Site icon Vistara News

Smriti Irani : ತಂದೆ ತಾಯಿ ಬೇರೆಯಾದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಸಚಿವೆ ಸ್ಮೃತಿ ಇರಾನಿ

#image_title

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಹಿಂದಿ ಕಿರುತೆರೆಯಲ್ಲಿ ಮಿಂಚಿದವರು. ʼಕ್ಯೂಕಿ ಸಾಸ್‌ ಭೀ ಕಭಿ ಬಹು ಥೀʼ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಇತ್ತೀಚೆಗೆ ತಮ್ಮ ಕುಟುಂಬದ ವಿಚಾರದಲ್ಲಿ ಒಂದಿಷ್ಟು ಮಾತನಾಡಿದ್ದಾರೆ. ತಂದೆ ತಾಯಿ ಪಟ್ಟ ಕಷ್ಟ, ಅವರು ಪ್ರತ್ಯೇಕವಾದ ವಿಚಾರವನ್ನು ಸಮಾಜದೆದುರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral News : ಅಪ್ಪ ಓದಿಕೋ ಎಂದಿದ್ದೇ ತಪ್ಪಾಯ್ತು; ನೇಣು ಬಿಗಿದುಕೊಂಡು ಮೃತಳಾದ 9 ವರ್ಷದ ಇನ್‌ಸ್ಟಾ ಕ್ವೀನ್!
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಚಿವೆ, “ನನ್ನ ತಂದೆ ಪಂಜಾಬಿ ಖಾತ್ರಿ ಆಗಿದ್ದರು. ತಾಯಿ ಬಂಗಾಳಿ ಬ್ರಾಹ್ಮಿನ್. ಅವರಿಬ್ಬರ ಮದುವೆಗೆ ಕುಟುಂಬ ಒಪ್ಪಿರಲಿಲ್ಲ. ಎಲ್ಲರ ವಿರೋಧ ಕಟ್ಟಿಕೊಂಡೇ ಮದುವೆಯಾದರು. ದನದ ಕೊಟ್ಟಿಗೆಯ ಮೇಲಿನ ಸಣ್ಣ ಕೋಣೆಯಲ್ಲಿ ಜೀವನ ಆರಂಭಿಸಿದರು. ಆಗ ಅವರ ಬಳಿ ಇದ್ದದ್ದು ಕೇವಲ 100 ರೂ. ಅದರಲ್ಲೇ ಅವರು ಪೂರ್ತಿ ಕುಟುಂಬವನ್ನು ನಿಭಾಯಿಸುತ್ತಿದ್ದರು” ಎಂದು ಹೇಳಿದ್ದಾರೆ.

“ನನ್ನ ತಂದೆ ತಾಯಿ ಬೇರಾದ ವಿಚಾರವನ್ನು ಹೇಳುವುದಕ್ಕೆ ನನಗೆ 40 ವರ್ಷಗಳು ಬೇಕಾಯಿತು. ನನ್ನ ತದೆ ಆರ್ಮಿ ಕ್ಲಬ್‌ ಎದುರು ಪುಸ್ತಕ ಮಾರಾಟ ಮಾಡುತ್ತಿದ್ದರು. ಅವರ ಜತೆ ನಾನೂ ಕುಳಿತುಕೊಳ್ಳುತ್ತಿದ್ದೆ. ಅಮ್ಮ ಮನೆ ಮನೆಗೆ ತೆರಳಿ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು. ಅಪ್ಪ ಹೆಚ್ಚು ಓದಿರಲಿಲ್ಲ. ಆದರೆ ಅಮ್ಮ ಪದವಿ ಪಡೆದವರಾಗಿದ್ದರು. ಅವರಿಬ್ಬರ ಮಧ್ಯೆ ಜಾತಿ ವಿಚಾರ, ವಿದ್ಯಾಭ್ಯಾಸ ವಿಚಾರ ಎಲ್ಲವೂ ಸಮಸ್ಯೆಯೇ ಆಗಿತ್ತು. ಆರ್ಥಿಕವಾಗಿಯೂ ಸಂಕಷ್ಟವಿತ್ತು. ಈ ಎಲ್ಲವನ್ನೂ ಗೆಲ್ಲುವುದು ಅವರಿಗೆ ಕಷ್ಟವಾಗಿತ್ತು” ಎಂದು ಆಕೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!
ಸಚಿವೆ ಸ್ಮೃತಿ ಅವರ ಈ ಸಂದರ್ಶನದ ವಿಡಿಯೊ ಎಲ್ಲೆಡೆ ಹರಿದಾಡಿದೆ. ಸಚಿವೆ ಕಂಡ ಕಷ್ಟದ ದಿನಗಳ ಬಗ್ಗೆ ಅನೇಕರು ಮರುಕ ವ್ಯಕ್ತಪಡಿಸಲಾರಂಭಿಸಿದ್ದಾರೆ.

Exit mobile version