Site icon Vistara News

Delhi services bill : ಆಪ್​ಗೆ ತೀವ್ರ ಹಿನ್ನಡೆ, ಮೋದಿ ಸರ್ಕಾರದ ಪರ ನಿಂತ ನವೀನ್ ಪಟ್ನಾಯಕ್​ ನೇತೃತ್ವದ ಬಿಜೆಡಿ

Naveen Patnayak

ನವದೆಹಲಿ: ದೆಹಲಿಯ ನಾಗರಿಕ ಸೇವೆಗಳ ತಿದ್ದುಪಡಿ ವಿಧೇಯಕವನ್ನು (Delhi services bill) ಬಿಜು ಜನತಾ ದಳ ಬೆಂಬಲಿಸಿದೆ. ಈ ಮೂಲಕ ವಿರೋಧ ಪಕ್ಷಗಳ ಅವಿಶ್ವಾಸ ಗೊತ್ತುವಳಿಯನ್ನು ವಿರೋಧಿಸಿದೆ ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯ ಸಸ್ಮಿತ್ ಪಾತ್ರಾ ಮಂಗಳವಾರ ವಿಧೇಯಕಕ್ಕೆ ಪಕ್ಷದ ಬೆಂಬಲ ಇರುವುದಾಗಿ ತಿಳಿಸಿದ್ದಾರೆ. ಒಡಿಶಾದ ಆಡಳಿತ ಪಕ್ಷದ ನಿರ್ಧಾರವು ಕೇಂದ್ರದಲ್ಲಿನ ಮೋದಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಅರ್ಧದಷ್ಟು ಬೆಂಬಲ ಪಡೆಯಲು ಸಹಾಯ ಮಾಡಲಿದೆ. ರಾಜ್ಯ ಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಪೂರ್ಣ ಬಹುಮತವನ್ನು ಹೊಂದಿರದ ಕಾರಣ ಬಿಜೆಪಿ ನಿರ್ಧಾರ ಕೇಂದ್ರ ಸರಕಾರಕ್ಕೆ ನೆರವಾಗಲಿದೆ.

ಬಿಜು ಜನತಾ ದಳ (ಬಿಜೆಡಿ) ರಾಜ್ಯಸಭೆಯಲ್ಲಿ ಒಂಬತ್ತು ಸಂಸದರನ್ನು ಹೊಂದಿದೆ. ದೆಹಲಿ ನಾಗರಿಕ ಸೇವೆಗಳ ವಿಧೇಐಕದ ಬಗ್ಗೆ ಮಸೂದೆಯನ್ನು ಬೆಂಬಲಿಸಲು ತಮ್ಮ ಪಕ್ಷ ನಿರ್ಧರಿಸಿದೆ ಮತ್ತು ಅವಿಶ್ವಾಸ ನಿರ್ಣಯವನ್ನು ಸಹ ವಿರೋಧಿಸಲಿದೆ ಎಂದು ಸಸ್ಮಿತ್​ ಪಾತ್ರಾ ಪಿಟಿಐಗೆ ತಿಳಿಸಿದರು.

26 ಪಕ್ಷಗಳ 109 ಸಂಸದರು ಮತ್ತು ಕಪಿಲ್ ಸಿಬಲ್ ಅವರಂತಹ ಕೆಲವು ಸ್ವತಂತ್ರ ಸದಸ್ಯರು ವಿಧೇಯಕದ ವಿರುದ್ಧ ಮತ ಚಲಾಯಿಸುವ ನಿರೀಕ್ಷೆಯಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಅಸ್ತಿತ್ವದಲ್ಲಿರುವ ಎಲ್ಲಾ 238 ಸದಸ್ಯರು ಆ ದಿನ ಮತ ಚಲಾಯಿಸಿದರೆ ಇದು 120ಕ್ಕಿಂತ ಕಡಿಮೆಯಾಗಲಿದೆ. ಮೇಲ್ಮನೆಯ ಪೂರ್ಣ ಬಲ 243. ಆದರೆ ಕೆಲವು ಸ್ಥಾನಗಳು ಖಾಲಿ ಇವೆ.

ಇದನ್ನೂ ಓದಿ : Mujahideen: ತಮ್ಮನ್ನು ʼಮುಜಾಹಿದ್ದೀನ್‌ʼ ಎಂದ ಆಪ್‌ ವಕ್ತಾರೆ ವಿರುದ್ಧ ಕೇಸ್‌ ದಾಖಲಿಸಿದ ಬಿಜೆಪಿ ಮುಖಂಡ

ಪ್ರತಿಪಕ್ಷಗಳ ಗುಂಪಿನ 26 ಪಕ್ಷಗಳಲ್ಲಿ ಕನಿಷ್ಠ 18 ಪಕ್ಷಗಳು ರಾಜ್ಯಸಭೆಯಲ್ಲಿ ಉಪಸ್ಥಿತಿ ಹೊಂದಿದ್ದು 101 ಸಂಸದರನ್ನು ಹೊಂದಿವೆ. ಈ ಬಣದ ಹೊರತಾಗಿ, ಬಿಆರ್​ಎಸ್​​ (7 ಸಂಸದರು) ಸಹ ಮಸೂದೆಯ ವಿರುದ್ಧ ಮತ ಚಲಾಯಿಸುವ ಸಾಧ್ಯತೆಯಿದೆ. ವೈಎಸ್ಆರ್ ಕಾಂಗ್ರೆಸ್ (9 ಸಂಸದರು) ಅದನ್ನು ಬೆಂಬಲಿಸುವ ಸಾಧ್ಯತೆಗಳಿವೆ.

ಆಡಳಿತಾರೂಢ ಎನ್​ಡಿಎ ಮೇಲ್ಮನೆಯಲ್ಲಿ 100 ಸಂಸದರನ್ನು ಹೊಂದಿದ್ದು, ನಾಮನಿರ್ದೇಶಿತ ಸದಸ್ಯರು ಮತ್ತು ಸ್ವತಂತ್ರರು ಮತ್ತು ಈ ಹಿಂದೆ ವಿವಿಧ ಚುನಾವಣೆಗಳಲ್ಲಿ ಅವರೊಂದಿಗೆ ಮತ ಚಲಾಯಿಸಿದ ಇತರ ಅಲಿಪ್ತ ಪಕ್ಷಗಳನ್ನು ಅವಲಂಬಿಸಿದೆ.

Exit mobile version