ವಿಸ್ತಾರನ್ಯೂಸ್ ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ (Ram Mandir) ಅಪೂರ್ಣ ಎಂದು ಹೇಳಿಕೆ ನೀಡುವ ಮೂಲಕ ಚರ್ಚೆ ಹುಟ್ಟು ಹಾಕಿದ್ದ ಶಂಕರಾಚಾರ್ಯಗಳಲ್ಲಿ ಒಬ್ಬರಾದ ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಇದೀಗ ಹೊಸ ರಾಮ್ಲಲ್ಲಾನ ವಿಗ್ರಹಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಮ್ ದೇವಾಲಯದ ಉದ್ಘಾಟನೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ ಶಂಕರಾಚಾರ್ಯರಲ್ಲಿ ಒಬ್ಬರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಜನವರಿ 22 ರ ಕಾರ್ಯಕ್ರಮಕ್ಕೆ ಮುಂಚಿತವಾಗಿ ವ್ಯಕ್ತಪಡಿಸಿದ ಎರಡನೇ ಕಳವಳ ಇದಾಗಿದೆ.
ಜ್ಯೋತಿಶ್ ಪೀಠದ ಶಂಕರಾಚಾರ್ಯರು ಅಯೋಧ್ಯೆಯ ರಾಮ ಜನ್ಮಭೂಮಿ ನ್ಯಾಸ್ ಮತ್ತು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ಅವರಿಗೆ ಜನವರಿ 18 ರಂದು (ಗುರುವಾರ) ಬರೆದ ಪತ್ರದಲ್ಲಿ ಮೂರ್ತಿಯ ಕುರಿತ ವ್ಯಕ್ತಪಡಿಸಿದ್ದಾರೆ.
ಈ ಹೊಸ ವಿಗ್ರಹವನ್ನು ದೇಗುಲದಲ್ಲಿ ಇರಿಸಿದರೆ ಹಿಂದಿನ ರಾಮ್ ಲಲ್ಲಾ ವಿರಾಜ್ಮಾನ್ಗೆ ಏನಾಗುತ್ತದೆ ಎಂದು ಅವರು ಪ್ರಶ್ನಿಸಿದ್ದದಾರೆ. ಇಲ್ಲಿಯವರೆಗೆ, ರಾಮ ಭಕ್ತರು ಲಲ್ಲಾ ವಿರಾಜ್ಮಾನ್ಗಾಗಿಯೇ ಹೊಸ ದೇವಾಲಯ ನಿರ್ಮಿಸಲಾಗುತ್ತಿದೆ ಎಂದು ಭಾವಿಸಿದ್ದರು. ಆದರೆ ಈಗ ದೇವಾಲಯದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಗರ್ಭಗುಡಿಯಲ್ಲಿ ಹೊಸ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಗೊತ್ತಾಗಿದೆ. ಇದು ಸರಿಯಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದಿನ ರಾಮ್ ವಿರಾಜ್ಮಾನ್ ಉದ್ಭವಗೊಂಡಿರುವ ಮೂರ್ತಿ. ಅದಕ್ಕೆ ಒಬ್ಬ ಮುಸ್ಲಿಂ ಕಾವಲುಗಾರ ಸಾಕ್ಷಿಯಾಗಿದ್ದಾನೆ. ಉದ್ಭವವಾಗಿರುವ ಮೂರ್ತಿ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಿದೆ ಬಿಸಿಲು, ಮಳೆ ಮತ್ತು ಚಳಿಯನ್ನು ಎದುರಿಸಿದೆ. ಅದೇ ದೇವರು ಕಾನೂನು ಪ್ರಕರಣವನ್ನು ಎದುರಿಸಿ ಗೆದ್ದಿದ್ದಾರೆ ಎಂದು ಶ್ರೀಗಳು ಪತ್ರದಲ್ಲಿ ಬರೆದಿದ್ದಾರೆ.
