿರ್ಮಿಸಿದ್ದಕ್ಕಾಗಿ ನಾನು ಇಸ್ರೋವನ್ನು ನಿಜವಾಗಿಯೂ ಅಭಿನಂದಿಸುತ್ತೇನೆ. ಪಾಕಿಸ್ತಾನ ಮತ್ತು ಭಾರತ ನಡುವೆ ಇರುವ ಎಲ್ಲ ಅಂತರವು ಎಲ್ಲ ಅಂಶಗಳಲ್ಲಿ ಎಷ್ಟು ಮಟ್ಟಕ್ಕೆ ವಿಸ್ತರಿಸಿದೆ ಎಂದರೆ ಭಾರತದ ಸರಿಸಮಾನಕ್ಕೆ ಬರಲು ಪಾಕಿಸ್ತಾನಕ್ಕೆ ಎರಡರಿಂದ ಮೂರು ದಶಕಗಳನ್ನೇ ತೆಗೆದುಕೊಳ್ಳುತ್ತದೆʼʼ ಎಂದು ಶಿನ್ವಾರಿ ಹೇಳಿದ್ದಾರೆ.

ʻʻದುರದೃಷ್ಟವಶಾತ್, ನಮ್ಮ ಇಂದಿನ ದುಃಸ್ಥಿತಿಗೆ ನಾವೇ ಕಾರಣ ಹೊರತು ಬೇರೆ ಯಾರೂ ಅಲ್ಲ” ಎಂದು ಶಿನ್ವಾರಿ ಟ್ವೀಟ್ ಮಾಡಿದ್ದಾರೆ. ʻʻಮೌಲ್ವಿ ತಮೀಜುದ್ದೀನ್ ಅವರ ಅಸೆಂಬ್ಲಿಯನ್ನು ಕಾನೂನುಬಾಹಿರವಾಗಿ ವಿಸರ್ಜನೆ ಮಾಡಿದಾಗಿನಿಂದ ನಾವು ದೇಶದಲ್ಲಿ ಕಾನೂನು ಮತ್ತು ಸಂವಿಧಾನದ ಪರಮಾಧಿಕಾರಕ್ಕಾಗಿ ಶ್ರಮಿಸುತ್ತಿದ್ದೇವೆ. ಭಾರತ ಎಲ್ಲಿಗೆ ತಲುಪಿದೆ ಎಂಬುದನ್ನು ನೋಡಿ ಇಂದು ನಮ್ಮ ತಲೆಗಳು ನಿಜವಾಗಿಯೂ ನಾಚಿಕೆಯಿಂದ ಬಾಗುತ್ತಿವೆʼʼ ಎಂದು ಶಿನ್ವಾರಿ ಹೇಳಿದರು.

ಸೆಹರ್ ಶಿನ್ವಾರಿ ಹುಟ್ಟಿದ್ದು ಪಾಕಿಸ್ತಾನದ ಹೈದರಾಬಾದ್​ನಲ್ಲಿ. ಖೈಬರ್‌ನಲ್ಲಿ “ಸೈರ್ ಸಾವಾ ಸೈರ್” ಎಂಬ ಹಾಸ್ಯ ಸರಣಿಯೊಂದಿಗೆ 201 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು.

Exit mobile version