Site icon Vistara News

Supreme Court | ಕೋರ್ಟ್‌ ಕಲಾಪಗಳಿಗೆ ಸಿಜೆಐ ಲಲಿತ್‌ ಶರವೇಗ, 4 ದಿನದಲ್ಲಿ 1,800 ಕೇಸ್‌ ವಿಲೇವಾರಿ!

CJI Lalit

ನವದೆಹಲಿ: ದೇಶದಲ್ಲಿ ನ್ಯಾಯದಾನ ನಿಧಾನ ಎಂಬ ಮಾತಿದೆ. ತಾಲೂಕು, ಜಿಲ್ಲೆ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌‌ (Supreme Court) ಮೆಟ್ಟಿಲೇರುವ ಪ್ರಕರಣಗಳ ವಿಲೇವಾರಿಗೆ ವರ್ಷಗಟ್ಟಲೆ ಬೇಕಾಗುತ್ತದೆ. ಆದರೆ, ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಿರುವ ಉದಯ್‌ ಉಮೇಶ್‌ ಲಲಿತ್‌ ಅವರು ಕೋರ್ಟ್‌ ಕಲಾಪಗಳಿಗೆ ಶರವೇಗ ನೀಡಿದ್ದಾರೆ.

ನ್ಯಾಯಮೂರ್ತಿ ಯು.ಯು.ಲಲಿತ್‌ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ಮೊದಲ ನಾಲ್ಕು ದಿನಗಳಲ್ಲಿ (4 Working Days) 1,800 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈ ಕುರಿತು ವಕೀಲರ ಜತೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಜೆಐ ಲಲಿತ್‌ ಅವರೇ ಮಾಹಿತಿ ನೀಡಿದ್ದಾರೆ.

“ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಕರಣಗಳ ವಿಚಾರಣೆಗೆ ವೇಗ ನೀಡಿದ್ದೇನೆ. ಮೊದಲಿಗಿಂತ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ನನ್ನ ಪ್ರಧಾನ ಕಾರ್ಯದರ್ಶಿ ಅವರು ನೀಡಿದ ಮಾಹಿತಿ ಪ್ರಕಾರ ನಾಲ್ಕು ದಿನದಲ್ಲಿ ೧,೮೦೦ ಕೇಸ್‌ಗಳ ವಿಲೇವಾರಿ ಮಾಡಲಾಗಿದೆ. ಆಗಸ್ಟ್‌ ೨೯ರಂದು ೪೯೩ ಕೇಸ್‌ಗಳನ್ನು ವಿಲೇವಾರಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | ಸುಪ್ರೀಂಕೋರ್ಟ್​ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್​ ಉಮೇಶ್ ಲಲಿತ್​​ ಪ್ರತಿಜ್ಞಾ ವಿಧಿ ಸ್ವೀಕಾರ

Exit mobile version