ರಾಮ್ ವಿರಾಜ್ಮಾನ್ಗಾಗಿ ಭೋತಿನರೇಶ್ ರಾಜಾ ಮೆಹತಾಬ್ ಸಿಂಗ್, ರಾಣಿ ಜೈರಾಜ್ ರಾಜ್ ಕುನ್ವರ್, ಪುರೋಹಿತ್ ದೇವಿದೀನ್ ಪಾಂಡೆ, ಹಂಸಾವರ್ ರಾಜ ರಣವಿಜಯ್ ಸಿಂಗ್, ನಿರ್ಮೋಹಿ ಅಖಾಡ ಮಹಂತ್ ರಘುವರ್ ದಾಸ್, ಅಭಿರಾಮ್ ದಾಸ್, ರಾಜಾ ರಾಮಾಚಾರ್ಯ, ರಾಮಚಂದ್ರ ದಾಸ್, ಗೋಪಾಲ್ ಸಿಂಗ್ ವಿಶಾರದ್, ಹಿಂದೂ ಮಹಾಸಭಾ, ತಿವಾರಿ , ಧರ್ಮದಾಸ್ ಸೇರಿದಂತೆ ಸಾವಿರಾರು ಜನರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಇದನ್ನೂ ಓದಿ : Ram Mandir : ಈ ಬ್ಯಾಂಕ್ನಲ್ಲಿ ದುಡ್ಡು ಇಡಬೇಕಾಗಿಲ್ಲ, ರಾಮ ನಾಮವನ್ನೇ ಡೆಪಾಸಿಟ್ ಮಾಡಿ!
ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದಲ್ಲಿ ಹಾಜರಾದ ವಕೀಲರಾದ ಗುಲಾಬ್ ಚಂದ್ರ ಶಾಸ್ತ್ರಿ ಅವರ ಹಳೆಯ ಹಿಂದೂ ಕಾನೂನಿನ ಹಳೆಯ ಆವೃತ್ತಿಯನ್ನು ಉಲ್ಲೇಖಿಸಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಪೂಜಿಸಲ್ಪಡುವ ‘ಸ್ವಯಂಭು’ (ಉದ್ಭವ ಮೂರ್ತಿ) ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಅದರ ಆಧಾರದ ಮೇಲೆಯೇ ವಿಗ್ರಹವು ಎಲ್ಲಿದೆಯೋ ಅಲ್ಲಿಯೇ ಇರಬೇಕು ಎಂದು ನಮ್ಮ ಪರ ನ್ಯಾಯಕ ಸಿಕ್ಕಿತ್ತು ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ತಮ್ಮ ಆಕ್ಷೇಪಕ್ಕೆ ಕಾರಣಗಳನ್ನು ನೀಡಿದ್ದಾರೆ.
ಉದ್ಭವ ಮೂರ್ತಿಗೆ ಅಸುರರು ಮತ್ತು ಪೂರ್ವಜರ ಕಾರಣಕ್ಕೆ ಹಾನಿಗೊಳಗಾದರೂ ಆ ವಿಗ್ರಹವನ್ನು ಬದಲಿಸಬಾರದು. ಬದರೀನಾಥ ಮತ್ತು ವಿಶ್ವೇಶ್ವರ ಜ್ಯೋತಿರ್ಲಿಂಗ ಇದಕ್ಕೆ ಸಾಕ್ಷಿ ಎಂದು ಸ್ವಾಮೀಜಿ ಹೇಳಿದ್ದಾರೆ.
ನಿರ್ಮಾಣ ಹಂತದಲ್ಲಿರುವ ದೇವಾಲಯದಲ್ಲಿ, ಪ್ರತಿಷ್ಠಾಪನೆಗೆ ಗೊತ್ತುಪಡಿಸಿದ ಗರ್ಭಗುಡಿಯಲ್ಲಿ ರಾಮ್ ಲಲ್ಲಾ ವಿರಾಜ್ಮಾನ್ಗೆ ಸಂಪೂರ್ಣ ಆದ್ಯತೆ ನೀಡುವಂತೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ನೃತ್ಯ ಗೋಪಾಲ್ ದಾಸ್ ಅವರನ್ನು ಒತ್ತಾಯಿಸಿದ್ದಾರೆ.
ನಿಯಮಕ್ಕೆ ವಿರುದ್ಧವಾಗಿ ಯಾವುದೇ ಕೆಲಸವನ್ನು ಮಾಡಿದರೆ ಅದು ಇತಿಹಾಸ, ಸಾರ್ವಜನಿಕ ಮನಸ್ಥಿತಿ, ನೈತಿಕತೆ, ಧರ್ಮಶಾಸ್ತ್ರ ಮತ್ತು ಕಾನೂನನ್ನು ಉಲ್ಲಂಘಿಸುತ್ತದೆ. ಶ್ರೀ ರಾಮ್ ಲಲ್ಲಾ ವಿರಾಜ್ಮಾನ್ಗೆ ದೊಡ್ಡ ಅನ್ಯಾಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.