Site icon Vistara News

Sudha Murthy : ಪ್ರಜ್ಞಾನಂದನ ಮೇಲೆ ಒತ್ತಡ ಹೇರಬೇಡಿ ಎಂದು ಸುಧಾ ಮೂರ್ತಿ ಹೇಳಿದ್ದೇಕೆ?

sudha murthy and R Praggnanandhaa

ಒಂದೆಡೆ ಭಾರತ ಚಂದಿರನ ಮೇಲೆ ತನ್ನ ಬಾವುಟವನ್ನು ಹಾರಿಸಿದೆ. ಇನ್ನೊಂದೆಡೆ ಭಾರತದ 18 ವರ್ಷದ ಪ್ರಜ್ಞಾನಂದ ಚೆಸ್‌ ವರ್ಲ್ಡ್‌ ಕಪ್‌ನ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದು, ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವುದಕ್ಕೆ ಸಿದ್ಧರಾಗಿದ್ದಾರೆ. ಆದರೆ ಈ ಸಮಯದಲ್ಲಿ ಪ್ರಜ್ಞಾನಂದನ ಮೇಲೆ ಗೆಲ್ಲಲೇಬೇಕೆಂದು ಒತ್ತಡ ಹಾಕುವುದು ಸರಿಯಲ್ಲ ಎಂದು ಸುಧಾಮೂರ್ತಿ (Sudha Murthy ) ಅವರು ಸಲಹೆ ನೀಡಿದ್ದಾರೆ.

ಈ ಆಟದ ಬಗ್ಗೆ ಹಾಗೂ ಪ್ರಜ್ಞಾನಂದನ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, ” ಚೆಸ್‌ ಪಟು ಪ್ರಜ್ಞಾನಂದ ಗೆಲ್ಲಲೇಬೇಕು ಎಂದು ಹೇಳಿ ಒತ್ತಡ ಹೇರುವುದಕ್ಕೆ ನಾನು ಸಿದ್ಧನಿಲ್ಲ. ಯಾರೂ ಕೂಡ ಹಾಗೆ ಮಾಡಬಾರದು. ಅವನಿಗೆ ಅವನ ಮೆದುಳನ್ನು ಶಾಂತವಾಗಿ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಬೇಕು. ಇದು ಕ್ರೀಡೆ. ನಮಗೆ ಏನೇ ಸಿಕ್ಕರೂ ಅದನ್ನು ಸ್ವೀಕರಿಸಬೇಕು” ಎಂದು ಸುಧಾಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಹಾಗೆಯೇ, “ಗೆಲ್ಲುವುದು ಸೋಲುವುದು ದೇವರ ನಿರ್ಧಾರ. ಕ್ರೀಡೆಯನ್ನು ಒತ್ತಡದ ಆಟವಾಗಿ ಯಾವತ್ತೂ ಮಾಡಲು ಹೋಗಬಾರದು. ಕ್ರೀಡಾಪಟುಗಳು ಶಾಂತಿಯಿಂದ ಆಡುವುದಕ್ಕೆ ಅನುವು ಮಾಡಿಕೊಡಬೇಕು. ಚೆನ್ನಾಗಿ ಆಡುವವರು ಗೆಲ್ಲುತ್ತಾರೆ. ಆ ಕ್ಷಣದಲ್ಲಿ ಇನ್ನೊಬ್ಬ ಆಟಗಾರನಿಗೆ ಅದು ಮುಗಿದಿರುತ್ತದೆ. ಸಿಗಬೇಕಾದದ್ದು ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ನೀವು ಆ ಬಾಲಕನ ಮೇಲೆ ಒತ್ತಡವನ್ನು ಹೇರಬಾರದು” ಎಂದೂ ಸುಧಾಮೂರ್ತಿ ಅವರು ಹೇಳಿದ್ದಾರೆ.

ಪ್ರಜ್ಞಾನಂದ ಅವರು ವಿಶ್ವಕಪ್‌ ಚೆಸ್‌ ಟೂರ್ನಿಯ ಅಂತಿಮ ಸುತ್ತಿನ ಆಟ ಆಡುತ್ತಿದ್ದಾರೆ. ಅವರು ಮ್ಯಾಗ್ನಸ್‌ ಕಾರ್ಲಸನ್‌ ವಿರುದ್ಧ ಆಟವಾಡುತ್ತಿದ್ದು, ಎರಡು ಪಂದ್ಯ ಡ್ರಾ ಆಗಿ ಟೈ ಬೇಕರ್‌ ಹಂತಕ್ಕೆ ಹೋಗಿದೆ. ಮ್ಯಾಗ್ನಸ್‌ ಕಾರ್ಲಸನ್‌ ಅವರು ವಿಶ್ವದ ನಂಬರ್‌ 1 ಚೆಸ್‌ ಆಟಗಾರರಾಗಿದ್ದಾರೆ.

ಇದನ್ನೂ ಓದಿ: Viral News : ಅಂತ್ಯಸಂಸ್ಕಾರ ಮಾಡಲಾಗಿದ್ದ ಮಗಳು ವಿಡಿಯೊ ಕಾಲ್‌ ಮಾಡಿದಳು! ಇದೊಂದು ವಿಚಿತ್ರ ಲವ್‌ ಸ್ಟೋರಿ
ಈಗಾಗಲೇ ಅಂತಿಮ ಸುತ್ತಿನ ಎರಡು ಆಟಗಳನ್ನು ಆಡಲಾಗಿದೆ. ಎರಡರಲ್ಲೂ ಪ್ರಜ್ಞಾನಂದ ಮತ್ತು ಮ್ಯಾಗ್ನಸ್‌ ಕಾರ್ಲಸನ್‌ ಅವರು ಟೈ ಮಾಡಿಕೊಂಡಿದ್ದಾರೆ. ಹಾಗಾಗಿ ಗುರುವಾರ ಟೈ ಬ್ರೇಕರ್‌, ಎಂದರೆ ಅಲ್ಪಾವಧಿಯ ಆಟವಿರಲಿದೆ. ಇದರಲ್ಲಿ ಯಾರು ಗೆಲ್ಲುತ್ತಾರೋ ಅವರು ವಿಶ್ವಕಪ್‌ ಚೆಸ್‌ ಟೂರ್ನಿಯ ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಹಾಗಾಗಿ ಈ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.

Exit mobile version