Site icon Vistara News

Swami Nithyananda: ಸ್ವಾಮಿ ನಿತ್ಯಾನಂದನ ‘ಕೈಲಾಸ ದೇಶ’ಕ್ಕೆ ನಟಿ ರಂಜಿತಾಳೇ ಪ್ರಧಾನಿ!

Swami Nityanand and Ranjitha

ನವದೆಹಲಿ: ದೇಶ ತೊರೆದಿರುವ ಮತ್ತು ಅತ್ಯಾಚಾರ ಸೇರಿದಂತೆ ಹಲವು ಪ್ರಕರಣ ವಿಚಾರಣೆಯನ್ನು ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ (Swami Nithyananda), ತನ್ನ ‘ಕೈಲಾಸ ದೇಶ’ಕ್ಕೆ (Kailas Desa) ಮಾಜಿ ನಟಿ ರಂಜಿತಾ (Ranjitha) ಅವರನ್ನು ‘ಪ್ರಧಾನಿ’ಯನ್ನಾಗಿ (Prime Minister) ನೇಮಕ ಮಾಡಿದ್ದಾನೆಂದು ತಮಿಳುನಾಡಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ವಿವಾದಿತ ಸ್ವಾಮಿ ನಿತ್ಯಾನಂದ ಭಾರತದಿಂದ ಪಲಾಯನ ಮಾಡಿ, ಈಕ್ವೆಡಾರ್ ಕರಾವಳಿಯ ಸಣ್ಣ ದ್ವೀಪವನ್ನೇ ತನ್ನ ದೇಶವನ್ನಾಗಿ ಮಾಡಿಕೊಂಡಿದ್ದಾನೆ.

ಸ್ವಾಮಿ ನಿತ್ಯಾನಂದನಿಗೆ ಸೇರಿದ ವೆಬ್‌ಸೈಟ್‌ನಲ್ಲಿ ರಂಜಿತಾಳನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿರುವುದನ್ನು ಘೋಷಣೆ ಮಾಡಲಾಗಿದೆ. ಈ ವೆಬ್‌ಸೈಟ್‌ನಲ್ಲಿ ನಿತ್ಯಾನಂದಮಯಿ ಸ್ವಾಮಿ ಹೆಸರಿನ ತನ್ನ ಇಮೇಜ್ ಜತೆಗೆ ರಂಜಿತಾ ಅವರ ಚಿತ್ರವೂ ಇದ್ದು, ಅದಕ್ಕೆ ಕೈಲಾಸದ ಪ್ರಧಾನಿ ಎಂದು ಶೀರ್ಷಿಕೆ ನೀಡಲಾಗಿದೆ. ಕೈಲಾಸ ಎನ್ನುವುದು ನಿತ್ಯಾನಂದನ ಸ್ವಘೋಷಿತ ದೇಶವಾಗಿದ್ದು, ಅದಕ್ಕೆ ಯಾವುದೇ ಅಂತಾರಾಷ್ಟ್ರೀಯ ಮಾನ್ಯತೆ ಇಲ್ಲ.

ಈ ಹಿಂದೆ ನಟಿ ರಂಜಿತಾ ಮತ್ತು ನಿತ್ಯಾನಂದನ ಲೈಂಗಿಕ ದೃಶ್ಯಗಳ ವಿಡಿಯೋ ಸೋರಿಕೆಯಾಗಿ ಭಾರೀ ಸುದ್ದಿಯಾಗಿತ್ತು. ಅಲ್ಲದೇ ನಿತ್ಯಾನಂದ ತನ್ನ ಭಕ್ತರ ಮೇಲೆ ಅತ್ಯಾಚಾರ ನಡೆಸಿದ ಆರೋಪಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಈ ಹಂತದಲ್ಲಿ ಸ್ವಾಮಿ ನಿತ್ಯಾನಂದ ದೇಶದಿಂದ ಪಲಾಯನ ಮಾಡಿ, ಈಕ್ವೆಡಾರ್‌ನಲ್ಲಿ ಸಣ್ಣ ದ್ವೀಪ ಖರೀದಿಸಿ, ಅದನ್ನೇ ತನ್ನ ದೇಶ ಎಂದು ಕರೆದುಕೊಂಡಿದ್ದಾನೆ. ಈಗ ಆ ದೇಶಕ್ಕೆ ರಂಜಿತಾಳನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾನೆ.

