Site icon Vistara News

BBC Documentary: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಸರಿಯೋ? ತಪ್ಪೋ?; ಸುಪ್ರೀಂಕೋರ್ಟ್​​ನಲ್ಲಿ ಇಂದು ವಿಚಾರಣೆ

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: 2002ರಲ್ಲಿ ನಡೆದಿದ್ದ ಗೋದ್ರಾ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿಯವರು ತಪ್ಪಿತಸ್ಥರು ಎಂಬಂತೆ ಬಿಂಬಿಸಿ ಚಿತ್ರಿಸಲಾದ ಬಿಬಿಸಿ ಡಾಕ್ಯುಮೆಂಟರಿ(BBC Documentary)ಗೆ ದೇಶದೊಳಗೇ ಮಿಶ್ರಪ್ರತಿಕ್ರಿಯೆ ಬರುತ್ತಿದೆ. ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್​​ಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ಈಗಾಗಲೇ ಯೂಟ್ಯೂಬ್​, ಟ್ವಿಟರ್​ ಸೇರಿ ಮತ್ತಿತರ ಸಾಮಾಜಿಕ ಮಾಧ್ಯಮಗಳಿಗೂ ಸೂಚನೆ ನೀಡಿದೆ. ಆದರೆ ಮತ್ತೊಂದು ಕಡೆ, ವಿವಿಧ ಯೂನಿವರ್ಸಟಿಗಳಲ್ಲಿ ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವಶ್ಚನ್​’ ಡಾಕ್ಯುಮೆಂಟರಿ ಪ್ರದರ್ಶನ ನಡೆಯುತ್ತಲೇ ಇದೆ. ಇಷ್ಟೆಲ್ಲದರ ಮಧ್ಯೆ ಬಿಬಿಸಿ ಡಾಕ್ಯುಮೆಂಟರಿ ನಿಷೇಧದ ಕುರಿತು ಇಂದು ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ.

ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪತ್ರಕರ್ತ ಎನ್​.ರಾಮ್​, ವಕೀಲರಾದ ಪ್ರಶಾಂತ್ ಭೂಷಣ್​ ಮತ್ತು ಎಂ.ಎಲ್​.ಶರ್ಮಾ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ.ಎಂ.ಸುಂದರೇಶ್​ ಅವರನ್ನೊಳಗೊಂಡ ಪೀಠ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

‘ಇಂಡಿಯಾ: ದಿ ಮೋದಿ ಕ್ವಶ್ಚನ್​ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿಷೇಧ ಮಾಡಲು ಹೊರಟಿದ್ದು ಅಸಾಂವಿಧಾನಿಕ ಮತ್ತು ದುರುದ್ದೇಶಪೂರಿತ ನಿರ್ಧಾರ. ಕೇಂದ್ರದ ನಿರಂಕುಶ ಆಡಳಿತಕ್ಕೆ ಇದು ಸಾಕ್ಷಿ. ಯಾವುದೇ ಕಾರಣಕ್ಕೂ ಸಾಕ್ಷ್ಯ ಚಿತ್ರ ನಿರ್ಬಂಧಿಸಬಾರದು ಎಂದು ವಕೀಲರಾದ ಎಂ.ಎಲ್​.ಶರ್ಮಾ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗೇ, ‘ಟ್ವಿಟರ್​, ಯೂಟ್ಯೂಬ್​​ಗಳಿಂದ ಸಾಕ್ಷ್ಯಚಿತ್ರದ ಲಿಂಕ್​ ತೆಗೆಸಿದ್ದನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್​ ಮತ್ತು ಹಿರಿಯ ಪತ್ರಕರ್ತ ಎನ್​.ರಾಮ್ ಅರ್ಜಿ ಸಲ್ಲಿಸಿದ್ದಾರೆ. ಹಾಗೇ, ಈ ಬಗ್ಗೆ ತಾವು ಮಾಡಿದ್ದ ಟ್ವೀಟ್ ಕೂಡ ಡಿಲೀಟ್​ ಆಗಿದ್ದರ ಬಗ್ಗೆ ಅರ್ಜಿಯಲ್ಲಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BBC Documentary: ಚೀನಾ ಹಣಕ್ಕಾಗಿ ಮೋದಿ ವಿರುದ್ಧ ಬಿಬಿಸಿ ಡಾಕ್ಯುಮೆಂಟರಿ; ಬಿಜೆಪಿ ಸಂಸದ ಮಹೇಶ್‌ ಜೇಠ್ಮಲಾನಿ ಆರೋಪ

ಬಿಬಿಸಿಯ ಇಂಡಿಯಾ; ದಿ ಮೋದಿ ಕ್ವಶ್ಚನ್​ ಡಾಕ್ಯುಮೆಂಟರಿ ಎರಡು ಭಾಗಗಳಿದ್ದು, ಮೊದಲ ಬಾರಿ ಬಿಡುಗಡೆಯಾದಾಗಿನಿಂದಲೂ ವಿವಾದ ಸೃಷ್ಟಿಯಾಗಿದೆ. ಗೋದ್ರಾ ಹತ್ಯಾಕಾಂಡ ನಡೆಯುವಾಗ ಗುಜರಾತ್​​ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ಇದಕ್ಕೆ ಹೊಣೆ ಎಂದು ಸಾಕ್ಷ್ಯಚಿತ್ರದಲ್ಲಿ ಬಿಂಬಿಸಿದ್ದನ್ನು ಕೇಂದ್ರ ಸರ್ಕಾರ ಖಂಡಿಸಿದೆ. ಈ ಕೇಸ್​​ನಲ್ಲಿ ಸುಪ್ರೀಂಕೋರ್ಟ್​​ ಕೂಡ ನರೇಂದ್ರ ಮೋದಿಯವರಿಗೆ ಕ್ಲೀನ್​ಚಿಟ್​ ಕೊಟ್ಟಾದ ಮೇಲೆ ಬಿಬಿಸಿ ಇಂಥದ್ದೊಂದು ಡಾಕ್ಯುಮೆಂಟರಿ ನಿರ್ಮಿಸಿದ್ದು ತಪ್ಪು ಎಂದು ಹೇಳಿದೆ.

Exit mobile version