Site icon Vistara News

ಸೋನಾಲಿ ಫೋಗಟ್​ ಮೈಮೇಲೆ ಇವೆ ಗಾಯಗಳು; ಬಾಡಿಗಾರ್ಡ್​, ಪಿಎ ವಿರುದ್ಧ ಕೇಸ್​ ದಾಖಲು

post-mortem

ಪಣಜಿ: ಗೋವಾದಲ್ಲಿ ಮೃತಪಟ್ಟಿರುವ ಹರ್ಯಾಣ ಬಿಜೆಪಿ ನಾಯಕಿ, ನಟಿ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸೋನಾಲಿ ಫೋಗಟ್​​ ಪೋಸ್ಟ್​ ಮಾರ್ಟಮ್​ ವರದಿ ಬಹಿರಂಗಗೊಂಡಿದೆ, ‘ಸೋನಾಲಿ ದೇಹದ ಮೇಲೆ ಹಲವು ಗಾಯಗಳಿವೆ. ಆದರೆ ಅವು ಯಾವವೂ ಅಷ್ಟೊಂದು ತೀವ್ರತರನಾದ ಹರಿತ ಗಾಯಗಳಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೋಸ್ಟ್​ ಮಾರ್ಟಮ್​ ರಿಪೋರ್ಟ್ ಬರುವುದಕ್ಕೂ ಮೊದಲು ಹತ್ಯೆ ಪ್ರಕರಣ ದಾಖಲಿಸಿದ್ದ ಗೋವಾ ಪೊಲೀಸರು ಇದೀಗ, ಸೋನಾಲಿ ಫೋಗಟ್​ ಬಾಡಿಗಾರ್ಡ್​ ಸುಖ್ವಿಂದರ್​ ಮತ್ತು ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್​​ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ.

ಆಗಸ್ಟ್​ 22ರಂದು ಸೋನಾಲಿ ಫೋಗಟ್​ ಗೋವಾದಲ್ಲಿ ಇದ್ದಾಗ ಸುಧೀರ್ ಸಾಂಗ್ವಾನ್​ ಮತ್ತು ಸುಖ್ವಿಂದರ್ ಸಿಂಗ್​ ಕೂಡ ಆಕೆಯೊಂದಿಗೇ ಇದ್ದರು. ಸೋನಾಲಿ ಮೃತಪಟ್ಟ ಬೆನ್ನಲ್ಲೇ ಅವರ ಕುಟುಂಬದವರು ಕೂಡ ಈ ಇಬ್ಬರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಸುಖ್ವಿಂದರ್​ ಮತ್ತು ಸುಧೀರ್​ ಇಬ್ಬರೂ ಸೇರಿ ಸೋನಾಲಿಯನ್ನು ಹತ್ಯೆಗೈದಿದ್ದಾರೆ ಎಂದು ಆಕೆಯ ಸಹೋದರ ರಿಂಕು ಢಾಕಾ ಅಂಜುನಾ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದರು.

‘ನನ್ನ ಸಹೋದರಿ ತೊಂದರೆಯಲ್ಲಿದ್ದಾಳೆ ಎಂಬುದು ನಮಗೆ ಇತ್ತೀಚೆಗೆ ಅರ್ಥವಾಗಿತ್ತು. ಸುಧೀರ್​ ಸಾಂಗ್ವಾನ್​ ಮತ್ತು ಸುಖ್ವಿಂದರ್​ ಇಬ್ಬರೂ ಹಲವು ದಿನಗಳಿಂದ ಸೋನಾಲಿ ಫೋಗಟ್​​ ರನ್ನು ಹತ್ಯೆ ಮಾಡಲು ಕಾಯುತ್ತಿದ್ದರು. ಅವರಿಬ್ಬರಿಂದ ದೂರ ಇರುವಂತೆ ನಾವೂ ಸೋನಾಲಿಗೆ ಹೇಳಿದ್ದೆವು. ಅವರೂ ಕೂಡ ತನಗಾಗುತ್ತಿರುವ ತೊಂದರೆಯನ್ನು ಪರೋಕ್ಷವಾಗಿ ಹೇಳಿಕೊಳ್ಳುತ್ತಿದ್ದಳು. ಅವರಿಬ್ಬರ ವಿರುದ್ಧ ಪೊಲೀಸ್​ ಕಂಪ್ಲೇಂಟ್​ ಕೊಡುವ ತಯಾರಿಯಲ್ಲಿ ಇದ್ದೆವು. ಆದರೆ ಅಷ್ಟರಲ್ಲಾಗಲೇ ಆಕೆಯ ಹತ್ಯೆಯಾಗಿದೆ’ ಎಂದು ರಿಂಕು ಢಾಕಾ ಪೊಲೀಸರಿಗೆ ತಿಳಿಸಿದ್ದರು. ಇನ್ನೊಂದೆಡೆ ಸೋನಾಲಿ ಸಂಬಂಧಿ ಅಮಾನ್​ ಪೂನಿಯಾ ಪ್ರತಿಕ್ರಿಯೆ ನೀಡಿ, ‘ಸುಖ್ವಿಂದರ್​ ಮತ್ತು ಸುಧೀರ್ ಸೇರಿ ಸೋನಾಲಿಗೆ ಡ್ರಗ್ಸ್​ ಕೊಟ್ಟು ಕೊಂದಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್​ ಸಾವು; ಕೊಲೆ ಪ್ರಕರಣ ದಾಖಲಿಸಿದ ಗೋವಾ ಪೊಲೀಸ್​

Exit mobile version