Site icon Vistara News

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತೃ ವಿಯೋಗ; ಇಟಲಿಯಲ್ಲಿ ನಡೆಯಿತು ಅಂತ್ಯಕ್ರಿಯೆ

Sonia Gandhi mother Paola Maino Died

ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ಆಗಸ್ಟ್​ 27ರಂದು ಇಟಲಿಯ ಅವರ ಮನೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 90ಕ್ಕೂ ಹೆಚ್ಚು ವರ್ಷ ವಯಸ್ಸಾಗಿತ್ತು. ಮೈನೋ ಅಂತ್ಯಕ್ರಿಯೆ ಆಗಸ್ಟ್​ 30ರಂದು ನಡೆದಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್​ ರಮೇಶ್​ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಸೋನಿಯಾ ಗಾಂಧಿಯಾಗಲೀ, ಅವರ ಮಕ್ಕಳಾದ ರಾಹುಲ್​ ಗಾಂಧಿ-ಪ್ರಿಯಾಂಕಾ ಗಾಂಧಿಯಾಗಲಿ ಭಾರತದಲ್ಲಿ ಇಲ್ಲ. ಅವರು ವಿದೇಶಕ್ಕೆ ತೆರಳಿ ಆಗಲೇ ಎಂಟು ದಿನಗಳಾಗಿವೆ. ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆ-ಚಿಕಿತ್ಸೆಗಾಗಿ ಆಗಸ್ಟ್​ 24ರಂದು ವಿದೇಶಕ್ಕೆ ಹೋಗಿದ್ದಾರೆ. ಆದರೆ ಅವರು ಯಾವ ದೇಶಕ್ಕೆ ಹೋಗಿದ್ದಾರೆ ಎಂಬುದು ಖಚಿತವಾಗಿರಲಿಲ್ಲ. ಆಗಸ್ಟ್​ 27ರಂದೇ ಸೋನಿಯಾ ಗಾಂಧಿ ತಾಯಿ ಮೃತಪಟ್ಟಿದ್ದಾರೆ ಎಂದರೆ, ಖಚಿತವಾಗಿಯೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಟಲಿಯಲ್ಲೇ ಇದ್ದಾರೆ ಎಂದರ್ಥ.

ಇದನ್ನೂ ಓದಿ: Sonia Gandhi | ಮಗ, ಮಗಳ ಜತೆ ಸೋನಿಯಾ ಗಾಂಧಿ ಇಂದು ವಿದೇಶಕ್ಕೆ ಹೋಗುತ್ತಿರುವುದೇಕೆ?

Exit mobile version