ನವ ದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಅನಾರೋಗ್ಯವಾಗಿದ್ದು, ಅವರು ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಗಾಂಧಿ ಜ್ವರ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ.
ಸೋನಿಯಾ ಗಾಂಧಿ ಅವರಿಗೆ ವಿಪರೀತ ಜ್ವರ ಇದ್ದು, ಅವರನ್ನು ಚೆಸ್ಟ್ ಮೆಡಿಸಿನ್ ವಿಭಾಗದ ಹಿರಿಯ ಕನ್ಸಲ್ಟಂಟ್ ಅರೂಪ್ ಬಸು ಮತ್ತು ಅವರ ತಂಡದ ಮೇಲ್ವಿಚಾರಣೆಯಲ್ಲಿ ಇದ್ದಾರೆ. ಅವರನ್ನು ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸೋನಿಯಾ ಗಾಂಧಿ ಆರೋಗ್ಯ ಜನವರಿಯಲ್ಲಿ ಏರುಪೇರಾಗಿತ್ತು. ಆಗಲೂ ಅವರನ್ನು ದೆಹಲಿ ಶ್ರೀಗಂಗಾ ರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗಲೂ ಸೋನಿಯಾ ಗಾಂಧಿಯವರ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ಇದನ್ನೂ ಓದಿ: ಪುತ್ರಿ ಪ್ರಿಯಾಂಕಾಗಾಗಿ ಇನಿಂಗ್ಸ್ ಮುಗಿಸುತ್ತಿದ್ದಾರಾ ಸೋನಿಯಾ ಗಾಂಧಿ?; 2024ರಲ್ಲಿ ಅಮ್ಮನ ಕ್ಷೇತ್ರದಿಂದ ಮಗಳ ಸ್ಪರ್ಧೆ?