ಲಖನೌ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಕನ್ವರ ಯಾತ್ರಾರ್ಥಿಗಳ ಮೇಲೆ ಟ್ರಕ್ ಹರಿದು ಆರು ಮಂದಿ ಮೃತಪಟ್ಟಿದ್ದಾರೆ. ಹತ್ರಾಸ್-ಆಗ್ರಾ ರಸ್ತೆಯ ಬಾಧರ್ ಹಳ್ಳಿ ಸಮೀಪ ತಡರಾತ್ರಿ 2ಗಂಟೆ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಈ ಯಾತ್ರಿಗಳೆಲ್ಲ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಸೇರಿದವರು ಎಂದು ಹೇಳಲಾಗಿದೆ.
ಮೃತಪಟ್ಟ ಕನ್ವರ ಯಾತ್ರಾರ್ಥಿಗಳ ಮೃತದೇಹಗಳನ್ನು ಆಗ್ರಾ ವೈದ್ಯಕೀಯ ಕಾಲೇಜಿಗೆ ಪೋಸ್ಟ್‌ಮಾರ್ಟಮ್‌ಗೆ ಕಳಿಸಲಾಗಿದೆ. ಇವರೆಲ್ಲ ಹರಿದ್ವಾರದಿಂದ ತಮ್ಮ ಊರಾದ ಗ್ವಾಲಿಯರ್‌ಗೆ ಹೋಗುತ್ತಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಆಗ್ರಾ ವಲಯದ ರಾಜೀವ್ ಕೃಷ್ಣ, ʼಒಟ್ಟು ಏಳುಮಂದಿ ಯಾತ್ರಾರ್ಥಿಗಳ ಮೇಲೆ ಟ್ರಕ್ ಹರಿದಿದೆ. ಅದರಲ್ಲಿ ಐದು ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದರು. ಅದರಲ್ಲೂ ಒಬ್ಬನ ಸ್ಥಿತಿ ತುಂಬ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಟ್ರಕ್ ಚಾಲಕ ತಪ್ಪಿಸಿಕೊಂಡಿದ್ದಾನೆ. ಆತನ ಸುಳಿವು ಸಿಕ್ಕಿದ್ದು, ಆದಷ್ಟು ಶೀಘ್ರ ಬಂಧಿಸುತ್ತೇವೆ ಎಂದೂ ಹೇಳಿದ್ದಾರೆ.
ಕಕ್ವರ ಯಾತ್ರೆ ಹಿಂದುಗಳು ಪವಿತ್ರ ಯಾತ್ರೆಗಳಲ್ಲಿ ಒಂದು. ದೇಶಾದೆಲ್ಲೆಡೆಯಿಂದ ಶಿವನ ಭಕ್ತರು ಹರಿದ್ವಾರ, ಗೌಮುಖ್ ಮತ್ತು ಗಂಗೋತ್ರಿಗೆ ಆಮಿಸುತ್ತಾರೆ. ಅಷ್ಟೇ ಅಲ್ಲ, ಕೆಲವರು ಬಿಹಾರದ ಸುಲ್ತಾನ್‌ಗಂಜ್‌ಗೆ ಹೋಗುತ್ತಾರೆ. ಈ ಪವಿತ್ರ ಸ್ಥಳಗಳಿಂದ ಗಂಗಾನದಿಯ ನೀರನ್ನು ತೆಗೆದುಕೊಂಡು ಹೋಗುತ್ತಾರೆ.
ಇದನ್ನೂ ಓದಿ: ದೇವಗಢದ ಬೈದ್ಯನಾಥನ ದರ್ಶನ ಮಾಡಿದ ಪ್ರಧಾನಿ ಮೋದಿ, ಏನೀ ಕಾರಣಿಕ ದೇಗುಲದ ವಿಶೇಷ?