ಕೋಲ್ಕತ್ತ: ಖ್ಯಾತ ಗಾಯಕಿ, ರವೀಂದ್ರ ಸಂಗೀತದ ಸಾಧಕಿ ಸುಮಿತ್ರಾ ಸೇನ್ ಇಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೋಲ್ಕತ್ತದಲ್ಲಿರುವ ತಮ್ಮ ಮನೆಯಲ್ಲಿಯೇ ನಿಧನರಾಗಿದ್ದಾಗಿ ಅವರ ಪುತ್ರಿ ಶ್ರಬಾನಿ ಸೇನ್ ತಮ್ಮ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ. ‘ನನ್ನ ತಾಯಿ ನಮ್ಮನ್ನು ಇಂದು ಬಿಟ್ಟು ಹೋದರು’ ಎಂದು ಬರೆದುಕೊಂಡಿದ್ದಾರೆ.
ಸುಮಿತ್ರಾ ಸೇನ್ ಅವರು ಬೆಂಗಾಳಿ ಗಾಯಕಿ. ರವೀಂದ್ರ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು. ಅವರು ಹಲವು ದಿನಗಳಿಂದಲೂ ತೀವ್ರ ಸ್ವರೂಪದ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಡಿಸೆಂಬರ್ 21ರಂದು ಮತ್ತೆ ಕಾಯಿಲೆ ಹೆಚ್ಚಾಗಿ ದಕ್ಷಿಣ ಕೋಲ್ಕತ್ತದಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸ್ವಲ್ಪ ಸುಧಾರಿಸಿಕೊಂಡ ಕಾರಣಕ್ಕೆ ಸೋಮವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಇಂದು ಮುಂಜಾನೆಯಷ್ಟೊತ್ತಿಗೆ ನಿಧನರಾಗಿದ್ದಾರೆ.
ಸುಮಿತ್ರಾ ಸೇನ್ ಅವರು ರವೀಂದ್ರ ಸಂಗೀತದ ಪ್ರತಿಪಾದಕರು. ರವೀಂದ್ರನಾಥ ಟಾಗೋರರ ಸಂಗೀತವನ್ನು ಜಾಗತಿಕವಾಗಿ ಖ್ಯಾತಿಗೊಳಿಸುವಲ್ಲಿ ಸುಮಿತ್ರಾ ಸೇನ್ ಅವರ ಇಡೀ ಕುಟುಂಬದ ಪಾತ್ರ ಬಹಳ ಮುಖ್ಯವಾಗಿದೆ. ಈಗ ಅವರ ಪುತ್ರಿ ಶ್ರಬಾನಿ ಕೂಡ ರವೀಂದ್ರ ಸಂಗೀತದ ಕಲಾವಿದೆ.
ಇದನ್ನೂ ಓದಿ: K S Chithra | ಮಗಳನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಗಾಯಕಿ ಕೆ.ಎಸ್. ಚಿತ್ರಾ