Site icon Vistara News

Shah Rukh Khan: ʼಪಠಾಣ್‌ʼ ಕುರಿತು ಶಾರುಖ್‌ ಖಾನ್‌ಗೆ ಇಷ್ಟವಾಗದ ಅಂಶ ಯಾವುದು? ಅವರು ಹೇಳಿದ್ದೇನು?

Shah Rukh Khan reveals one thing he did NOT like about Pathaan

ಶಾರುಖ್‌ ಖಾನ್‌

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ (Shah Rukh Khan) ಅಭಿನಯದ ಪಠಾಣ್‌ ಸಿನಿಮಾವು ಬಾಲಿವುಡ್‌ಗೆ ಹೊಸ ಕಳೆ ತಂದುಕೊಟ್ಟಿದೆ. ಬೇಷರಮ್‌ ರಂಗ್‌ ಹಾಡಿನ ವಿವಾದ, ಬಾಯ್ಕಾಟ್‌ ಅಭಿಯಾನವನ್ನು ಹಿಮ್ಮೆಟ್ಟಿಸಿ ಸಿನಿಮಾ ಹಿಟ್‌ ಆಗಿದೆ. ಭಾರತ ಸೇರಿ ಜಗತ್ತಿನಾದ್ಯಂತ ೯೦೦ ಕೋಟಿ ರೂ.ಗಿಂತ ಅಧಿಕ ಹಣ ಗಳಿಸಿದೆ. ಇದರ ಬೆನ್ನಲ್ಲೇ ಶಾರುಖ್‌ ಖಾನ್‌ ಅವರು ಪಠಾಣ್‌ ಸಿನಿಮಾ ಕುರಿತು ತಮಗೆ ಇಷ್ಟವಾಗದ ಒಂದು ಅಂಶವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಶಾರುಖ್ ಖಾನ್‌ ಅವರು ಎಂದಿನಂತೆ ಟ್ವಿಟರ್‌ನಲ್ಲಿ #AskSRK ಸೆಷನ್‌ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಒಬ್ಬ ಅಭಿಮಾನಿಯು, “ಪಠಾಣ್‌ ಸಿನಿಮಾದಲ್ಲಿ ನಿಮಗೆ ಇಷ್ಟವಾಗದ ಒಂದು ಅಂಶ ಯಾವುದು” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶಾರುಖ್‌ ಖಾನ್‌, “ನೋಡಲು ಕುಳಿತರೆ ಸಿನಿಮಾ ಬೇಗ ಮುಗಿಯುತ್ತದೆ ಎಂಬುದೇ ಇಷ್ಟವಾಗುವುದಿಲ್ಲ” ಎಂದು ಹೇಳಿದ್ದಾರೆ.

ಅಭಿಮಾನಿ ಪ್ರಶ್ನೆಗೆ ಶಾರುಖ್‌ ಖಾನ್‌ ಪ್ರತಿಕ್ರಿಯೆ

ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ, ಜಾನ್‌ ಅಬ್ರಾಹಂ ಅಭಿನಯದ ಪಠಾಣ್‌ ಸಿನಿಮಾವು ಭಾರತ ಸೇರಿ ಜಗತ್ತಿನಾದ್ಯಂತ ಹಿಟ್‌ ಆಗಿದೆ. ಆ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಇತ್ತೀಚೆಗಷ್ಟೇ ಮೂವರೂ ನಟರು ಸಿನಿಮಾ ಕುರಿತು ಸುದ್ದಿಗೋಷ್ಠಿ ನಡೆಸಿದ್ದರು. ಸಿನಿಮಾದ ಯಶಸ್ಸಿನ ಕುರಿತು ಸಂತಸ ವ್ಯಕ್ತಪಡಿಸಿದ್ದರು.

ಇನ್ನೂ ಓದಿ: Pathaan Movie: ಪಠಾಣ್‌ಗೆ ಕೊನೆಗೂ ಜಯ; ʻಬೇಷರಮ್‌ ರಂಗ್‌ʼ ಹಾಡಿನ ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ

Exit mobile version