10ನೇ ತರಗತಿಯಲ್ಲೇ ರಂಜಿತಾ ಮೇಲೆ ಲವ್

ನಟ ಅಶೋಕ್‌ ಕುಮಾರ್ (Actor Ashok Kumar) ಸಂದರ್ಶನವೊಂದರಲ್ಲಿ, ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ ಬಳಿಕ ರಂಜಿತಾ ಹಾಗೂ ನಿತ್ಯಾನಂದ ಲವ್‌ ಸ್ಟೋರಿ ಸಖತ್‌ ಚರ್ಚೆಯಾಗುತ್ತಿದೆ. ಈ ಹಿಂದೆ ನಿತ್ಯಾನಂದ ಹಾಗೂ ರಂಜಿತಾ ಸ್ಟೋರಿ ಸುದ್ದಯಲ್ಲಿತ್ತು. ನಿತ್ಯಾನಂದ 10ನೇ ತರಗತಿಯಲ್ಲಿ ಇದ್ದಾಲೇ ರಂಜಿತಾಗೆ ಮನಸೋತಿರುವ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

ಅಶೋಕ್‌ ಕುಮಾರ್ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ನಟ, ವಿಲನ್ ಆಗಿ ಅಭಿನಯಿಸಿದ್ದಾರೆ. ಅಷ್ಟಾಗಿ ಅವಕಾಶ ಸಿಗದ ಕಾರಣದಿಂದ ಚಿತ್ರರಂಗದಿಂದ ದೂರ ಸರಿದ್ದರು. ಆದರೆ ಅಶೋಕ್ ಕುಮಾರ್ ಅವರ ಎರಡನೇ ಪುತ್ರಿ ರಂಜಿತಾ ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ ‘ನಾಡೋಡಿ ತೆಂಡ್ರಲ್’ನಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಸಿನಿಮಾ ನಿತ್ಯಾನಂದನನ್ನು ಹುಚ್ಚನನ್ನಾಗಿ ಮಾಡಿದ್ದಂತೆ.

ಈ ಸುದ್ದಿಯನ್ನೂ ಓದಿ: Swami Nityananda: ನಮ್ಮದು ಗಡಿಯೇ ಇಲ್ಲದ ದೇಶ, ನಾನು ಹಿಂದು ಧರ್ಮದ ಗುರು; ನಿತ್ಯಾನಂದ ಘೋಷಣೆ

ನಿತ್ಯಾನಂದ 10ನೇ ತರಗತಿಯಲ್ಲೇ ರಂಜಿತಾ ಮೇಲೆ ಲವ್ ಆಗಿದ್ದಂತೆ. ನಿತ್ಯಾನಂದ 10ನೇ ತರಗತಿ ಓದುವಾಗ ‘ನಾಡೋಡಿ ತೆಂಡ್ರಲ್’ (nadodi thendral) ರಿಲೀಸ್ ಆಗಿತ್ತು. ಈ ಸಿನಿಮಾ ನೋಡಿದ್ದಾಗಿನಿಂದ ನಿತ್ಯಾನಂದ ರಂಜಿತಾ ಜಪಾ ಮಾಡಲು ಶುರು ಮಾಡಿದ್ದಲ್ಲದೇ ಬ್ಯಾಗ್‌ನಲ್ಲಿ ರಂಜಿತಾ ಫೋಟೊಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದ ಎಂದು ವರದಿಯಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version