Site icon Vistara News

ಆದಿತ್ಯ ಠಾಕ್ರೆ ಬೆಂಗಾವಲು ವಾಹನಕ್ಕೆ ಕಲ್ಲೆಸೆಯಲಾಗಿದೆ ಎಂದು ಆರೋಪಿಸಿದ ಶಿವಸೇನೆ ನಾಯಕ; ನಮಗೆ ಗೊತ್ತಿಲ್ಲ ಎಂದ ಪೊಲೀಸ್​

We dont burn people, its bjp's job Says Aditya Thackeray

#image_title

ಮುಂಬಯಿ: ಶಿವಸೇನೆ ಶಾಸಕ, ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದೆ. ಮಂಗಳವಾರ ಸಂಜೆ ಔರಂಗಾಬಾದ್​​ನ ವೈಜಾಪುರ ಏರಿಯಾದಲ್ಲಿ ಆದಿತ್ಯ ಠಾಕ್ರೆ ನೇತೃತ್ವದಲ್ಲಿ ಶಿವ ಸಂವಾದ ಯಾತ್ರೆ ನಡೆಯುತ್ತಿದ್ದ ವೇಳೆ ಕಲ್ಲು ಹೊಡೆಯಲಾಗಿದೆ. ವೈಜಾಪುರದ ಮಹಲ್ಗಾಂವ್ ಹಳ್ಳಿಯಲ್ಲಿ ಆದಿತ್ಯಠಾಕ್ರೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಹೊರಡುವಾಗ ಅವರ ಬೆಂಗಾವಲು ವಾಹನಗಳಿಗೆ ಕಲ್ಲು ಹೊಡೆಯಲಾಗಿದೆ ಎಂದು ಶಿವಸೇನೆ (ಉದ್ಧವ್​ ಬಾಳಾಸಾಹೇಬ್​ ಠಾಕ್ರೆ) ಬಣದ ಹಿರಿಯ ನಾಯಕ ಅಂಬಾದಾಸ್ ದಾನ್ವೆ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಅಂಬಾದಾಸ್​ ದಾನ್ವೆ ಅವರು ಮಹಾರಾಷ್ಟ್ರ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು, ‘ಉದ್ಧವ್​ ಠಾಕ್ರೆ ಸಮಾರಂಭಕ್ಕೆ ಬರುವ ಒಂದಷ್ಟು ಜನರು ಕಲ್ಲು ತೆಗೆದುಕೊಂಡು ಬಂದು, ಎಸೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಂಭೀರ ಸ್ವರೂಪದ ಭದ್ರತಾ ಉಲ್ಲಂಘನೆಯಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು’ ಆಗ್ರಹಿಸಿದ್ದಾರೆ. ಬಳಿಕ ಟ್ವೀಟ್ ಮಾಡಿದ ಅವರು ‘ಮಹಲ್ಗಾಂವ್​​ನಲ್ಲಿ ಸಾರ್ವಜನಿಕ ಸಭೆ ಮುಗಿಸಿ ಹೊರಡುವ ಹೊತ್ತಲ್ಲಿ ಒಂದಷ್ಟು ಜನರು ಮೂರ್ನಾಲ್ಕು ದೊಡ್ಡ ಕಲ್ಲುಗಳನ್ನು ಎಸೆದಿದ್ದಾರೆ’ ಎಂದು ಹೇಳಿದ್ದಾರೆ. ಸ್ಥಳೀಯ ಪೊಲೀಸ್​ ಅಧಿಕಾರಿಗಳು ಸರಿಯಾದ ಭದ್ರತೆ ಒದಗಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Delhi Terror Plot | ಶಿವಸೇನೆ, ಬಜರಂಗ ದಳ ನಾಯಕರ ಹತ್ಯೆಗೆ ಸಂಚು, 2.5 ಕೋಟಿ ರೂ. ಸುಪಾರಿ, ಇದು ಶಂಕಿತ ಉಗ್ರರು ಬಿಚ್ಚಿಟ್ಟ ಸತ್ಯ

ಹಾಗಿದ್ದಾಗ್ಯೂ ಜಿಲ್ಲಾ ಪೊಲೀಸ್​ ಅಧೀಕ್ಷಕ ಮನೀಶ್​ ಕಲ್ವಾನಿಯಾ ಅವರು ಈ ಕಲ್ಲುತೂರಾಟ ಆಗಿದ್ದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಎರಡು ಗುಂಪುಗಳು ಪರಸ್ಪರ ಘೋಷಣೆ ಕೂಗಿಕೊಂಡಿವೆ. ಆದರೆ ಆದಿತ್ಯ ಠಾಕ್ರೆ ಬೆಂಗಾವಲು ವಾಹನಗಳಿಗೆ ಕಲ್ಲು ಎಸೆದಿದ್ದು ಗೊತ್ತಿಲ್ಲ ಎಂದೂ ಹೇಳಿದ್ದಾರೆ.

Exit mobile version