Site icon Vistara News

ಕೋಟಿ ಹಣವಷ್ಟೇ ಅಲ್ಲ, ಅರ್ಪಿತಾ ಮುಖರ್ಜಿ ಮನೆಯಲ್ಲಿ ಸಿಕ್ಕಿವೆ ರಾಶಿ ರಾಶಿ ಲೈಂಗಿಕ ಆಟಿಕೆಗಳು !

Arpita Mukherjee Sex Toys

ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ನೇಮಕಾತಿಯಲ್ಲಿ ನಡೆದ ಹಗರಣದಲ್ಲಿ ಪಾರ್ಥ ಚಟರ್ಜಿ ಹೆಸರು ಮುನ್ನೆಲೆಗೆ ಬಂದಾಗಿನಿಂದಲೂ ಅವರ ಆಪ್ತೆ ಅರ್ಪಿತಾ ಮುಖರ್ಜಿ ಕೂಡ ಟ್ರೆಂಡಿಂಗ್‌ನಲ್ಲಿದ್ದಾಳೆ. ಅರ್ಪಿತಾ ಮುಖರ್ಜಿ ಮನೆಯಲ್ಲಿ ಕೋಟಿಕೋಟಿ ಹಣ ಪತ್ತೆಯಾಗಿದೆ. ಹಣ ಎಣಿಸುವ ಯಂತ್ರ ಹಿಡಿದು ಈಕೆಯ ಮನೆಯ ಮೇಲೆ ರೇಡ್‌ ಮಾಡುತ್ತಿರುವ ಇ ಡಿ, ಸಿಕ್ಕ ಹಣ ಹೊತ್ತೊಯ್ಯಲು ಟ್ರಕ್‌ಗಳನ್ನು ಬಳಸಿಕೊಳ್ಳುತ್ತಿದೆ. ಅರ್ಪಿತಾ ಮನೆಯಲ್ಲಿ ಈಗಾಗಲೇ 50 ಕೋಟಿ ರೂಪಾಯಿಗೂ ಅಧಿಕ ನಗದು, ಅಪಾರ ಚಿನ್ನಾಭರಣಗಳು ಪತ್ತೆಯಾಗಿದ್ದು ಜಗಜ್ಜಾಹೀರಾಗಿದೆ. ಆದರೆ ಈಗ ಇನ್ನೊಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ.

ಅರ್ಪಿತಾ ಮನೆಯಲ್ಲಿ ಬರೀ ಹಣವಷ್ಟೇ ಅಲ್ಲ, ಅಪಾರ ಪ್ರಮಾಣದ ಸೆಕ್ಸ್‌ ಟಾಯ್ಸ್‌ (ಲೈಂಗಿಕ ಆಟಿಕೆಗಳು-ಲೈಂಗಿಕ ಸುಖಕ್ಕಾಗಿ ಬಳಸುವ ವಸ್ತುಗಳು)ಗಳು ಕೂಡ ಪತ್ತೆಯಾಗಿವೆ ಎಂದು ಇಡಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಲೈಂಗಿಕ ಆಟಿಕೆಗಳು 5-6 ಸಿಕ್ಕಿದ್ದರೆ ದೊಡ್ಡ ಸುದ್ದಿಯಾಗುತ್ತಿರಲಿಲ್ಲವೇನೋ, ಆದರೆ ಇವೂ ಕೂಡ ರಾಶಿರಾಶಿ ಪತ್ತೆಯಾಗಿವೆ. ಇವನ್ನೆಲ್ಲ ಅರ್ಪಿತಾ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದಿರಬಹುದು ಎಂದೂ ಹೇಳಲಾಗಿದೆ. ಹಾಗೇ, ಇದರೊಂದಿಗೆ ನೂರಾರು ಬೆಳ್ಳಿಯ ತಟ್ಟೆಗಳು ಅರ್ಪಿತಾ ಮುಖರ್ಜಿ ಮನೆಯಲ್ಲಿ ಸಿಕ್ಕಿವೆ. ಬಂಗಾಳಿ ಸಂಪ್ರದಾಯದಲ್ಲಿ ಹೊಸದಾಗಿ ಮದುವೆಯಾದ ಜೋಡಿಗೆ ನೀಡಲಾಗುವ ಇಂಥ ಬೆಳ್ಳಿಯ ತಟ್ಟೆಗಳು ಅರ್ಪಿತಾ ಮನೆಯಲ್ಲಿ ಸಿಕ್ಕಿದ್ದೂ ಕುತೂಹಲಕ್ಕೆ ಕಾರಣವಾಗಿದೆ.ಸಂಚಿನಲ್ಲಿ ನನ್ನನ್ನು ಸಿಲುಕಿಸಲಾಗಿದೆ

ಆಪ್ತೆ ಅರ್ಪಿತಾ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ. ಆಕೆ ಇಡಿ ಎದುರು ನನ್ನದೇನೂ ತಪ್ಪಿಲ್ಲ. ಎಲ್ಲವೂ ಪಾರ್ಥಗೆ ಸೇರಿದ್ದು ಎಂದು ಹೇಳಿಯಾಗಿದೆ. ಅಷ್ಟಾದರೂ ಪಾರ್ಥ ಚಟರ್ಜಿ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ʼಇವೆಲ್ಲ ನನ್ನ ವಿರುದ್ಧ ವ್ಯವಸ್ಥಿತವಾಗಿ ಹೆಣೆಯಲಾದ ಸಂಚು. ನಾನೀಗ ಏನನ್ನೂ ಹೇಳುವುದಿಲ್ಲ. ಕಾಲವೇ ಎಲ್ಲವನ್ನೂ ಹೇಳುತ್ತದೆʼ ಎಂದು ಪಾರ್ಥ ಹೇಳಿದ್ದಾರೆ. ಇಡಿಯಿಂದ ಬಂಧಿಸಲ್ಪಟ್ಟ ಮೇಲೆ ಇದು ಅವರ ಮೊದಲ ಹೇಳಿಕೆ. ಹಾಗೇ, ಇಂದು ಅರ್ಪಿತಾ ಮುಖರ್ಜಿಯನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆ ಪ್ರತಿಭಟಿಸಿದ್ದಾಳೆ. ದೊಡ್ಡದಾಗಿ ಅಳುತ್ತ ನೆಲದ ಮೇಲೆ ಬಿದ್ದಿದ್ದಾಳೆ. ಆದರೂ ಆಕೆಯನ್ನು ಬಲವಂತವಾಗಿ ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗಲಾಯಿತು.

ಇದನ್ನೂ ಓದಿ: Video: ಅರ್ಪಿತಾ ಮುಖರ್ಜಿ ಮನೆಯಲ್ಲಿ ಇ.ಡಿಗೆ ಸಿಕ್ಕ ಹಣ ಸಾಗಿಸಲು ಬಂತು ಭಾರಿ ಗಾತ್ರದ ಟ್ರಕ್‌!

Exit mobile version