ಕರೌಲಿ: ಶಿವನ ದೇವಸ್ಥಾನದ ಗೋಡೆಗೆ ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಆ ದೇಗುಲ ಕುಸಿದು ಬಿದ್ದಿರುವ (Shiva Temple Collapse) ಘಟನೆ ರಾಜಸ್ಥಾನದ ಕರೌಲಿಯಲ್ಲಿ ನಡೆದಿದೆ. ಇಲ್ಲಿನ ಸಪೋಟರಾ ಎಂಬ ಗ್ರಾಮದಲ್ಲಿ ಇದ್ದ ಈಶ್ವರ ದೇಗುಲ ಪೂರ್ತಿಯಾಗಿ ಕುಸಿದಿದ್ದು, ಅದರ ಅವಶೇಷಗಳ ಅಡಿಯಿಂದ ಇಬ್ಬರು ಮಹಿಳೆಯರನ್ನು ಹೊರಗೆ ತೆಗೆಯಲಾಗಿದೆ. ಅವರಿಬ್ಬರೂ ಗಾಯಗೊಂಡಿದ್ದು, ಚಿಕಿತ್ಸೆಗೆ ಕಳಿಸಲಾಗಿದೆ. ಇನ್ನೂ ಕೆಲವರು ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.
ದೇವಸ್ಥಾನದ ಪಕ್ಕದಲ್ಲಿ, ಪಿಡಬ್ಲ್ಯೂಡಿ ಇಲಾಖೆಯಿಂದ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಲ್ಲಿಯೇ ಸರ್ಕಾರಿ ಅಧಿಕಾರಿಗಳೂ ಇದ್ದರು. ಈ ಚರಂಡಿ ನಿರ್ಮಾಣ ಕೆಲಸದ ನಿಮಿತ್ತ ಸ್ಥಳಕ್ಕೆ ಬಂದಿದ್ದ ಜೆಸಿಬಿ ದೇವಸ್ಥಾನದ ಗೋಡೆಗೆ ಗುದ್ದಿದೆ. ಆಗ ದೇಗುಲದ ಒಂದು ಭಾಗ ಸಂಪೂರ್ಣವಾಗಿ ಕುಸಿದಿದೆ. ಸ್ಥಳೀಯರು ಪಿಡಬ್ಲ್ಯೂಡಿ ಇಲಾಖೆಯನ್ನೇ ದೂರುತ್ತಿದ್ದಾರೆ. ದೇವಸ್ಥಾನವಿದೆ ಎಂದು ಗೊತ್ತಿದ್ದರೂ ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ಮಾಡಿಸಿಲ್ಲ ಎಂದು ಹೇಳುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.
ಇದನ್ನೂ ಓದಿ: Rain News | ರಾಜ್ಯದಲ್ಲಿ ವರುಣನ ಆರ್ಭಟ, ವಿವಿಧೆಡೆ ಮನೆ ಕುಸಿತ; ಕೃಷಿ ಜಮೀನು ಜಲಾವೃತ