Site icon Vistara News

Selfie Tragedy | ಮಂಗಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳುವಾಗಲೇ ಹೊತ್ತೊಯ್ದ ಜವರಾಯ! 39 ವರ್ಷದ ವ್ಯಕ್ತಿ ಸಾವು

ಮುಂಬೈ: ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವಾಗ ಮಂಗಗಳು ಕಾಣಸಿಗುವುದು ಸಾಮಾನ್ಯ. ಹಾಗೆ ಕಂಡಂತಹ ಮಂಗಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದಕ್ಕೆ ಹೋದ ವ್ಯಕ್ತಿಯೊಬ್ಬ ಕಣಿವೆಯೊಳಗೆ ಬಿದ್ದು ಮೃಕಪಟ್ಟಿರುವ ಘಟನೆ (Selfie Tragedy) ಮಹಾರಾಷ್ಟ್ರದಲ್ಲಿ ನಡೆದಿದೆ.

ಇದನ್ನೂ ಓದಿ: ಕೇರಳದಲ್ಲಿ ಒಂದರ ಬೆನ್ನಿಗೆ ಒಂದರಂತೆ ಫುಡ್​ ಪಾಯ್ಸನ್​ ಕೇಸ್​​ಗಳು; ಬಿರ್ಯಾನಿ ತಿಂದ 20 ವರ್ಷದ ಯುವತಿ ಸಾವು

ಅಬ್ದುಲ್‌ ಶೇಕ್‌(39) ಹೆಸರಿನ ವ್ಯಕ್ತಿ ಮಂಗಳವಾರದಂದು ಕೊಂಕಣ್‌ಗೆ ಕಾರಿನಲ್ಲಿ ತೆರಳುತ್ತಿದ್ದರು. ಅವರು ವರಂಧಾ ಘಾಟ್‌ನಲ್ಲಿರುವ ವಾಘ್ಜೈ ದೇಗುಲದ ಬಳಿ ಕಾರನ್ನು ನಿಲ್ಲಿಸಿದ್ದಾರೆ. ಅಲ್ಲಿ ಹತ್ತಾರು ಮಂಗಗಳಿದ್ದು, ಅವುಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಸೆಲ್ಫೀ ತೆಗೆದುಕೊಳ್ಳುವಾಗ ಕಾಲು ಜಾರಿ ಸುಮಾರು 500 ಅಡಿಗಳಷ್ಟು ಆಳದ ಕಣಿವೆಗೆ ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

ಇದನ್ನೂ ಓದಿ: Honeybee attack | ಸ್ಟಡ್‌ ಫಾರಂನಲ್ಲಿ ಹೆಜ್ಜೇನು ದಾಳಿ: ಎರಡು ಬೆಲೆ ಬಾಳುವ ಕುದುರೆಗಳು ಒದ್ದಾಡಿ ಒದ್ದಾಡಿ ಸಾವು

ಆಳದ ಕಣಿವೆಗೆ ಬಿದ್ದಿದ್ದ ಅಬ್ದುಲ್‌ ಅವರ ಶವವನ್ನು ಬುಧವಾರದಂದು ಪೊಲೀಸರು ಮೇಲಕ್ಕೆತ್ತಿದ್ದಾರೆ. ಸ್ಥಳೀಯ ಸಹ್ಯಾದ್ರಿ ರಕ್ಷಣಾ ತಂಡದ ಸಹಾಯದೊಂದಿಗೆ ಶವವನ್ನು ಮೇಲಕ್ಕೆತ್ತಲಾಗಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ ಡಿ.26ರಂದು ಅಸ್ಸಾಂನ ಸಿಯಾಚಲ್‌ನಲ್ಲಿ 27 ವರ್ಷದ ಜಯದೀಪ್‌ ರಾಯ್‌ ತನ್ನ ಪ್ರಿಯತಮೆ ಪ್ರೀತಿಯನ್ನು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ದೃಶ್ಯವನ್ನು ಆತ ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಿದ್ದ ಕೂಡ.

Exit mobile version