Site icon Vistara News

Pralhad Joshi: ಕೇಂದ್ರದ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ; 1.3 ಕೋಟಿ ಜನರಿಂದ ನೋಂದಣಿ

Surya Ghar Long Term Free Power scheme 1 3 crore registration says Minister Pralhad Joshi

ನವದೆಹಲಿ: ಸೂರ್ಯ ಘರ್ ದೀರ್ಘಾವಧಿಯ ಉಚಿತ ವಿದ್ಯುತ್ ಯೋಜನೆಯಾಗಿದ್ದು, ಈಗಾಗಲೇ 1.3 ಕೋಟಿ ಜನರು ನೋಂದಣಿ ಮಾಡಿಸಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು.

ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ವಿವರಿಸಿದ ಸಚಿವರು, ಫೆ.29ರಂದು ಆರಂಭಿಸಿದ ಸೂರ್ಯ ಘರ್ ಯೋಜನೆ ಅನುಷ್ಠಾನ ಕಳೆದೊಂದು ತಿಂಗಳಿಂದ ಚುರುಕಾಗಿದೆ. ಇದು ಬಡವರಿಗೆ ಮತ್ತು ಮಾಧ್ಯಮ ವರ್ಗಕ್ಕೆ ಅತ್ಯುಪಯುಕ್ತ ಯೋಜನೆಯಾಗಿದೆ ಎಂದರು.

ಸೂರ್ಯ ಘರ್ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಬೇರೆ ವಿಭಾಗಗಳಿಲ್ಲ. ಸೌರಶಕ್ತಿ ಘಟಕ ಸ್ಥಾಪಿಸಲು ಬಯಸುವ ಎಲ್ಲರಿಗೂ ಬೆಂಬಲ ನೀಡುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ತ್ವರಿತವಾಗಿ ಜಾರಿಗೆ ತರಲು ಡಿಸ್ಕಾಮ್‌ಗಳಿಗೆ ನಿರ್ದೇಶಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

ಈ ಯೋಜನೆಯಡಿ 3 KW ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ 78,000 ರೂ. ಸಬ್ಸಿಡಿ ನೀಡುತ್ತಿದೆ. ಜತೆಗೆ ಬ್ಯಾಂಕ್ ಸಾಲ ಸೌಲಭ್ಯವೂ ಇರುತ್ತದೆ ಎಂದು ಹೇಳಿದರು. ಸಾಮಾನ್ಯವಾಗಿ 3 KW ಘಟಕ 300 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಸೂರ್ಯ ಘರ್‌ ಘಟಕಕ್ಕೆ ಮೇಲ್ಛಾವಣಿ ಸ್ಥಾಪನೆಗೆ 1.5 ಲಕ್ಷ ರೂ. ವೆಚ್ಚವಾಗಲಿದೆ. 78,000 ರೂ. ಸಬ್ಸಿಡಿ ಲಭ್ಯವಿದ್ದು, ಉಳಿದ ಬಂಡವಾಳಕ್ಕೆ ಫಲಾನುಭವಿಗಳು ಬ್ಯಾಂಕ್ ಸಾಲ ಪಡೆಯಬಹುದು. 300 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸಿದಲ್ಲಿ, ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್‌ಗಳಿಗೆ ಮಾರಾಟ ಮಾಡಿ ಹಣ ಪಡೆದುಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಇದನ್ನೂ ಓದಿ: Paris Olympics 2024: ಪರ್‌ಫೆಕ್ಟ್‌ ಕ್ಲಿಕ್‌ ಎಂದರೆ ಇದು; ಭಾರಿ ಸದ್ದು ಮಾಡುತ್ತಿದೆ ಒಲಿಂಪಿಕ್ಸ್‌ನ ಈ ವೈರಲ್‌ ಫೋಟೊ

ಸಾಮಾನ್ಯ 5 ಜನರಿರುವ ಮಧ್ಯಮ ವರ್ಗದವರ ಮನೆಗಳಿಗೆ 300 ಯೂನಿಟ್ ವಿದ್ಯುತ್ ಸಾಕಷ್ಟಾಗುತ್ತದೆ ಎಂದು ಅಭಿಪ್ರಾಯ ಮಂಡಿಸಿದ ಸಚಿವರು, ಡಿಸ್ಕಾಮ್‌ಗಳು ನವೀಕರಿಸಬಹುದಾದ ಇಂಧನವನ್ನು ಖರೀದಿಸುವ ಬಾಧ್ಯತೆ ಹೊಂದಿದ್ದು, ಇದಕ್ಕಾಗಿ ಕುಟುಂಬಗಳಿಗೆ ಮರುಪಾವತಿ ಮಾಡಲಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ಅದು ಮಧ್ಯಮವರ್ಗಕ್ಕೆ ಉಚಿತವಾಗುತ್ತದೆ ಎಂದು ತಿಳಿಸಿದರು.

Exit mobile version