ಹೊಸದಿಲ್ಲಿ: ಎಂಟು ಪ್ರಮುಖ ಕೇಸ್‌ಗಳ ವಿಚಾರಣೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ (Supreme Court) ಎರಡು ಸಾಂವಿಧಾನಿಕ ಪೀಠ ರಚಿಸಿದೆ. ಎಂಟೂ ಕೇಸ್‌ಗಳ ವಿಚಾರಣೆ ಮಂಗಳವಾರ ನಡೆಯಲಿದ್ದು, ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರ ಗಮನ ಸರ್ವೋಚ್ಚ ನ್ಯಾಯಾಲಯದತ್ತ ನೆಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್.ರವೀಂದ್ರ ಭಟ್, ಬೆಲಾ ಎಂ. ತ್ರಿವೇದಿ ಹಾಗೂ ಜೆ.ಬಿ.ಪರ್ದಿವಾಲಾ ಅವರು ಒಂದು ಪೀಠದಲ್ಲಿದ್ದಾರೆ. ಮತ್ತೊಂದು ಪೀಠದಲ್ಲಿ, ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯಕಾಂತ್, ಎಂ.ಎಂ.ಸುಂದ್ರೇಶ್ ಹಾಗೂ ಸುಧಾಂಶು ಧುಲಿಯಾ ಇದ್ದಾರೆ.
ಸಂವಿಧಾನದ ೧೫ ಹಾಗೂ ೧೬ನೇ ಕಲಂ ಅನ್ವಯ ಮುಸ್ಲಿಂ ಸಮುದಾಯವನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ ಎಂದು ಘೋಷಿಸುವ, ಪಂಜಾಬ್‌ನಲ್ಲಿ ಸಿಖ್ ಶೈಕ್ಷಣಿಕ ಸಂಸ್ಥೆಗಳನ್ನು “ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು” ಎಂಬುದಾಗಿ ಘೋಷಿಸಿ, ಸಿಖ್ಖರಿಗೆ ಶೇ.೫೦ರಷ್ಟು ಮೀಸಲಾತಿ ನೀಡುವ ಕುರಿತ ಅಧಿಸೂಚನೆ ರದ್ದು ಕೋರಿ ಸಲ್ಲಿಕೆಯಾಗಿರುವ ಅರ್ಜಿ, ನಿಖಾ ಹಲಾಲ ರದ್ದು ಕೋರಿ ಸಲ್ಲಿಕೆಯಾದ ಅರ್ಜಿ ಸೇರಿ ಎಂದು ಪ್ರಮುಖ ಪ್ರಕರಣಗಳ ಕುರಿತು ಮಂಗಳವಾರ ಕೋರ್ಟ್ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ | ಹಿಜಾಬ್ ವಿವಾದ: ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ, ಅರ್ಜಿದಾರರಿಗೆ ತೀವ್ರ ತರಾಟೆ