ಬೆಂಗಳೂರು: ಒಂದಷ್ಟು ವಿದ್ಯಾರ್ಥಿನಿಯರನ್ನೊಳಗೊಂಡ ಗುಂಪು ಪರಸ್ಪರ ಜಡೆ ಹಿಡಿದು ಬಡಿದಾಡಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಈ ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರದಲ್ಲಿದ್ದು, ಒಬ್ಬರನ್ನೊಬ್ಬರು ಬೆನ್ನಟ್ಟಿ ಹೋಗಿ ಹೊಡೆದುಕೊಂಡಿದ್ದಲ್ಲದೆ, ತಳ್ಳಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದರೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರೋಡ್‌ನಲ್ಲಿ ಘಟನೆ ನಡೆದಂತೆ ಕಾಣುತ್ತದೆ. ಇನ್ನು ಹುಡುಗಿಯರು ಧರಿಸಿದ ಸಮವಸ್ತ್ರ ಗಮನಿಸಿದರೆ ಇವರೆಲ್ಲ ಬೆಂಗಳೂರಿನ ಬಿಷಪ್ ಕಾಟನ್ ಹೆಣ್ಣುಮಕ್ಕಳ ಶಾಲೆ ವಿದ್ಯಾರ್ಥಿನಿ (Students Fight in Bengaluru) ಯರೆನಿಸುತ್ತಾರೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಆದರೆ ಈ ವಿಡಿಯೋ ಯಾವಾಗಿನದ್ದು? ಇಲ್ಲಿರುವ ಹುಡುಗಿಯರು ಅಷ್ಟು ಕ್ರೂರವಾಗಿ ಯಾಕೆ ಹೊಡೆದಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ ಆ ಹೆಣ್ಣುಮಕ್ಕಳು ತುಂಬ ಕ್ರೂರವಾಗಿ ಪರಸ್ಪರರ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಲ್ಲೊಬ್ಬಳಂತೂ, ಉಳಿದ ಹುಡುಗಿಯರಿಗೆ ಹೊಡೆಯಲೆಂದು ದೊಡ್ಡ ಬಡಿಗೆಯನ್ನೇ ಹಿಡಿದು ಬಂದಿದ್ದಾಳೆ. ಬಳಿಕ ಅಲ್ಲಿದ್ದ ಸ್ವಲ್ಪ ಜನ ಹುಡುಗರು ಆಕೆಯನ್ನು ತಡೆದಿದ್ದಾರೆ.
ವಿದ್ಯಾರ್ಥಿನಿಯರಂತೂ ತಾವೇನು ಮಾಡುತ್ತಿದ್ದೇವೆ? ಎಲ್ಲಿದ್ದೇವೆ ಎಂಬುದರ ಪರಿವೆಯೇ ಇಲ್ಲದೆ ಕಿರುಚಾಡುತ್ತ, ಅರಚಾಡುತ್ತ ಹೊಡೆದಾಡಿದ್ದಾರೆ. ಅವರನ್ನು ನೋಡಿದ ಒಂದಷ್ಟು ಜನರು ಮುಂದೆ ಬಂದು ಹೊಡೆದಾಟ ಬಿಡಿಸಿದ್ದಾರೆ. ಇದರಲ್ಲಿ ಒಂದಿಬ್ಬರು ಹುಡುಗಿಯರು ಗಾಯಗೊಂಡಿದ್ದಾರೆ. ವಿದ್ಯಾರ್ಥಿನಿಯರು ಬಿಷಪ್ ಕಾಟನ್ ಸ್ಕೂಲ್‌ನವರು ಎಂದು ಹೇಳಲಾಗುತ್ತಿದ್ದರೂ ಗಲಾಟೆ-ಹೊಡೆದಾಟದ ಬಗ್ಗೆ ಇದುವರೆಗೂ ಈ ಶಾಲೆ ಯಾವುದೇ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಈ ಮಧ್ಯೆ ಒಂದಷ್ಟು ಮಂದಿ ವಿಡಿಯೋವನ್ನು ಶೇರ್ ಮಾಡಬೇಡಿ ಎಂಬ ಮನವಿಯನ್ನೂ ಮಾಡುತ್ತಿದ್ದಾರೆ.
ಇದನ್ನೂ ಓದಿ: Video: ಒಂದೇ ಕ್ಲಾಸಲ್ಲಿ ಏಕ ಕಾಲದಲ್ಲಿ ಹಿಂದಿ-ಉರ್ದು ಪಾಠ; ಮಧ್ಯ ಮೇಜು ಬಡಿಯುವ ಶಿಕ್ಷಕಿ!