Site icon Vistara News

Supreme Court: ದ್ವೇಷ ಭಾಷಣದ ಆರೋಪ, ಹಿಂದೂ ಜನ್ ಆಕ್ರೋಶ್ ಸಭೆ ಚಿತ್ರೀಕರಿಸಲು ಕೋರ್ಟ್ ಸೂಚನೆ

Supreme Court directed the Maharashtra to videograph the Hindu Jan Aakrosh Sabha

ನವದೆಹಲಿ: ಫೆಬ್ರವರಿ 5ರಂದು ಮುಂಬೈನಲ್ಲಿ ಹಿಂದೂ ಜನ್ ಆಕ್ರೋಶ್‌ ಸಭೆಯ (Hindu Jan Akrosh Sabha) ಸಂಪೂರ್ಣ ಕಾರ್ಯಕ್ರಮವನ್ನು ವಿಡಿಯೋ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ನಿರ್ದೇಶನ ನೀಡಿದೆ. ಜನವರಿ 29ರಂದು ನಡೆದ ಸಭೆಯ ವೇಳೆ, ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಲಾಗಿತ್ತು ಎಂದು ಆರೋಪಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ದಾಖಲಿಸಿದ್ದಾರೆ. ಈ ಹಿನ್ನೆಯಲ್ಲಿ, ಸಭೆಯ ಸಂಪೂರ್ಣ ವಿಡಿಯೋ ಮಾಡುವಂತೆ ನ್ಯಾಯಾಲಯವು ಆದೇಶಿಸಿದೆ.

ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ, ಯಾವುದೇ ಕಾನೂನು ಉಲ್ಲಂಘಿಸುವ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ದ್ವೇಷದ ಭಾಷಣವನ್ನು ಮಾಡಬಾರದು ಎಂಬ ಷರತ್ತು ಹಾಕಲಾಗಿರುತ್ತದೆ ಎಂದು ಸಾಲಿಸಿಟರ್ ಜನರಲ್ (solicitor general) ಅವರ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿದೆ. ಇದೇ ವೇಳೆ, ಜನವರಿ 29ರಂದು ನಡೆದ ಸಭೆಯ ವೇಳೆ ದ್ವೇಷ ಭಾಷಣ ಮಾಡಿದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿರುದ್ಧ ಕೈಗೊಂಡ ಕಾನೂನು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ.

ಇದನ್ನೂ ಓದಿ: Azam Khan | ದ್ವೇಷ ಭಾಷಣ ಕೇಸ್‌ನಲ್ಲಿ ಜೈಲು ಶಿಕ್ಷೆ ಬೆನ್ನಲ್ಲೇ ಶಾಸಕ ಸ್ಥಾನ ಕಳೆದುಕೊಂಡ ಅಜಂ ಖಾನ್‌

ಜಸ್ಟೀಸ್ ಕೆ ಎಂ ಜೋಸೆಫ್, ಜಸ್ಟೀಸ್ ಅನಿರುದ್ಧ ಬೋಸ್ ಮತ್ತು ಜಸ್ಟೀಸ್ ಹೃಷಿಕೇಶ್ ರಾಯ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಅರ್ಜಿ ವಿಚಾರಣೆ ನಡೆಸಿತು. ಅಲ್ಲದೇ, ಕೋರ್ಟ್ ಆದೇಶದ ಹೊರತಾಗಿಯೂ ಯಾರೂ ದ್ವೇಷ ಭಾಷಣಕಾರರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಹೇಳಿತು. ಈ ಮೂಲಕ ನ್ಯಾಯಾಲಯಕ್ಕೆ ಮೇಲಿಂದ ಮೇಲೆ ಮುಜುಗರ ತರಲಾಗುತ್ತಿದೆ ಎಂದು ಹೇಳಿತು.

Exit mobile version