Site icon Vistara News

ದಿಲ್ಲಿ ಲಜಪತ್‌ನಗರ ಬಾಂಬ್ ಸ್ಫೋಟ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ ಸುಪ್ರೀಂ ಕೋರ್ಟ್

Supreme Court verdict on Article 370 and Know about this article

ನವದೆಹಲಿ: ದಿಲ್ಲಿಯ 1996ರ ಲಜಪತ್ ನಗರ ಬಾಂಬ್ ಸ್ಫೋಟ (Lajpat Nagar blast) ಪ್ರಕರಣದ ನಾಲ್ವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ (Supreme Court) ಜೀವಾವಧಿ ಶಿಕ್ಷೆಯನ್ನು (Life Imprisonment) ವಿಧಿಸಿದೆ. ಈ ಸ್ಫೋಟದಲ್ಲಿ 13 ನಾಗರಿಕರು ಮೃತಪಟ್ಟಿದ್ದರು. ಇದೊಂದು ವಿರಳಾತಿ ವಿರಳ ಘಟನೆಯಾಗಿದ್ದು, ಅಪರಾಧಿಗಳು ಮರಣದಂಡನೆಗೆ ಅರ್ಹರಾಗಿದ್ದಾರೆ. ದೀರ್ಘಾವಧಿ ವಿಚಾರಣೆಯ ಕಾರಣದಿಂದಾಗಿ ನ್ಯಾಯಾಲಯವು ಗರಿಷ್ಠ ಪ್ರಮಾಣದ ಶಿಕ್ಷೆಯಿಂದ ಹಿಂದೆ ಸರಿದಿದೆ ಎಂದು ಕೋರ್ಟ್ ಹೇಳಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಮಿರ್ಜಾ ನಿಸ್ಸಾರ್ ಹುಸೇನ್ ಮತ್ತು ಮೊಹಮ್ಮದ್ ಅಲಿ ಭಟ್ ಇಬ್ಬರನ್ನು ದಿಲ್ಲಿ ಹೈಕೋರ್ಟ್ 2012ರಲ್ಲಿ ಖುಲಾಸೆ ಮಾಡಿತ್ತು. ಅವರಿಬ್ಬರಿಗೂ ತಕ್ಷಣವೇ ಕೋರ್ಟ್‌ಗೆ ಶರಣಾಗುವಂತೆ ಜಸ್ಟೀಸ್ ಬಿ ಆರ್ ಗವಾಯಿ, ಜಸ್ಟೀಸ್ ವಿಕ್ರಮ್ ನಾಥ್, ಸಂಜಯ್ ಕರೋಲ್ ಅವರಿದ್ದ ಪೀಠವು ಆದೇಶಿಸಿತು. ಇದೇ ವೇಳೆ, ಮೊಹಮ್ಮದ್ ನೌಷಾದ್ ಮತ್ತು ಜಾವೇದ್ ಅಹ್ಮದ್ ಖಾನ್‌ಗೆ ದಿಲ್ಲಿ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪೀಠವು ಎತ್ತಿ ಹಿಡಿಯಿತು.

ಮುಗ್ಧ ಜನರ ಸಾವಿಗೆ ಕಾರಣವಾಗುವ ಅಪರಾಧದ ತೀವ್ರತೆ ಮತ್ತು ಈ ಅಪರಾಧದಲ್ಲಿ ಪ್ರತಿ ಆರೋಪಿಯ ಪಾತ್ರವನ್ನು ಗಣನೆಗೆ ತೆಗೆದುಕೊಂಡು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಯಾವುದೇ ರಿಯಾಯ್ತಿ ಇಲ್ಲದೇ ಶಿಕ್ಷೆಯನ್ನು ನೀಡಲಾಗಿದೆ ಎಂದು 190 ಪುಟಗಳ ತೀರ್ಪಿನಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Teesta Setalvad: ಮೋದಿ ವಿರುದ್ಧ ಷಡ್ಯಂತ್ರ; ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು

2010ರಲ್ಲೇ ಟ್ರಯಲ್ ಕೋರ್ಟ್ ನೌಷಾದ್‌ಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ, ದಿಲ್ಲಿ ಹೈಕೋರ್ಟ್ ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಆದರೆ, ಜಾವೇದ್ ಖಾನ್‌ಗೆ ಟ್ರಯಲ್ ಕೋರ್ಟ್ ಮತ್ತು ದಿಲ್ಲಿ ಹೈಕೋರ್ಟ್ ಎರೂಡ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದವು. 1996 ಮೇ 21ರಂದು ದಿಲ್ಲಿ ಲಜಪತ್ ನಗರದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಕಳವು ಮಾಡಲಾದ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಈ ಬಾಂಬ್ ಸ್ಫೋಟದಲ್ಲಿ ಕನಿಷ್ಠ 13 ಜನರು ಮೃತಪಟ್ಟು 38ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version