Site icon Vistara News

Vande Bharat Express: ಕೇರಳದಲ್ಲಿ ವಂದೇ ಭಾರತ್​ ರೈಲಿಗೆ ಕಲ್ಲು ಎಸೆದ ಕಿಡಿಗೇಡಿಗಳು; ಕಿಟಕಿ ಗಾಜಿಗೆ ಹಾನಿ

Stones Pelt on Vande Bharat Train In Kerala

#image_title

ತಿರವನಂತಪುರ: ಕೇರಳದಲ್ಲಿ ಇತ್ತೀಚೆಗಷ್ಟೇ ಸಂಚಾರ ಪ್ರಾರಂಭಿಸಿರುವ ವಂದೇ ಭಾರತ್​ ರೈಲಿಗೆ (Vande Bharat Express) ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಇದರಿಂದಾಗಿ ಆ ರೈಲಿನ ಒಂದು ಕೋಚ್​​ನ ಕಿಟಕಿ ಒಡೆದಿದೆ. ತಿರುವನಂತಪುರಂನಿಂದ ಕೇರಳಕ್ಕೆ ಸಂಚಾರ ಮಾಡುವ ಈ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi)ಯವರು ಏಪ್ರಿಲ್​ 25ರಂದು ಹಸಿರು ನಿಶಾನೆ ತೋರಿಸಿದ್ದರು. ಅದಾಗಿ ಒಂದು ವಾರದಲ್ಲಿ ಕಲ್ಲೇಟು ಬಿದ್ದಿದೆ.

ಸೋಮವಾರ ತಿರುವನಂತಪುರಂನಿಂದ ಕಾಸರಗೋಡಿನತ್ತ ಹೊರಟಿದ್ದ ವಂದೇ ಭಾರತ್​ ರೈಲು ಸಂಜೆ 5ಗಂಟೆ ಹೊತ್ತಿಗೆ ಮಲಪ್ಪುರಂನ ತಿರೂರ್​ ರೈಲ್ವೆ ಸ್ಟೇಶನ್​ ಬಳಿ ಸಂಚಾರ ಮಾಡುತ್ತಿತ್ತು. ಈ ವೇಳೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಪ್ರಯಾಣಿಕನೊಬ್ಬ ಲೋಕೋ ಪೈಲೆಟ್ ಗಮನಕ್ಕೆ ತಂದಿದ್ದಾನೆ. ಕಲ್ಲು ತೂರಾಟವಾದ ತಕ್ಷಣ ರೈಲನ್ನು ನಿಲ್ಲಿಸದೆ, ಮುಂದೆ ಓಡಿಸಲಾಗಿದೆ. ಸದ್ಯ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ರೈಲಿಗೆ ಇನ್ನಷ್ಟು ಹೆಚ್ಚಿನ ಭದ್ರತೆ ನೀಡಲು ನಿರ್ಧಾರ ಮಾಡಿದ್ದಾರೆ ದಕ್ಷಿಣ ರೈಲ್ವೆ ಹೇಳಿಕೊಂಡಿದೆ.

ಈ ವಂದೇ ಭಾರತ್​ ರೈಲು ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್​, ಪಾಲಕ್ಕಾಡ್​, ಪತನಂತಿಟ್ಟ, ಮಲಪ್ಪುರಂ, ಕೊಯಿಕ್ಕೋಡ್ ಮತ್ತು ಕಣ್ಣೂರ್ ಸೇರಿ ಒಟ್ಟು 14 ಜಿಲ್ಲೆಗಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಆದರೆ ಮಲಪ್ಪುರಂನ ತಿರೂರ್ ರೈಲ್ವೆ ಸ್ಟೇಶನ್​ನಲ್ಲಿ ನಿಲ್ಲಿಸುತ್ತಿಲ್ಲ ಎಂದು ಅಲ್ಲಿನವರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈಲಿನ ಪ್ರಾಯೋಗಿಕ ಸಂಚಾರದಲ್ಲಿ ತಿರೂರ್​​ನಲ್ಲಿ ನಿಲುಗಡೆ ಕೊಡಲಾಗಿತ್ತು. ಆಗ ಅಲ್ಲಿನ ಜನರು ನೂತನ ರೈಲನ್ನು ಭವ್ಯವಾಗಿ ಸ್ವಾಗತ ಮಾಡಿದ್ದರು. ಮೊದಲ ದಿನ ತಿರುವನಂತಪುರಂನಿಂದ ಕಾಸರಗೋಡಿಗೆ ಹೋಗುವಾಗಲೂ ರೈಲು ಈ ಸ್ಟೇಶನ್​​ನಲ್ಲಿ ನಿಂತಿತ್ತು. ಆದರೆ ಈಗ ನಿಲ್ಲಿಸುತ್ತಿಲ್ಲ ಎಂಬುದು ಅಲ್ಲಿನವರ ಆರೋಪ.

ಇದನ್ನೂ ಓದಿ: Vande Bharat Express: ಕೇರಳದಲ್ಲಿ ಇಂದು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ; ದೇಶದ 11ನೇ ಟ್ರೇನ್​ ಇದು

ವಂದೇ ಭಾರತ್ ರೈಲುಗಳಿಗೆ ಕಲ್ಲು ತೂರುತ್ತಿರುವುದು ಇದೇ ಮೊದಲಲ್ಲ. ಏಪ್ರಿಲ್ 6ರಂದು ವಿಶಾಖಪಟ್ಟಣಂನಲ್ಲಿ ಅಲ್ಲಿನ ವಂದೇ ಭಾರತ್​ ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದರು. ಚೆನ್ನೈ-ಮೈಸೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್​ ರೈಲಿನ ಮೇಲೆ ಕೂಡ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಇದರಿಂದ ರೈಲಿನ ಆರು ಕಿಟಕಿಗಳ ಗಾಜುಗಳು ಒಡೆದಿದ್ದವು.

Exit mobile version